
ಕೊಪ್ಪಳ, 09 ಮಾರ್ಚ್ (ಹಿ.ಸ.)
ಆ್ಯಂಕರ್: ಕಳೆದ ಹತ್ತು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳನ್ನು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗುವಲ್ಲಿ ತಿರುಪತಿ ನಾಯಕ ಪಿಲಿಗುಂಡ ತಂದೆ ಗೋವಿಂದಪ್ಪ ಇವರ ಪಾತ್ರ ಬಹು ದೊಡ್ಡದು.
ಈ ಕಾರಣಕ್ಕಾಗಿ ಇವರನ್ನು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ನೇತ್ರ ಕಲಾ ಸಂಘ ದ 15 ನೇ ವಾರ್ಷಿಕೋತ್ಸವ ಅಂಗವಾಗಿ ಬಳ್ಳಾರಿ ಯ ಡಾ. ಜೋಳದ ರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು,ಮುನಿರಾಬಾದ್ ನ ದೈಹಿಕ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಕ್ರೀಡಾ ಕೂಟಕ್ಕೆ ಪಾಲ್ಗೊಳ್ಳುವ ಮೂಲಕ ಅವರನ್ನು ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಆಸಕ್ತಿ ವಹಿಸಿಕೊಳ್ಳಲು ರೂಪಿಸಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ನೇತ್ರ ಕಲಾ ಸಂಘದ ಕಾರ್ಯದರ್ಶಿ ವಿರೇಶ ದಳವಾಯಿ, ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರ ರಾದ ಪಿ. ಗಾದೆಪ್ಪ,ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಿಷ್ಟಿ ರುದ್ರಪ್ಪ,ಉದ್ಯಮೆ ಎಂ. ಚಂದ್ರಶೇಖರ ಗೌಡ, ಪೂಜ್ಯ ಡಾ.ಶಿವಕುಮಾರ ತಾತ ನವರು, ಎ.ಮಾನಯ್ಯ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷರು, ಬಿ.ನಾಗರಾಜ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ, ಗೊವಿಂದಪ್ಪ ದೊರೆ ಪಿಲಿಗುಂಡ, ವಹನುಮಂತ ರಾಯ ದೊರೆ ರಾಜ್ಯ ಉಪಾಧ್ಯಕ್ಷರು ರೈತ ಸಂಘ ಪಿಲಿಗುಂಡ, ಮಾನಸಯ್ಯ ನಾಯಕ ತಾಲ್ಲೂಕು ಅಧ್ಯಕ್ಷರು ಮಹರ್ಷಿ ವಾಲ್ಮೀಕಿ ಮಹಾಸಭಾ ದೇವದುರ್ಗ, ಗಂಗಪ್ಪ ನಾಯಕ ಕೊರವಿಗೌಡರು ಬುದ್ದಿನ್ನಿ, ಕವಿತಾ ಶಿಕ್ಷಕಿ,ಪದ್ಮಮ್ಮ ಶಿಕ್ಷಕಿ, ಸಂತೋಷ ರೆಡ್ಡಿ ಕಲ್ಯಾಣ ಕರ್ನಾಟಕ ದೈಹಿಕ ಉಪನ್ಯಾಸಕರ ಸಂಘ ಅಧ್ಯಕ್ಷರು, ಕೊಟ್ರೇಶ ಸನ್ನದ ಕೊಪ್ಪಳ ಜಿಲ್ಲಾ ದೈಹಿಕ ಉಪನ್ಯಾಸಕರ ಸಂಘದ ಕಾರ್ಯದರ್ಶಿ, ಮೋಹನ ದೈಹಿಕ ಉಪನ್ಯಾಸಕರು ಗವಿಸಿದ್ದಪ್ಪ ಉಸಗಲಿ, ದೈಹಿಕ ಉಪನ್ಯಾಸಕರು, ಬಳ್ಳಾರಿ, ಭಾಸ್ಕರ, ಜಯಶ್ರೀ, ಶಂಕರ ಗೌಡ, ಶೇಕ್ಷಾವಲಿ, ತಿಪ್ಪೇಸ್ವಾಮಿ ದೈಹಿಕ ಉಪನ್ಯಾಸಕರು, ಸುಂಕಪ್ಪ,ಕಲಾವಿದರು, ಅಂಬಣ್ಣ ದಳವಾಯಿ, ಜಿ.ಸಂಗೀತ ಶಿಕ್ಷಕಿ, ಅಂಬಳಿ ವೀರೇಂದ್ರ ಉಪನ್ಯಾಸಕ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್