ಮದರ್ ಪ್ರಾಮಿಸ್’ ಚಿತ್ರದ ಹಾಡು ಬಿಡುಗಡೆ : ಆರ್ಸಿಬಿ ಕ್ರೇಜ್ ಹೆಚ್ಚಿಸಿದ ಡಾಲಿ ಪಿಕ್ಚರ್ಸ್
ಬೆಂಗಳೂರು, 10 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮದರ್ ಪ್ರಾಮಿಸ್’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ, ವಿಶೇಷವಾಗಿ ಆರ್ಸಿಬಿ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. “ಬೆಂಗ್ಳೂರು ನಮ್ದೇನೆ…” ಎಂಬ ಹೂಕ್ ಲೈನ್ ಮೂಲಕ ಈ ಹಾಡು ಯುವಜನರ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾ
Song release


ಬೆಂಗಳೂರು, 10 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮದರ್ ಪ್ರಾಮಿಸ್’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ, ವಿಶೇಷವಾಗಿ ಆರ್ಸಿಬಿ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. “ಬೆಂಗ್ಳೂರು ನಮ್ದೇನೆ…” ಎಂಬ ಹೂಕ್ ಲೈನ್ ಮೂಲಕ ಈ ಹಾಡು ಯುವಜನರ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಟ ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಹಾಡು, ಆರ್ಸಿಬಿ ತಂಡದ ಮೇಲಿನ ಅಭಿಮಾನವನ್ನು ಹೊತ್ತೊಯ್ಯುವ ರೀತಿಯಲ್ಲಿ ಮೂಡಿಬಂದಿದೆ. “ಉರ್ಕೊಳೋರು ಉರ್ಕೊಳಿ, ಕಿತ್ಕಳಕ್ಕೆ ಆಗದಿಲ್ಲ ಏನು..” ಎಂಬ ಡೈಲಾಗ್ ಮೂಲಕ ಡಾಲಿ ಸ್ಟೈಲಿಷ್ ಎಂಟ್ರಿ ಕೊಟ್ಟಿದ್ದು, ಹಾಡಿನ ಡ್ಯಾನ್ಸ್ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಡಾಲಿ ತಮ್ಮ ಸ್ನೇಹಿತರ ಬಳಗದೊಂದಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಿರ್ದೇಶನವನ್ನು ಪೂರ್ಣ ಮೈಸೂರು ವಹಿಸಿಕೊಂಡಿದ್ದಾರೆ. ನಿರ್ಮಾಣದಲ್ಲಿ ಡಾಲಿ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ಸಹಭಾಗಿಯಾಗಿದ್ದಾರೆ.

ಚಿತ್ರದ ಮೊದಲ ಹಾಡಿಗೆ ಖ್ಯಾತ ಗಾಯಕ ಗುರುಕಿರಣ್ ಧ್ವನಿನೀಡಿದ್ದು, ಬಹುಕಾಲದ ಬಳಿಕ ಅವರ ಗಾಯನ ಕೇಳಿಬಂದಿರುವುದು ವಿಶೇಷವಾಗಿದೆ. ನವನೀತ್ ಶ್ಯಾಮ್ ಸಂಗೀತ ನಿರ್ದೇಶನ ಮಾಡಿದ್ದು, ಶಶಾಂಕ್ ಸೋಘಲ್ ಸಾಹಿತ್ಯ ರಚಿಸಿದ್ದಾರೆ.

ಕಾಮಿಡಿ ಮತ್ತು ಥ್ರಿಲ್ಲರ್ ಮಿಶ್ರಿತ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಾಗಭೂಷಣ್, ವಿನಯ ಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಹಲವರು ನಟಿಸಿದ್ದಾರೆ. ರಾಹುಲ್ ರಾಯ್ ಛಾಯಾಗ್ರಹಣ ಮಾಡಿರುವ ಈ ಚಿತ್ರಕ್ಕೆ ನವನೀತ್ ಶ್ಯಾಮ್ ಸಂಗೀತ ಸಂಯೋಜಿಸಿದ್ದಾರೆ.

‘ಮದರ್ ಪ್ರಾಮಿಸ್’ ಚಿತ್ರದ ಮೇಲಿನ ನಿರೀಕ್ಷೆ ಇದೀಗ ಮೊದಲ ಹಾಡಿನ ಮೂಲಕ ಮತ್ತಷ್ಟು ಹೆಚ್ಚಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande