ಗಂಡನಿಂದ ಮೋಸ-ಎಸ್ಪಿ ಕಚೇರಿಗೆ ದೂರುನೀಡಿದಮಹಿಳೆ
ಬಾಗಲಕೋಟೆ, 09 ಮಾರ್ಚ್ (ಹಿ.ಸ.) ಆ್ಯಂಕರ್ : ವಿವಾಹಿತ ಹಿಂದು ಮಹಿಳೆ, ವಿವಾಹಿತ ಮುಸ್ಲಿಂ ವ್ಯಕ್ತಿಯರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ನಡೆದಿದೆ. ಮದುವೆಯಾಗಿ ಮಕ್ಕಳಿದ್ದರೂ ಅಂತರ್ ಧರ್ಮೀಯ ಮದುವೆಯಾದ ಮಹಿಳೆ ಶ್ರೀದೇವಿ ಮುಸ್ಲಿಂ ವ್ಯಕ್ತಿ ಸವೀಫ್ ವಿ
Husband cheating


ಬಾಗಲಕೋಟೆ, 09 ಮಾರ್ಚ್ (ಹಿ.ಸ.)

ಆ್ಯಂಕರ್ : ವಿವಾಹಿತ ಹಿಂದು ಮಹಿಳೆ, ವಿವಾಹಿತ ಮುಸ್ಲಿಂ ವ್ಯಕ್ತಿಯರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದಲ್ಲಿ ನಡೆದಿದೆ.

ಮದುವೆಯಾಗಿ ಮಕ್ಕಳಿದ್ದರೂ ಅಂತರ್ ಧರ್ಮೀಯ ಮದುವೆಯಾದ ಮಹಿಳೆ ಶ್ರೀದೇವಿ ಮುಸ್ಲಿಂ ವ್ಯಕ್ತಿ ಸವೀಫ್ ವಿರುದ್ಧ ನನ್ನನ್ನು ಬೆದರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆಂದು ಎಸ್ಪಿ ಕಚೇರಿಗೆ ಆಗಮಿಸಿ ಆತನ ವಿರುದ್ಧ ದೂರು ನೀಡಿದ್ದಾಳೆ.

ನನ್ನ ನಾಲ್ಕು ಲಕ್ಷ ಹಣ ಹಾಗೂ ನಾಲ್ಕು ತೊಲೆ ಬಂಗಾರ ಪಡೆದು ನನಗೆ ಚಿತ್ರಹಿಂಸೆ ಕೊಟ್ಟು ನಡು ಬೀದಿಯಲ್ಲಿ ಬಿಟ್ಟಿದ್ದಾನೆ ಎಂದು ಶ್ರೀದೇವಿ ಆರೋಪ ಮಾಡಿದ್ದಾಳೆ. ಶ್ರೀದೇವಿ ಅಲಿಯಾಸ್ ಹಬೀಬಾ ಎಂಬ ಮಹಿಳೆ ಮುಸ್ಲಿಂ ಪತಿ ಸವಿಫ್ ಪತ್ತೆ ವಿರುದ್ಧ ಆರೋಪ ಮಾಡಿದ್ದಾಳೆ. ನಾನು ಸವಿಫ್ ಇಬ್ಬರು ಪ್ರೀತಿ ಮಾಡಿದ್ದೇವೆ. ನಂತರ ನನಗೆ ಬೆದರಿಕೆ ಹಾಕಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದರು.

ಮತಾಂತರ ಮಾಡಿ ಶ್ರೀದೇವಿ ಎಂದು ಹೆಸರಿದ್ದ ನನಗೆ ಹಬೀಬಾ ಎಂದು ಮುಸ್ಲಿಂ ನಾಮಕರಣ ಮಾಡಿದ್ದಾರೆ.

ಮುಸ್ಲಿಂ ಪದ್ದತಿ ಪ್ರಕಾರ ನಿಖಾ ಮಾಡಿಕೊಂಡಿದ್ದಾನೆ.

೭-೨-೨೦೨೩ ರಲ್ಲಿ ನಿಖಾ ಮಾಡಿಕೊಳ್ಳಲಾಗಿದ್ದು,

ಮದುವೆ ಮಾಡಿಕೊಂಡು ಚಿತ್ರಹಿಂಸೆ ಕೊಟ್ಟು ನಡು ಬೀದಿಯಲ್ಲಿ ಬಿಟ್ಟಿದ್ದಾನೆ ಎಂದು ಎಸ್ಪಿ ಕಚೇರಿ ಎದುರು ಕಣ್ಣೀರು ಹಾಕುತ್ತಿದ್ದಾಳೆ.

ತನ್ನ ಮೊದಲ ಪತ್ನಿ ಜೊತೆ ವಾಸವಾಗಿರುವ ಸವೀಫ್

ನನ್ನ ಬಳಿಯಿದ್ದ ನಾಲ್ಕು ಲಕ್ಷ ಹಣ ,ನಾಲ್ಕು ತೊಲೆ ಬಂಗಾ ಹೊತ್ತೊಯ್ದಿದ್ದು, ಆತನನ್ನು ನಂಬಿ ಮೋಸ ಆಗಿದೆ. ನನಗೆ ನ್ಯಾಯ ಕೊಡೊಸಿ ಎಂದು ಎಸ್ಪಿ ಎದುರು ಗೋಳನ್ನು ತೊಡಿಕೊಂಡಳು. ೧೪ ವರ್ಷಗಳ ಹಿಂದೆ ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದ ನನಗೆ

ಕೊಲೆ ಬೆದರಿಕೆ ಹಾಕಿ ಮದುವೆ ಮಾಡಿಕೊಂಡಿದ್ದಾನೆಂದು ಶ್ರೀದೇವಿ ಆರೋಪಿಸಿದ್ದಾಳೆ.

ಇತ್ತ ಮೊದಲ ಗಂಡನ ನೆಲೆಯೂ ಇಲ್ಲ , ಅತ್ತ ಎರಡನೇ ಮದುವೆಯಾಗಿದ್ದವನಿಂದಲೂ ಮೋಸವಾಗಿದ್ದು, ತನ್ನ ಹಣ ಮತ್ತು ಬಂಗಾರ ಕೊಡಿಸಿ ಎಂದು ಮನವಿ ಮಾಡಿದ್ದಾಳೆ. ಮುಧೋಳ ಠಾಣೆಯಲ್ಲಿ ಸವೀಫ್ ಬಗ್ಗೆ ದೂರು ನೀಡಲು ಹೋದರೆ ದೂರು ಪಡೆಯುತ್ತಿಲ್ಲ ಎಂದು ಆರೋಪಿಸುವ ಈಕೆ, ಬಾಗಲಕೋಟೆ ಎಸ್ಪಿಗೆ ಕಚೇರಿಗೆ ಆಗಮಿಸಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande