ಜನನಾಯಗನ್ ಸಿನಿಮಾ ಸೋರಿಕೆ ; ರಿಷಭ್ ಶೆಟ್ಟಿ ಆಕ್ರೋಶ
ಬೆಂಗಳೂರು, 11 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕನ್ನಡ ಚಿತ್ರರಂಗದ ಪ್ರಮುಖ ನಟ-ನಿರ್ದೇಶಕ ರಿಷಭ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿನಿಮಾ ಸೋರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನನಾಯಗನ್ ಚಿತ್ರದ ದೃಶ್ಯಗಳು ಸೋರಿಕೆಯಾಗಿರುವ ಹಿನ್ನೆಲೆ ತಮ್ಮ ಅಭಿಪ್ರಾಯ ಹಂಚಿಕೊಂಡಿ
ರಿಷಭ್ ಶೆಟ್ಟಿ


ಬೆಂಗಳೂರು, 11 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕನ್ನಡ ಚಿತ್ರರಂಗದ ಪ್ರಮುಖ ನಟ-ನಿರ್ದೇಶಕ ರಿಷಭ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿನಿಮಾ ಸೋರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನನಾಯಗನ್ ಚಿತ್ರದ ದೃಶ್ಯಗಳು ಸೋರಿಕೆಯಾಗಿರುವ ಹಿನ್ನೆಲೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, “ಸಿನಿಮಾ ಉತ್ಸಾಹ, ಕನಸುಗಳು ಮತ್ತು ಪ್ರೀತಿಯ ಮೇಲೆ ನಿರ್ಮಿತವಾಗಿದೆ. ಪ್ರೇಕ್ಷಕರಿಗೆ ಮನರಂಜನೆ ನೀಡಲು ಅನೇಕ ಜನರು ಶ್ರಮಿಸುತ್ತಾರೆ. ಆ ಪ್ರಯತ್ನವನ್ನು ಯಾರಾದರೂ ಹಾಳುಮಾಡಲು ಯತ್ನಿಸಿದಾಗ, ಅದು ಎಲ್ಲರ ಮೇಲೂ ಆಳವಾದ ಪರಿಣಾಮ ಬೀರುತ್ತದೆ” ಎಂದು ತಿಳಿಸಿದ್ದಾರೆ.

ಸೋರಿಕೆ ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ಇದು ಗಂಭೀರ ಹಾಗೂ ಸ್ವೀಕಾರಾರ್ಹವಲ್ಲದ ಕೃತ್ಯ. ಪ್ರೇಕ್ಷಕರಾಗಿ ದಯವಿಟ್ಟು ನಮ್ಮ ಪ್ರಯತ್ನಗಳನ್ನು ಗೌರವಿಸಿ, ಸೋರಿಕೆಯಾದ ದೃಶ್ಯಗಳನ್ನು ಹಂಚಿಕೊಳ್ಳಬೇಡಿ” ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ, “ಇಂತಹ ಕೃತ್ಯಗಳು ಮುಂದಿನ ದಿನಗಳಲ್ಲಿ ಉತ್ತಮ ಸಿನಿಮಾಗಳ ನಿರ್ಮಾಣಕ್ಕೆ ಅಡ್ಡಿಯಾಗಬಹುದು. ಈ ಸಂಕಷ್ಟದ ಸಮಯದಲ್ಲಿ ನಾನು ಇಡೀ ತಂಡ ಮತ್ತು ಕೆವಿಎನ್ ಪ್ರೊಡಕ್ಷನ್ ಜೊತೆ ನಿಂತಿದ್ದೇನೆ. ನಮ್ಮ ಸಿನಿಮಾ ಕುಟುಂಬವನ್ನು ರಕ್ಷಿಸಿ” ಎಂದು ಕರೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande