ಆರ್ಟೆಮಿಸ್–2 ಯಶಸ್ವಿ ಪೂರ್ಣಗೊಳಿಸಿ ಭೂಮಿಗೆ ಮರಳಿದ ಗಗನಯಾತ್ರಿಗಳು
ವಾಷಿಂಗ್ಟನ್, 11 ಏಪ್ರಿಲ್ (ಹಿ.ಸ.) : ಆ್ಯಂಕರ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸಿದ ಆರ್ಟೆಮಿಸ್–2 ಚಂದ್ರ ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಲ್ವರು ಗಗನಯಾತ್ರಿಗಳು 10 ದಿನಗಳ ಐತಿಹಾಸಿಕ ಪ್ರಯಾಣದ ಬಳಿಕ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಈ ಮಿಷನ್ನಲ್ಲಿ ಕಮಾಂಡರ್ ರೀಡ್ ವೈಸ್ಮ
ARTEMIS-2-SUCCESSFUL


ವಾಷಿಂಗ್ಟನ್, 11 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸಿದ ಆರ್ಟೆಮಿಸ್–2 ಚಂದ್ರ ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಲ್ವರು ಗಗನಯಾತ್ರಿಗಳು 10 ದಿನಗಳ ಐತಿಹಾಸಿಕ ಪ್ರಯಾಣದ ಬಳಿಕ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

ಈ ಮಿಷನ್ನಲ್ಲಿ ಕಮಾಂಡರ್ ರೀಡ್ ವೈಸ್ಮನ್, ಪೈಲಟ್ ವಿಕ್ಟರ್ ಗ್ಲೋವರ್, ಮಿಷನ್ ಸ್ಪೆಷಲಿಸ್ಟ್ಗಳು ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಭಾಗವಹಿಸಿದ್ದರು. ಇವರನ್ನು ಹೊತ್ತ ಓರಿಯನ್ ಬಾಹ್ಯಾಕಾಶ ನೌಕೆ ಪೆಸಿಫಿಕ್ ಮಹಾಸಾಗರದಲ್ಲಿ ಯಶಸ್ವಿಯಾಗಿ ಇಳಿಯಿತು. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಸಮೀಪ ಸ್ಥಳೀಯ ಸಮಯ ರಾತ್ರಿ ಸುಮಾರು 8:07ಕ್ಕೆ (ಭಾರತೀಯ ಕಾಲಮಾನ ಬೆಳಿಗ್ಗೆ 5:37) ಇಳಿಯುವಿಕೆ ನಡೆದಿದೆ.

ಈ ಮಹತ್ವದ ಮಿಷನ್ ಏಪ್ರಿಲ್ 1ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರ ನಿಂದ ಪ್ರಾರಂಭವಾಗಿತ್ತು. ಮಿಷನ್ ಯಶಸ್ಸಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿನಂದನೆ ತಿಳಿಸಿದ್ದಾರೆ.

ನಾಸಾ ಹಂಚಿಕೊಂಡ ವೀಡಿಯೊದಲ್ಲಿ “ರೀಡ್, ವಿಕ್ಟರ್, ಕ್ರಿಸ್ಟಿನಾ ಮತ್ತು ಜೆರೆಮಿ—ಮನೆಗೆ ಸ್ವಾಗತ” ಎಂದು ಬರೆಯಲಾಗಿದೆ. ಈ ಮೂಲಕ ಗಗನಯಾತ್ರಿಗಳು ತಮ್ಮ 10 ದಿನಗಳ ಐತಿಹಾಸಿಕ ಮಿಷನ್ನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.

ವಿಶೇಷವಾಗಿ, ಇದು ಅಪೋಲೋ 17 ಚಂದ್ರಯಾನ ಮಿಷನ್ ನಂತರ ಚಂದ್ರನ ಸುತ್ತಮುತ್ತ ನಡೆದ ಮೊದಲ ಮಾನವ ಮಿಷನ್ ಆಗಿದೆ. ಮಿಷನ್ ಅವಧಿಯಲ್ಲಿ ಗಗನಯಾತ್ರಿಗಳು ಒಟ್ಟು 6.9 ಲಕ್ಷ ಮೈಲಿಗೂ ಹೆಚ್ಚು ದೂರ ಪ್ರಯಾಣ ಮಾಡಿದ್ದಾರೆ.

ಮುಂದಿನ ಹಂತವಾಗಿ, ಆರ್ಟೆಮಿಸ್ ೩ ಮಿಷನ್ಗೆ ಸಿದ್ಧತೆಗಳು ನಡೆಯುತ್ತಿವೆ. ಪ್ರಸ್ತುತ ಮಿಷನ್ನಲ್ಲಿ ಚಂದ್ರನ ಸುತ್ತ ಹಾದುಹೋದ ಗಗನಯಾತ್ರಿಗಳು, ಮುಂದಿನ ಮಿಷನ್ನಲ್ಲಿ ನೇರವಾಗಿ ಚಂದ್ರನ ಮೇಲೆ ಇಳಿಯಲಿದ್ದಾರೆ ಎಂಬುದು ಗಮನಾರ್ಹ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande