ಬಾಗಲಕೋಟೆಯ ಬಂಡಿಗಣಿ ಮಠದಿಂದ ಶ್ರೀಶೈಲಂನಲ್ಲಿ ೯ ದಿನ ಅನ್ನದಾಸೊಹ
ಬಾಗಲಕೋಟೆ, 09 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಸುಕ್ಷೇತ್ರ ಬಂಡಿಗಣಿ ಮಠದ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಅಪ್ಪಾಜಿ ಅವರಿಂದ ಆಂಧ್ರಪ್ರದೇಶದ ಸುಕೇತ್ರ ಶ್ರೀಶೈಲಂನಲ್ಲಿ ಅನ್ನ ದಾಸೋಹ ನಡೆಸಲಾಗುವುದು ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿ
ಬಾಗಲಕೋಟೆಯ ಬಂಡಿಗಣಿ ಮಠದಿಂದ ಶ್ರೀಶೈಲಂನಲ್ಲಿ ೯ ದಿನ ಅನ್ನದಾಸೊಹ


ಬಾಗಲಕೋಟೆ, 09 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ರಬಕವಿ- ಬನಹಟ್ಟಿ ತಾಲೂಕಿನ ಸುಕ್ಷೇತ್ರ ಬಂಡಿಗಣಿ ಮಠದ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಅಪ್ಪಾಜಿ ಅವರಿಂದ ಆಂಧ್ರಪ್ರದೇಶದ ಸುಕೇತ್ರ ಶ್ರೀಶೈಲಂನಲ್ಲಿ ಅನ್ನ ದಾಸೋಹ ನಡೆಸಲಾಗುವುದು ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀಶೈಲ ಶ್ರೀ ಭ್ರಮರಾಂಬಾ-ಶ್ರೀ ಮಲ್ಲಿಕಾರ್ಜುನ ದೇವಾದಿ ದೇವನ ದರ್ಶನಕ್ಕಾಗಿ ಹಾಗೂ ರಥೋತ್ಸವಕ್ಕಾಗಿ ಆಗಮಿಸುವ ಭಕ್ತರಿಗೆ

ನಿರಂತರ 9 ದಿನ 6 ಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ಅನ್ನದಾಸೋಹ ನಡೆಸಲಾಗುವುದು ಎಂದು ತಿಳಿಸಿದರು.

ಆಂಧ್ರಪ್ರದೇಶದ ಅಡಕೇಶ್ವರ ದೇವಸ್ಥಾನದ ಬಳಿ

ಗುರುವಾರ ದಿ. 12-03-2026 ರಿಂದ ಶುಕ್ರವಾರ ದಿ. 20-03-2026 ರವರೆಗೆ ಹಾಗೂ ಶ್ರೀ ಅಡಕೇಶ್ವರ, ಪಂಚಾದಾರಿ-ಪಲ್ಲಾದಾರಿ, ಪಾತಾಳಗಂಗಾ, ಸಾಕ್ಷಿ ಗಣಪತಿ, ಶಿಖರೇಶ್ವರ, ಭೀಮನಕೊಳ್ಳ ಈ ಸ್ಥಳಗಳಲ್ಲಿ ಮಹಾ ಅನ್ನದಾಸೋಹ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಡಿಗಣಿ ಮಠದ ಅನ್ನ ದಾಸೋಹಕ್ಕೆ ಆಗಮಿಸುವ ಸರ್ವ ಭಕ್ತಾದಿಗಳಿಗೆ ಹಾರ್ದಿಕ ಸ್ವಾಗತವನ್ನು

ಚಕ್ರವರ್ತಿ ದಾನೇಶ್ವರ ಅಭಿವೃದ್ಧಿ ಸೇವಾ ಸಂಘ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande