
ಬಾಗಲಕೋಟೆ, 09 ಮಾರ್ಚ್ (ಹಿ.ಸ.)
ಆ್ಯಂಕರ್ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ವಿವಿಕೆ ಫೌಂಡೇಶನ್ ವತಿಯಿಂದ ಸ್ತ್ರೀ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿಸಿ ಕಚೇರಿಯಿಂದ ಕಲಾಭವನದವರೆಗೆ ಮಹಿಳೆಯರಿಂದ ಬಾಗಲಕೋಟೆ ಪಿಂಕ್ ವಾಕ್ ನಡೆಸಲಾಯಿತು.
ಬಾಗಲಕೋಟೆ ಪಿಂಕ್ ವಾಕ್ ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ಪ್ರಥಮ್, ಅಶ್ವಿನಿಗೌಡ ಭಾಗವಹಿಸಿದ್ದರು.ನಗರದ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಪಿಂಕ್ ವಾಕ್ ಮೂಲಕ ಮಹಿಳೆಯರಿಗೆ ಕ್ಯಾನ್ಸರ್ ಅರಿವು ಜಾಗೃತಿ ಅಭಿಯಾನ ಜಾಥಾ ನಡೆಸಲಾಯಿತು.
ಗ್ರಾಮೀಣ ಭಾಗದ ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ನಗರದ ಅಸ್ಕಿ ಆಸ್ಪತ್ರೆಯಲ್ಲಿ ನಾಳೆಯಿಂದ ಒಂದು ವಾರಗಳ ಕಾಲ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಸಲಾಗುವುದು ಎಂದು ವಿವಿಕೆ ಫೌಂಡೇಷನ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ ತಿಳಿಸಿದರು. ಪಿಂಕ್ ವಾಕ್ ಗೆ ಚಾಲನೆ ನೀಡಿದ ಡಿಸಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ, ಅಶ್ವಿನಿಗೌಡ, ಪ್ರಥಮ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ವಿದ್ಯಾರ್ಥಿನಿಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande