
ವಿಜಯಪುರ, 08 ಮಾರ್ಚ್ (ಹಿ.ಸ.)
ಆ್ಯಂಕರ್ : ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಹಾರ್ದಿಕ ಶುಭಾಶಯಗಳು ಎಂದು ವಿಜಯಪುರ ಜಿಲ್ಲೆಯ ಸಿಂದಗಿ ಶಾಸಕ ಅಶೋಕ ಮನಗೂಳಿ ಶುಭ ಕೊರಿದರು.
ಪತ್ರಿಕಾ ಪ್ರಕಟಣೆಯಲ್ಲಿ ಶುಭ ಹಾರೈಸಿದ ಶಾಸಕ ಮನಗೂಳಿ
ಭಾರತ ತಂಡದ ಆಟಗಾರರ ಅಪಾರ ಪರಿಶ್ರಮ, ಶಿಸ್ತು ಹಾಗೂ ಉತ್ಸಾಹವೇ ಅವರನ್ನು ಈ ಮಹತ್ವದ ಹಂತಕ್ಕೆ ಕೊಂಡೊಯ್ದಿದೆ.
ಇಂದು ನಡೆಯಲಿರುವ ಈ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿ ದೇಶದ ಗೌರವವನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಅವರು ಹಾರೈಸಿದರು.
ಭಾರತದೆಲ್ಲೆಡೆ ಇರುವ ಕೋಟ್ಯಾಂತರ ಅಭಿಮಾನಿಗಳ ಆಶೀರ್ವಾದ ಮತ್ತು ಬೆಂಬಲ ತಂಡದೊಂದಿಗಿದೆ.
ಭಾರತ ತಂಡಕ್ಕೆ ವಿಜಯ ಮತ್ತು ವೈಭವ ದೊರೆಯಲಿ ಎಂದು ಅವರು ಶುಭ ಕೊರಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande