ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು : ಶಾಸಕ ಗಾಲಿ ಜನಾರ್ದನರೆಡ್ಡಿ
ಗಂಗಾವತಿ, 09 ಮಾರ್ಚ್ (ಹಿ.ಸ.) ಆ್ಯಂಕರ್: ಪತ್ರಿಕೋದ್ಯಮದ ವಿದ್ಯಾರ್ಥಿಗಳು ಧನಾತ್ಮಕ ವರದಿಗಾರಿಕೆಗೆ ಆದ್ಯತೆ ನೀಡಬೇಕು.ಅಭಿವೃದ್ಧಿಗೆ ಪೀಠಿಕೆಯಾಗಿ ಪತ್ರಕರ್ತರು ಕಾರ್ಯ ಮಾಡುವ ಮೂಲಕ ದೇಶದ ಪ್ರಗತಿಗೆ ಕಾರಣೀಕರ್ತರಾಗಬೇಕು. ಸ್ಥಳೀಯ ಎಸ್ಕೆಎನ್ಜಿ ಕಾಲೇಜಿನಲ್ಲಿ ಕಳೆದ 20 ವರ್ಷಗಳಿಂದ ಪತ್ರಿಕೋದ್ಯ
ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು : ಶಾಸಕ ಗಾಲಿ ಜನಾರ್ದನರೆಡ್ಡಿ


ಗಂಗಾವತಿ, 09 ಮಾರ್ಚ್ (ಹಿ.ಸ.)

ಆ್ಯಂಕರ್: ಪತ್ರಿಕೋದ್ಯಮದ ವಿದ್ಯಾರ್ಥಿಗಳು ಧನಾತ್ಮಕ ವರದಿಗಾರಿಕೆಗೆ ಆದ್ಯತೆ ನೀಡಬೇಕು.ಅಭಿವೃದ್ಧಿಗೆ ಪೀಠಿಕೆಯಾಗಿ ಪತ್ರಕರ್ತರು ಕಾರ್ಯ ಮಾಡುವ ಮೂಲಕ ದೇಶದ ಪ್ರಗತಿಗೆ ಕಾರಣೀಕರ್ತರಾಗಬೇಕು. ಸ್ಥಳೀಯ ಎಸ್ಕೆಎನ್ಜಿ ಕಾಲೇಜಿನಲ್ಲಿ ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮ ವಿಭಾಗವಿದ್ದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ನಿಧಿಯಿಂದ ಅನುದಾನ ಒದಗಿಸಿ ಡಿಜಿಟಲ್ ಸ್ಟುಡಿಯೋ ಸ್ಥಾಪಿಸಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ಅವರು ನಗರದ ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರಗೆ ತಂದಿರುವ ಯುವವಾಣಿ ಮತ್ತು ಕಾಲೇಜು ರಂಗ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗ ಸಾರ್ವಜನಿಕ ಅಭಿಪ್ರಾಯ ಮತ್ತು ಸಂವಿಧಾನಾತ್ಮಕ ಕಾರ್ಯಗಳು ನಡೆಯುವಂತೆ ಮಾಡುತ್ತದೆ. ಸರಕಾರ ದಾರಿ ತಪ್ಪಿದ ಸಂದರ್ಭದಲ್ಲಿ ವರದಿ ಮತ್ತು ಲೇಖನ ಪ್ರಕಟಣೆಯ ಮೂಲಕ ಸರಿದಾರಿಗೆ ತರುವ ಮಹಾನ್ ಕಾರ್ಯವನ್ನು ಪತ್ರಕರ್ತರು ಮಾಡುತ್ತಾರೆ. ಪ್ರಸ್ತುತ ಪತ್ರಿಕೋದ್ಯಮ ಓದುವವರಿಗೆ ವಿಫುಲವಾದ ಉದ್ಯೋಗ ಅವಕಾಶಗಳಿವೆ. ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಬೇಕಾಗುವ ಪುಸ್ತಕಗಳನ್ನು ಕರ್ನಾಟಕ ಮಾದ್ಯಮ ಅಕಾಡೆಮಿ ವತಿಯಿಂದ ರಿಯಾಯಿತಿ ದರದಲ್ಲಿ ಖರೀದಿಸಿ ಕೊಡಲಾಗುತ್ತದೆ. ಕಾಲೇಜಿನಲ್ಲಿ ಮಹಿಳಾ ಶೌಚಾಲಯ ಸೇರಿ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ನೂತನವಾಗಿ ಕಾಲೇಜು ಅಭಿವೃದ್ಧಿ ಕಮೀಟಿ ರಚನೆಯಾಗಿದ್ದು ಕಮೀಟಿ ಸರಿಯಾಗಿ ಕಾರ್ಯ ಮಾಡಲಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಮಾತನಾಡಿ, ಪತ್ರಿಕೋದ್ಯಮ ಪ್ರಸ್ತುತ ಹೆಚ್ಚು ಉದ್ಯೋಗ ಕಲ್ಪಿಸುವ ಕ್ಷೇತ್ರವಾಗಿದ್ದು ಹೆಚ್ಚು ವಿದ್ಯಾರ್ಥಿಗಳು ಪತ್ರಿಕೋದ್ಯಮ ಓದಲು ಬರಬೇಕು. ಅಕಾಡೆಮಿಯಿಂದ ಪ್ರಕಟಗೊಂಡಿರುವ ಅನೇಕ ಹಿರಿಯ ಪತ್ರಕರ್ತರು ಬರೆದು ಪುಸ್ತಕಗಳು ಲಭ್ಯವಿದ್ದು ರಿಯಾಯಿತಿ ದರದಲ್ಲಿ ಖರೀಸಬಹುದಾಗಿದೆ. ಶಾಸಕರು ಅಕಾಡೆಮಿಯಿಂದ ಎಸ್ಕೆಎನ್ಜಿ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಪುಸ್ತಕ ಕೊಡಿಸಬೇಕು. ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ತರಬೇತಿ, ಎಐ ತರಬೇತಿ ಕಾಲಕಾಲಕ್ಕೆ ನೀಡುತ್ತಿದ್ದು ಇದರ ಸದುಪಯೋಗ ಪಡೆಯಬೇಕು. ಕಲ್ಯಾಣ ಕರ್ನಾಟಕದ ಪತ್ರಕರ್ತರಿಗೆ ಶೀಘ್ರವೇ ಕೌಶಲ್ಯ ತರಬೇತಿ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತದೆ. ಪತ್ರಿಕೋದ್ಯಮಕ್ಕೆ ಹೆಚ್ಚೆಚ್ಚು ಮಹಿಳೆಚಿiÀÄರು ಬರಬೇಕಿದ್ದು ಅಕಾಡೆಮಿಯಲ್ಲಿ ಪ್ರೋತ್ಸಾಹಕ ಯೋಜನೆಗಳಿವೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಶಿವರಾಜ್ ಗುರಿಕಾರ, ಕಾಲೇಜು ಉಪಾಧ್ಯಕ್ಷ ವಿರೇಶ ಬಲ್ಕುಂದಿ, ಸದಸ್ಯ ಆಸೀಫ್ ಬಿಚ್ಚಗತ್ತಿ,ಬಿಜೆಪಿ ಮುಖಂಡ ಯಮನೂರ ಚೌಡ್ಕಿ, ಪ್ರಾಧ್ಯಾಪಕರಾದ ಮಂಜುನಾಥ, ಜೆ,ಕೃಷ್ಣ, ಪತ್ರಿಕೋದ್ಯಮ ವಿಭಾಗದ ಬಸವರಾಜ ಕರುಗಲ್, ಸತೀಶ, ಬಸವರಾಜ ಗಡಾದ್, ಶ್ರೀಕಾಂತ ಸೇರಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande