ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಫಸಲು ಕಟಾವಿಗೆ ಟೆಂಡರ್ ಆಹ್ವಾನ
ಧಾರವಾಡ, 08 ಮಾರ್ಚ್ (ಹಿ.ಸ.): ಆ್ಯಂಕರ್: ವಿಆರ್‍ಡಿಸಿ ಫಾರ್‍ಂ ನಲ್ಲಿರುವ 59 ಮಾವಿನ ಗಿಡಗಳು, 11 ತೆಂಗಿನ ಗಿಡಗಳು ಹಾಗೂ 70 ಗೊಡಂಬಿ ಗಿಡಗಳು ಪಸಲಿಗೆ ಬಂದಿದ್ದು, ಅವುಗಳನ್ನು ಕಟಾವು ಆಗುವ ತನಕ ಸಂರಕ್ಷಿಸಿ, ಮಾರಾಟ ಮಾಡಿಕೊಳ್ಳಲು ಗುತ್ತಿಗೆ ದಾರರಿಂದ ಟೆಂಡರ್ ಆಹ್ವಾನಿಸಲಾಗಿದೆ. ಮುಚ್ಚಿದ ಲಕೋಟೆಯ
ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಫಸಲು ಕಟಾವಿಗೆ ಟೆಂಡರ್ ಆಹ್ವಾನ


ಧಾರವಾಡ, 08 ಮಾರ್ಚ್ (ಹಿ.ಸ.):

ಆ್ಯಂಕರ್:

ವಿಆರ್‍ಡಿಸಿ ಫಾರ್‍ಂ ನಲ್ಲಿರುವ 59 ಮಾವಿನ ಗಿಡಗಳು, 11 ತೆಂಗಿನ ಗಿಡಗಳು ಹಾಗೂ 70 ಗೊಡಂಬಿ ಗಿಡಗಳು ಪಸಲಿಗೆ ಬಂದಿದ್ದು, ಅವುಗಳನ್ನು ಕಟಾವು ಆಗುವ ತನಕ ಸಂರಕ್ಷಿಸಿ, ಮಾರಾಟ ಮಾಡಿಕೊಳ್ಳಲು ಗುತ್ತಿಗೆ ದಾರರಿಂದ ಟೆಂಡರ್ ಆಹ್ವಾನಿಸಲಾಗಿದೆ.

ಮುಚ್ಚಿದ ಲಕೋಟೆಯಲ್ಲಿ ಮಾರ್ಚ 09, 2026 ರಿಂದ ಮಾರ್ಚ 16, 2026 ರವರೆಗೆ ಕಛೇರಿಯ ಸಮಯದಲ್ಲಿ ಸಲ್ಲಿಸಬೇಕು. ದಿನಾಂಕ:24.03.2025 ರಂದು ಕೇಂದ್ರದಲ್ಲಿರುವ ಅಧಿಕಾರಿ, ಸಿಬ್ಬಂದಿಗಳು ಸಮ್ಮುಖದಲ್ಲಿ ಸ್ಥಳೀಯವಾಗಿ ರಚಿಸಿರುವ ಸಮಿತಿಯ ಮುಂದೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ಫಾರ್‍ಂಗಳನ್ನು ಸಮಕ್ಷಮದಲ್ಲಿ ತೆರೆಯಲಾಗುವುದು. ಮುಂದುಡುವ ಮತ್ತು ತಿರಸ್ಕರಿಸುವ ಅಧಿಕಾರವನ್ನು ಕರ್ನಾಟಕ ರಾಜ್ಯ ಬೀಜ ನಿಗಮ ಹೊಂದಿರುತ್ತದೆ. ಭಾಗವಹಿಸುವ ಟೆಂಡರ್‍ದಾರರು ಭರ್ತಿ ಮಾಡಿದ ವಿವರಗಳೊಂದಿಗೆ ತಮ್ಮ ಆಧಾರ, ಪ್ಯಾನ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ಉಪ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande