ಸಚಿವರಿಗೆ ಸಿದ್ದೇಶ್ವರ ಸ್ವಾಮಿಗಳ ಸ್ಮರಣಿಕೆ ನೀಡಲು ಮುಂದಾದ ಮುಸ್ಲಿಂ ಯುವಕ
ವಿಜಯಪುರ, 09 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅವರಿಗೆ ಉಡುಗೊರೆ ಕೊಡಲು ಸಿದ್ಧೇಶ್ವರ ಮಹಾಸ್ವಾಮೀಜಿ ಅವರ ಸ್ಮರಣಿಕೆಯನ್ನು ಮುಸ್ಲಿಂ ಮುಖಂಡ ಶರತಾಜ್ ಬೀಳಗಿ ಸಿದ್ಧಪಡಿಸಿದ್ದಾರೆ. ಬರದ ನಾಡು ಎಂದೇ ಕುಖ್ಯಾತಿ ಪಡೆದಿದ್ದ ಜಿಲ್ಲೆಗೆ ಸಾಕಷ್ಟು ನೀರಾವಾರಿ
ಸಚಿವರಿಗೆ ಸಿದ್ದೇಶ್ವರ ಸ್ವಾಮಿಗಳ ಸ್ಮರಣಿಕೆ ನೀಡಲು ಮುಂದಾದ ಮುಸ್ಲಿಂ ಯುವಕ


ವಿಜಯಪುರ, 09 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅವರಿಗೆ ಉಡುಗೊರೆ ಕೊಡಲು ಸಿದ್ಧೇಶ್ವರ ಮಹಾಸ್ವಾಮೀಜಿ ಅವರ ಸ್ಮರಣಿಕೆಯನ್ನು ಮುಸ್ಲಿಂ ಮುಖಂಡ ಶರತಾಜ್ ಬೀಳಗಿ ಸಿದ್ಧಪಡಿಸಿದ್ದಾರೆ.

ಬರದ ನಾಡು ಎಂದೇ ಕುಖ್ಯಾತಿ ಪಡೆದಿದ್ದ ಜಿಲ್ಲೆಗೆ ಸಾಕಷ್ಟು ನೀರಾವಾರಿ ಯೋಜನೆಗಳನ್ನು ತಂದಿದ್ದಾರೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕೃಷ್ಣಾ ನದಿಯಿಂದ ಕ್ಯಾನಲ್ ನಿರ್ಮಿಸುವ ಮೂಲಕ ಜಿಲ್ಲೆ ರೈತರ ನೀರಿನ ಬವಣೆ ನೀಗಿಸಿದ್ದಾರೆ.

ಸಚಿವರ ಕಾರ್ಯಕ್ಕೆ ಜಿಲ್ಲೆಯ ಜನರ ಪರವಾಗಿ ಸ್ವಾಮೀಜಿಗಳ ಸ್ಮರಣಿಕೆ ನೀಡುವ ಮೂಲಕ ಅವರನ್ನು ಸತ್ಕರಿಸಲಾಗುವುದು ಎಂದು ಶರತಾಜ್ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande