ಶರಣೆಯರಿಂದ ವಿಶ್ವಕ್ಕೆ ಕಾಯಕ ಮತ್ತು ದಾಸೋಹದ ಮಹತ್ವದ ಸಂದೇಶ : ಡಾ. ಕೆ.ಎಸ್. ಶಿವಪ್ರಕಾಶ್
ಬಳ್ಳಾರಿ, 09 ಮಾರ್ಚ್ (ಹಿ.ಸ.) ಆ್ಯಂಕರ್: ವಚನ ಸಾಹಿತ್ಯ ರಚಿಸುವ ಮೂಲಕ ಅಕ್ಕಮಹಾದೇವಿ, ಸತ್ಯಕ್ಕ, ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ - ಗಂಗಾಂಬಿಕೆ ಸೇರಿ 35ಕ್ಕೂ ಹೆಚ್ಚು ಶರಣೆಯರು ಕಾಯಕ ತತ್ವ ಮತ್ತು ದಾಸೋಹದ ಮಹತ್ವವನ್ನು ವಿಶ್ವಕ್ಕೇ ತೋರಿಸಿದ್ದಾರೆ ಎಂದು ವಿಜಯನಗರ ಶ್ರೀಕೃಷ್ಣ
ವಚನಗಾರ್ತಿಯರು ಕಾಯಕ ತತ್ವ ಮತ್ತು ದಾಸೋಹದ ಮಹತ್ವವನ್ನು ವಿಶ್ವಕ್ಕೇ ಸಾರಿದರು : ಡಾ. ಕೆ.ಎಸ್. ಶಿವಪ್ರಕಾಶ್


ವಚನಗಾರ್ತಿಯರು ಕಾಯಕ ತತ್ವ ಮತ್ತು ದಾಸೋಹದ ಮಹತ್ವವನ್ನು ವಿಶ್ವಕ್ಕೇ ಸಾರಿದರು : ಡಾ. ಕೆ.ಎಸ್. ಶಿವಪ್ರಕಾಶ್


ವಚನಗಾರ್ತಿಯರು ಕಾಯಕ ತತ್ವ ಮತ್ತು ದಾಸೋಹದ ಮಹತ್ವವನ್ನು ವಿಶ್ವಕ್ಕೇ ಸಾರಿದರು : ಡಾ. ಕೆ.ಎಸ್. ಶಿವಪ್ರಕಾಶ್


ಬಳ್ಳಾರಿ, 09 ಮಾರ್ಚ್ (ಹಿ.ಸ.)

ಆ್ಯಂಕರ್: ವಚನ ಸಾಹಿತ್ಯ ರಚಿಸುವ ಮೂಲಕ ಅಕ್ಕಮಹಾದೇವಿ, ಸತ್ಯಕ್ಕ, ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ - ಗಂಗಾಂಬಿಕೆ ಸೇರಿ 35ಕ್ಕೂ ಹೆಚ್ಚು ಶರಣೆಯರು ಕಾಯಕ ತತ್ವ ಮತ್ತು ದಾಸೋಹದ ಮಹತ್ವವನ್ನು ವಿಶ್ವಕ್ಕೇ ತೋರಿಸಿದ್ದಾರೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕ ಡಾ. ಕೆ.ಎಸ್. ಶಿವಪ್ರಕಾಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಭವಾನಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಮತ್ತು ಶ್ರೀಮತಿ ತುಳಜಮ್ಮ ಲಕ್ಷ್ಮಪ್ಪ ಜಾಧವ್ ದತ್ತಿ ಹಾಗೂ ಶ್ರೀ ಮಿಂಚೇರಿ ಗೌಡ್ರ ಅಂಬಮ್ಮ ಶಿವಾರೆಡ್ಡಿ ದತ್ತಿಗೆ ಚಾಲನೆ ನೀಡಿ `ವಚನ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ' ಕುರಿತು ಅವರು ಮಾತನಾಡಿದರು.

ವಚನಗಾರ್ತಿಯರು ಲಿಂಗ ತಾರತಮ್ಯ, ಸಾಮಾಜಿಕ ಅಸಮಾನತೆ, ಮೌಢ್ಯಗಳು, ಅಂಧಶ್ರದ್ಧೆ, ಸಂಪ್ರದಾಯಗಳು, ಅನಕ್ಷರತೆ, ಶೋಷಣೆ, ಬಾಲ್ಯ ವಿವಾಹ ಇನ್ನಿತರೆಗಳ ವಿರುದ್ಧ ಧ್ವನಿಯಾದರು. ವಚನಗಳ ಮೂಲಕ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಯಶಸ್ಸನ್ನು ಸಾಧಿಸಿ, ಬಾಲಕಿಯರಿಗೆ ಅಕ್ಷರ, ಆಧ್ಯಾತ್ಮ, ಆರೋಗ್ಯ ಇನ್ನಿತರೆಗಳ ಜಾಗೃತಿಯನ್ನು ಮೂಡಿಸಿದ್ದರು ಎಂದರು.

ಅಲ್ಲಮಪ್ರಭುವಿನ ಅನುಭವ ಮಂಟಪವು ವಚನಗಾರ್ತಿಯರಿಗೆ ಆಶ್ರಯದ ಜೊತೆಯಲ್ಲಿ ಸಾಹಿತ್ಯ ರೂಪಿಸಲು ಪ್ರೋತ್ಸಾಹ ನೀಡಿತ್ತು. ಈ ಹಿನ್ನಲೆಯಲ್ಲಿ 12ನೆಯ ಶತಮಾನವನ್ನು ವಚನ ಸಾಹಿತ್ಯದ ಪರ್ವಕಾಲ ಎನ್ನಲಾಗಿದೆ. ಈ ಮೂಲಕ ಸಮಾಜದಲ್ಲಿ ವೈಚಾರಿಕ ಕ್ರಾಂತಿ ಮೂಡಲೂ ಸಾಧ್ಯವಾಯಿತು ಎಂದರು.

ಅಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ ಅವರಂಥಹಾ ಮಹಿಳೆಯರು ಕಾಯಕ ನಿಷ್ಠೆಗೆ ಖ್ಯಾತರು. ಪತಿ ಆಯ್ದಕ್ಕಿ ಮಾರಯ್ಯ ಅವರ ಕಾಯಕದ ಕುರಿತು ಲಕ್ಕಮ್ಮ ಅತ್ಯಂತ ಸೂಕ್ಷ್ಮವಾಗಿ - ತೀಕ್ಷ್ಣವಾಗಿ ಮಾತನಾಡಿರುವ ಆಯ್ದಕ್ಕಿ ಲಕ್ಕಮ್ಮ, ಗಂಡನ ತಪ್ಪನ್ನು ತಿದ್ದಿದ ಸಾದ್ವಿ ಎಂದರು.

ಜನಪದ ಸಂಶೋಧಕಿ ಡಾ. ಎ.ಎನ್. ಸಿದ್ದೇಶ್ವರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹಿಳೆಯರ ಬೌದ್ಧಿಕ ವಿಕಾಸವನ್ನೇ ಅನುಭವ ಮಂಟಪದಲ್ಲಿ ಮಂಡನೆ ಮಾಡಿ, ಮಹಿಳೆಯರೂ ಸಬಲರು, ಪುರುಷ ಸಮಾನಳು ಎಂದು 12ನೆಯ ಶತಮಾನದಲ್ಲೇ ವಚನಕಾರರು ಸಾಬೀತುಪಡಿಸಿದ್ದರು ಎಂದರು.

ಶ್ರೀ ಭವಾನಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಆರ್.ಎಲ್. ಜಾಧವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಭೀಮನೇನಿ ಪ್ರಸಾದ್, ಪತ್ರಕರ್ತ ಎಸ್. ಕಿನ್ನೂರೇಶ್ವರ ಅವರು ಅತಿಥಿಗಳಾಗಿದ್ದರು.

ಬಳ್ಳಾರಿ ಜಿಲ್ಲಾಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದರಾಮ ಕಲ್ಮಠ, ನಿಕಟಪೂರ್ವ ಅಧ್ಯಕ್ಷರಾದ ಕೆ.ಬಿ. ಸಿದ್ದಲಿಂಗಪ್ಪ ಅವರು ವೇದಿಕೆಯಲ್ಲಿದ್ದರು. ಎ.ಎಂ.ಪಿ. ವೀರೇಶ ಸ್ವಾಮಿ, ಚಾಂದ್ಭಾಷ, ಯು. ಶ್ರೀನಿವಾಸಮೂರ್ತಿ, ಕೆ. ಹೊನ್ನೂರ್ ಸಾಬ್, ಗೋವಿಂದಪ್ಪ ಉಪಸ್ಥಿತರಿದ್ದರು. ಗಾಯಕ ಡಿ.ಎಸ್. ಗಣೇಶ್ ಅವರು ಗೀತಗಾಯನ ನಡೆಸಿಕೊಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande