ಮಹಿಳಾ ದಿನಾಚರಣೆ ಶುಭಾಶಯ ಕೊರಿದ ಸಚಿವ ಎಂ ಬಿ ಪಾಟೀಲ್
ವಿಜಯಪುರ, 08 ಮಾರ್ಚ್ (ಹಿ.ಸ.) ಆ್ಯಂಕರ್ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಧೈರ್ಯ, ತ್ಯಾಗ ಮತ್ತು ಸಾಧನೆಯ ಮೂಲಕ ಸಮಾಜಕ್ಕೆ ದಾರಿ ದೀಪವಾದ ಮಹಿಳೆಯರನ್ನು ಸ್ಮರಿಸುತ್ತಾ ನಾಡಿನ ಸಮಸ್ತ ಮಹಿಳೆಯರಿಗೆ ಹಾರ್ದಿಕ ಶುಭಾಶಯಗಳು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಶುಭ
Women's day


ವಿಜಯಪುರ, 08 ಮಾರ್ಚ್ (ಹಿ.ಸ.)

ಆ್ಯಂಕರ್ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಧೈರ್ಯ, ತ್ಯಾಗ ಮತ್ತು ಸಾಧನೆಯ ಮೂಲಕ ಸಮಾಜಕ್ಕೆ ದಾರಿ ದೀಪವಾದ ಮಹಿಳೆಯರನ್ನು ಸ್ಮರಿಸುತ್ತಾ ನಾಡಿನ ಸಮಸ್ತ ಮಹಿಳೆಯರಿಗೆ ಹಾರ್ದಿಕ ಶುಭಾಶಯಗಳು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಶುಭ ಕೊರಿದರು.

ಕನ್ನಡದ ಮೊದಲ ಕವಯತ್ರಿ ಶಿವಶರಣೆ ಅಕ್ಕ ಮಹಾದೇವಿಯ ವಚನಗಳು ಆತ್ಮಗೌರವ, ಸ್ವಾತಂತ್ರ್ಯ ಮತ್ತು ಆಧ್ಯಾತ್ಮಿಕ ಶಕ್ತಿಯ ಸಂದೇಶವನ್ನು ನೀಡುತ್ತಾ ಸದಾ ನಮಗೆ ಪ್ರೇರಣೆಯಾಗಿವೆ. ಧೈರ್ಯ ಮತ್ತು ಸಾಹಸದ ಪ್ರತೀಕರಾದ ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿ ಚನ್ನಮ್ಮ, ರಾಣಿ ಅಬ್ಬಕ್ಕ, ದಾಳಿಕೋರರ ವಿರುದ್ಧ ಅಪ್ರತಿಮ ಶೌರ್ಯ ತೋರಿದ ಒನಕೆ ಓಬವ್ವ ಹಾಗೂ ಎರಡನೇ ಇಬ್ರಾಹಿಂ ಆದಿಲ್ ಶಾಹಿಗೆ ಬಾಲ್ಯದಲ್ಲೇ ಸೌಹಾರ್ದದ ಪಾಠ ಕಲಿಸಿದ ಚಾಂದ್ ಬೀಬಿ ಮೊದಲಾದ ವೀರ ನಾರಿಯರ ಜೀವನ ನಮ್ಮೆಲ್ಲರಿಗೂ ದಿಕ್ಕು ತೋರಿಸುವಂತಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದರು.

ಸಾವಿತ್ರಿಬಾಯಿ ಫುಲೆ, ಮದರ್ ತೆರೆಸಾ, ಸಾಲುಮರದ ತಿಮ್ಮಕ್ಕ ಮುಂತಾದ ಮಹಿಳೆಯರ ನಿಸ್ವಾರ್ಥ ಸೇವೆ ಮಾನವೀಯತೆ, ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುತ್ತಾ ಇಡೀ ಸಮಾಜಕ್ಕೆ ಸದಾ ಸ್ಪೂರ್ತಿದಾಯಕವಾಗಿದೆ.

ಮಹಿಳೆಯ ಶಕ್ತಿ, ಪ್ರತಿಭೆ ಮತ್ತು ಸಾಧನೆಗಳು ಸಮಾಜವನ್ನು ಇನ್ನಷ್ಟು ಸಮೃದ್ಧಗೊಳಿಸಲಿ ಎಂಬ ಹಾರೈಕೆಯೊಂದಿಗೆ ಎಲ್ಲರಿಗೂ ಮತ್ತೊಮ್ಮೆ ಮಹಿಳಾ ದಿನಾಚರಣೆಯ ಶುಭಾಶಯವನ್ನು ಅವರು ಕೊರಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande