
ಬೆಂಗಳೂರು, 08 ಮಾರ್ಚ್ (ಹಿ.ಸ.):
ಆ್ಯಂಕರ್:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
“ಸೃಷ್ಟಿಯ ಮೂಲವೇ ಹೆಣ್ಣು, ಪ್ರೀತಿಯ ಪ್ರತಿರೂಪವೇ ಮಹಿಳೆ. ಮನೆಯ ಬೆಳಕಾಗಿ, ಸಮಾಜದ ಶಕ್ತಿಯಾಗಿ ಮುನ್ನಡೆಯುತ್ತಿರುವ ಅಪ್ರತಿಮ ಚೇತನಗಳಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು,” ಎಂದು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ತಿಳಿಸಿದ್ದಾರೆ.
ವಿದ್ಯೆ, ಸಂಪತ್ತು ಮತ್ತು ಶಕ್ತಿಯ ಸಂಗಮವಾಗಿ ಬದುಕಿಗೆ ಅರ್ಥ ನೀಡುವ ಪ್ರತಿಯೊಬ್ಬ ಮಹಿಳೆಗೆ ಗೌರವ ಸಲ್ಲಿಸುತ್ತೇನೆ. ನನ್ನ ಸಾಧನೆ ಮತ್ತು ಸ್ಫೂರ್ತಿಯ ಹಿಂದೆ ಇರುವ ತಾಯಂದಿರು ಹಾಗೂ ಸಹೋದರಿಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಸರಸ್ವತಿಯಂತೆ ಜ್ಞಾನ, ಲಕ್ಷ್ಮಿಯಂತೆ ಸಮೃದ್ಧಿ ಹಾಗೂ ಪಾರ್ವತಿಯಂತೆ ಧೈರ್ಯ ತೋರುವ ಹೆಣ್ಣು ಪ್ರತಿ ಮನೆಯ ಅಮೂಲ್ಯ ಆಸ್ತಿ ಎಂದು ಅವರು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa