ಮಹಿಳೆಯರು ಅಭಿವೃದ್ಧಿಯ ಸಕ್ರಿಯ ವೇಗವರ್ಧಕರು: ಡಾ. ಅಜಿತ್ ಕೆ.ಎಂ.
ಬಳ್ಳಾರಿ, 09 ಮಾರ್ಚ್ (ಹಿ.ಸ.) ಆ್ಯಂಕರ್: ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಭಾರತ ರಾಷ್ಟ್ರದ ನಿರ್ಮಾಣದಲ್ಲಿ ಮಹಿಳೆಯರು `ಸಕ್ರಿಯ ವೇಗವರ್ಧಕರು’ ಎಂದು ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕದ ಭೌತಶಾಸ್ತ್ರ ವಿಭಾಗದ ಪೆÇ್ರ. ಡಾ. ಅಜಿತ್ ಕೆ.ಎಂ. ಅವರು ತಿಳಿಸಿದ್ದಾರೆ. ಬಳ್ಳಾ
ದೇಶದಲ್ಲಿ ಮಹಿಳೆಯರು ಅಭಿವೃದ್ಧಿಯ `ಸಕ್ರಿಯ ವೇಗವರ್ಧಕರು’ : ಡಾ. ಅಜಿತ್ ಕೆ.ಎಂ.


ದೇಶದಲ್ಲಿ ಮಹಿಳೆಯರು ಅಭಿವೃದ್ಧಿಯ `ಸಕ್ರಿಯ ವೇಗವರ್ಧಕರು’ : ಡಾ. ಅಜಿತ್ ಕೆ.ಎಂ.


ಬಳ್ಳಾರಿ, 09 ಮಾರ್ಚ್ (ಹಿ.ಸ.)

ಆ್ಯಂಕರ್: ಅಭಿವೃದ್ಧಿ ಹೊಂದಿದ, ಸ್ವಾವಲಂಬಿ ಭಾರತ ರಾಷ್ಟ್ರದ ನಿರ್ಮಾಣದಲ್ಲಿ ಮಹಿಳೆಯರು `ಸಕ್ರಿಯ ವೇಗವರ್ಧಕರು’ ಎಂದು ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕದ ಭೌತಶಾಸ್ತ್ರ ವಿಭಾಗದ ಪೆÇ್ರ. ಡಾ. ಅಜಿತ್ ಕೆ.ಎಂ. ಅವರು ತಿಳಿಸಿದ್ದಾರೆ.

ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಬಲೇಶ್ವರಪ್ಪ ತಾಂತಿಕ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ `ವಿಜ್ಞಾನದಲ್ಲಿ ಮಹಿಳೆಯರು : ವಿಕಾಸಿತ ಭಾರತವನ್ನು ವೇಗಗೊಳಿಸುವುದು’

ವಿಷಯದ ಕುರಿತು ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಭಾರತದ ವೈಜ್ಞಾನಿಕ ಪರಿಸರವು ಮಹಿಳೆಯರ ಪ್ರತಿಭೆಯನ್ನು ಪೆÇೀಷಿಸಿ, ಸಂಶೋಧನೆ, ನಾಯಕತ್ವ, ನಾವೀನ್ಯತೆ-ಚಾಲಿತ ವಲಯಗಳಲ್ಲಿ ಪ್ರಾತಿನಿಧ್ಯವನ್ನು ನೀಡಬೇಕು. ಭಾರತದ ವಿಜ್ಞಾನದ ರೂಪಾಂತರಕ್ಕೆ ಮತ್ತು 2047ರ ವೇಳೆಗೆ ಅಭಿವೃದ್ಧಿಗೆ

ದೇಶದಲ್ಲಿ ಮಹಿಳೆಯರನ್ನು `ಸಕ್ರಿಯ ವೇಗವರ್ಧಕರು’ ಎಂದು ಪರಿಗಣಿಸಬೇಕು ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಅರವಿಂದ್ ಪಟೇಲ್ ಅವರು, ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೇಡಂ ಕ್ಯೂರಿ ಪ್ರೇರಣಾ ಶಕ್ತಿ ಆಗಬೇಕು. ಮೇಡಂ ಮೇರಿ ಕ್ಯೂರಿ ಅವರು ವಿಕಿರಣಶೀಲತೆಯ ಕುರಿತು ಸಂಶೋಧನೆಯಲ್ಲಿ ಪೆÇಲೋನಿಯಂ ಮತ್ತು ರೇಡಿಯಂ ಸಂಶೋಧಿಸಿ ನೊಬೆಲ್ ಪ್ರಶಸ್ತಿ ಪುರಸ್ಕøತರಾದರು ಎಂದರು.

ಪ್ರಾಂಶುಪಾಲರಾದ ಡಾ. ರಾಜಶೇಖರನ್ ಷಣ್ಮುಗಂ, ಉಪ ಪ್ರಾಂಶುಪಾಲರಾದ ಡಾ. ಸವಿತಾ ಸೋನೋಳಿ, ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ಮತ್ತು ಡಾ. ಸಿ.ವಿ. ರಾಮನ್ ಅವರ ರಾಮನ್ ಎಫೆಕ್ಟ್ ಕುರಿತು ಮಾತನಾಡಿದರು.

ಶ್ರೀಮತಿ ಗಂಗಾ ಮಹೇಶ್ ಸಜ್ಜನ ಅವರು ಕಾರ್ಯಕ್ರಮ ನಿರೂಪಿಸಿದರು, ಡಾ. ಮೇಟಿ ಪ್ರಭಾಕರ್ ಅವರು ವಂದಿಸಿದರು

ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಸುಮಂಗಳ, ಡಾ. ಕೊಟ್ಟೂರೇಶ್ವರ ಎನ್.ಎಂ, ಡಾ. ನಾಗಭೂಷಣ, ಡಾ ಕೋರಿ ನಾಗರಾಜ, ಡಾ. ನಾಗರಾಜ, ಡಾ ಕೆ.ಆರ್. ಭಾಗ್ಯ, ಡಾ. ವೀರೇಶ್, ಡಾ. ಆನಂದ್ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande