ಮಾದಕವಸ್ತುಗಳ ಕಾಯ್ದೆಯಡಿ ಕೆಜಿಎಫ್ ಪೊಲೀಸರಿಂದ ಮೂವರು ಆರೋಪಿಗಳ ಬಂಧನ
ಮಾದಕವಸ್ತುಗಳ ಕಾಯ್ದೆಯಡಿ ಕೆಜಿಎಫ್ ಪೊಲೀಸರಿಂದ ಮೂವರು ಆರೋಪಿಗಳ ಬಂಧನ
ಕೆಜಿಎಫ್ ನಗರದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಗಳು.


ಕೋಲಾರ, ೧೦ ಏಪ್ರಿಲ್ (ಹಿ.ಸ) :

ಆ್ಯಂಕರ್ : ಕೆ.ಜಿ.ಎಫ್ ಪೊಲೀಸ್ ಘಟಕದಲ್ಲಿ ಮಾದಕ ವಸ್ತುಗಳ ಸೇವನೆಯನ್ನು ಮುಕ್ತಗೊಳಿಸುವ ಸಲುವಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸರು ನಿಗಾವಹಿಸಿ ಮಾದಕ ವಸ್ತುಗಳ ಮಾರಾಟ, ಸಾಗಾಣಿಕೆ, ಸೇವನೆ, ಉತ್ಪಾದನೆ ಮಾಡುವವರ ಮತ್ತು ಮಾದಕ ವಸ್ತುಗಳ ಚಟುವಟಿಕೆಗಳಲ್ಲಿ ಬಾಗಿಯಾಗುವವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಮೂವರು ಆರೋಪಿಗನ್ನು ಬಂಧಿಸಲಾಗಿದೆ.

ರಾಬರ್ಟಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಡಾನ್ಬಾಸ್ಕೊ ಐ.ಟಿ.ಐ ಕಾಲೇಜಿನ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ರಾಹುಲ್ ದ್ರಾವಿಡ್ (೨೬ ವರ್ಷ) ರವರ ಮನೆಯ ಮೇಲೆ ದಾಳಿ ಮಾಡಿ ೨೧೫ ಗ್ರಾಂ ವಶಪಡಿಸಿಕೊಂಡು ಆರೋಪಿಯ ವಿರುದ್ಧ ರಾಬರ್ಟಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಜಿ.ಎಫ್ – ಕುಪ್ಪಂ ಮುಖ್ಯ ರಸ್ತೆಯ ಚೆನ್ನಾಗನಹಳ್ಳಿ ಕ್ರಾಸ್ ಮತ್ತು ಬೈನೇಪಲ್ಲಿ ಕ್ರಾಸ್ ಮದ್ಯೆ ರೋಜರ್ಸ ಕ್ಯಾಂಪ್ ಸ್ಮಶಾನದ ಮುಂಭಾಗ ತಂಗುದಾನದ ಬಳಿ ಮಾದಕ ವಸ್ತು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿ ಶೇಖರ್ (೪೪ ವರ್ಷ) ರವರ ಮೇಲೆ ದಾಳಿ ಮಾಡಿ ೨೫೦ ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಉರಿಗಾಂ ಪೊಲೀಸ್ ಠಾಣೆ ಸರಹದ್ದಿನ ಎಲೆಕ್ಟಿçಕ್ ಲೈನ್ ಶ್ರೀ ಸುಬ್ರಮಣಿಸ್ವಾಮಿ ದೇವಸ್ಥಾನದ ಸಮೀಪದ ರೈಲ್ವೇ ಟ್ರಾಕ್ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಬ್ರಿನ್ ಕ್ಲಿಂಟನ್ (೨೬ ವರ್ಷ) ರವರ ಮೇಲೆ ದಾಳಿ ಮಾಡಿ ೧೬೯ ಗ್ರಾಂ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಕೆ.ಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಮಾದಕವಸ್ತುಗಳ ಸೇವನೆ, ಉತ್ಪಾದನೆ, ಮಾರಟ ಅಥವಾ ಸಾಗಾಟವನ್ನು ಪದೇ ಪದೇ ಮಾಡುತ್ತಿದ್ದಲ್ಲಿ ಅಂತವರ ವಿರುದ್ಧ ಗಡಿಪಾರು ಕಾಯ್ದೆಯಡಿಯಲ್ಲಿ ಗಡಿಪಾರು ಮಾಡಲಾಗುವುದು. ಆದರೂ ಕಾನೂನು ಉಲ್ಲಂಘಿಸಿದರೆ ಅಂತವರ ವಿರುದ್ಧ ಗೂಂಡ ಕಾಯ್ದೆಯಡಿಯಲ್ಲಿ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಆರೋಪಿಗಳಿಗೆ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಎಚ್ಛರಿಕೆಯನ್ನು ನೀಡಿರುತ್ತಾರೆ.

ಮಾದಕ ವಸ್ತುಗಳ ಮಾರಾಟ, ಸಾಗಾಟಣೆ, ಸೇವನೆ, ಮತ್ತು ಉತ್ಪಾದನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಚರಣೆ ಕೈಕೊಂಡಿದ್ದ ಕೆ.ಜಿ.ಎಫ್ ಉಪವಿಭಾಗದ ಡಿ.ವೈ.ಎಸ್.ಪಿ ವಿ.ಲಕ್ಷö್ಮಯ್ಯ, ಉರಿಗಾಂ ವೃತ್ತ ನಿರೀಕ್ಷಕರಾದ ಮಾರ್ಕೊಂಡಯ್ಯ .ಟಿ, ರಾಬರ್ಟಸನ್ಪೇಟೆ ವೃತ್ತ ನಿರೀಕ್ಷಕರಾದ ಅನಿಲ್ ಕುಮಾರ್.ಎಂ.ಎಸ್, ಪಿ,ಎಸ್,ಐ ಗಳಾದ ಮಹೇಶ್ ಮಾಲಿ, ಮಂಜುನಾಥ ಬಿ, ಚಂದ್ರಶೇಖರ್, ಕೃಷ್ಣಮೂರ್ತಿ ಮತ್ತು ಸಿಬ್ಬಂದಿಯವರ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande