ವಿಜಯಪುರ ಖೇಡ ಸಭಾ ಭವನದಲ್ಲಿ ಮಹಿಳಾ ದಿನಾಚರಣೆ
ವಿಜಯಪುರ, 09 ಮಾರ್ಚ್ (ಹಿ.ಸ.) ಆ್ಯಂಕರ್ : ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವತಿಯಿಂದ ಇವತ್ತು ಮಹಿಳಾ ದಿನಾಚರಣೆಯನ್ನು ವಿಜಯಪುರದ ಖೇಡ್ ಸಭಾಭವನದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀನಾಕ್ಷಿ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ಸುತ್ತಿರುವ ಕಸ್ತೂರಿ
ವಿಜಯಪುರ ಖೇಡ ಸಭಾ ಭವನದಲ್ಲಿ ಮಹಿಳಾ ದಿನಾಚರಣೆ


ವಿಜಯಪುರ, 09 ಮಾರ್ಚ್ (ಹಿ.ಸ.)

ಆ್ಯಂಕರ್ : ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವತಿಯಿಂದ ಇವತ್ತು ಮಹಿಳಾ ದಿನಾಚರಣೆಯನ್ನು ವಿಜಯಪುರದ ಖೇಡ್ ಸಭಾಭವನದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀನಾಕ್ಷಿ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ಸುತ್ತಿರುವ ಕಸ್ತೂರಿ ಬೂದಿಹಾಳ್ ಶಂಕ್ರಮ್ಮ ಕೋರಿ,

ಜಯಶ್ರೀ ವಾಂಗಿ, ಮಾತೋಶ್ರೀ ಅಂಬವ್ವ, ಖೇಡ ಕಾಲೇಜಿನ ಉಪಪ್ರಚಾರರಾದ ಸಂಜೋತ ಸಿ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ಕರ್ನಾಟಕ ರಾಜ್ಯ ಅಂಗವಿಕಲರಾಗ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷರು ವಿನೋದ್ ಎಂ. ಖೇಡ್ ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಮೀನಾಕ್ಷಿ ಸಿಂಧೆ ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಮುನ್ನಡೆಯ ಸಾಧಿಸುತ್ತಿದ್ದಾರೆ ಎಂದು ಹೇಳಿದ ಅವರು ಬ್ರೂಣ ಹತ್ಯೆಯನ್ನು ತಡೆಗಟ್ಟೋಣ ಎಂದು ಹೇಳಿದರು. ಜಿಲ್ಲಾಧ್ಯಕ್ಷರಾದ ವಿನೋದ್ ಎಮ್ ಕೇಡ್ ಅವರು ಮಾತನಾಡಿ ಇಂದು ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಿ ಸತ್ಕರಿಸುವದೆ ಮಹಿಳಾ ದಿನಾಚರಣೆಯ ವಿಶೇಷವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಎಂ.ಬಿ ಉಮ್ರಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ವಾಲಿಕಾರ್ ಸಂಘಟನೆಯ ಪ್ರಮುಖ ಅಂಬಣ್ಣ ಗುನ್ನಾಪುರ, ಸಂತೋಷ್ ಕಲ್ಗುಡಿ, ರಾಜು ಕುಮಟಗಿ. ಪೂಜಾರಿ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande