ಎಸ್.ಸಿ–ಎಸ್.ಟಿ ಮೀಸಲಾತಿ ಹೋರಾಟ: ಬಿಜೆಪಿ ಪೂರ್ವಭಾವಿ ಸಭೆ
ಚಿತ್ರದುರ್ಗ, 08 ಮಾರ್ಚ್ (ಹಿ.ಸ.): ಆ್ಯಂಕರ್: ಎಸ್‌.ಸಿ. ಮತ್ತು ಎಸ್‌.ಟಿ. ಮೀಸಲಾತಿಯಲ್ಲಿ ನಡೆದಿದೆ ಎನ್ನಲಾದ ಅನ್ಯಾಯವನ್ನು ಖಂಡಿಸಿ, ಬಿಜೆಪಿ ವತಿಯಿಂದ ಸರಕಾರದ ವಿರುದ್ಧ ಹಮ್ಮಿಕೊಂಡಿರುವ ಬೃಹತ್ ಜನಾಂದೋಲನ ಹಾಗೂ ಐತಿಹಾಸಿಕ ಹೋರಾಟದ ಸಿದ್ಧತೆಗಾಗಿ ರಾಜ್ಯ ಮಟ್ಟದ ಪೂರ್ವಭಾವಿ ಸಭೆ ಚಿತ್ರದುರ್ಗದ
Bjp meeting


ಚಿತ್ರದುರ್ಗ, 08 ಮಾರ್ಚ್ (ಹಿ.ಸ.):

ಆ್ಯಂಕರ್:

ಎಸ್‌.ಸಿ. ಮತ್ತು ಎಸ್‌.ಟಿ. ಮೀಸಲಾತಿಯಲ್ಲಿ ನಡೆದಿದೆ ಎನ್ನಲಾದ ಅನ್ಯಾಯವನ್ನು ಖಂಡಿಸಿ, ಬಿಜೆಪಿ ವತಿಯಿಂದ ಸರಕಾರದ ವಿರುದ್ಧ ಹಮ್ಮಿಕೊಂಡಿರುವ ಬೃಹತ್ ಜನಾಂದೋಲನ ಹಾಗೂ ಐತಿಹಾಸಿಕ ಹೋರಾಟದ ಸಿದ್ಧತೆಗಾಗಿ ರಾಜ್ಯ ಮಟ್ಟದ ಪೂರ್ವಭಾವಿ ಸಭೆ ಚಿತ್ರದುರ್ಗದ ವಾಲ್ಮೀಕಿ ಸಭಾ ಭವನದಲ್ಲಿ ನಡೆಯಿತು.

ಸಭೆಯಲ್ಲಿ ಮೀಸಲಾತಿ ವಿಷಯದಲ್ಲಿ ಉಂಟಾಗಿರುವ ಅನ್ಯಾಯದ ಕುರಿತು ಚರ್ಚೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಹೋರಾಟದ ರೂಪುರೇಷೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಸಮಾಜದ ಹಕ್ಕುಗಳನ್ನು ಕಾಪಾಡಲು ಹಾಗೂ ನ್ಯಾಯ ಸಿಗುವವರೆಗೆ ಹೋರಾಟವನ್ನು ಮುಂದುವರಿಸುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ್ ಕಾರಜೋಳ್, ಮಾಜಿ ಸಚಿವ ಶ್ರೀರಾಮುಲು ಮಾಜಿ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕುಡುಚಿ ರಾಜೀವ್, ಮಾಜಿ ಸಚಿವರಾದ ರಾಜುಗೌಡ ನಾಯಕ್, ಎನ್.ಮಹೇಶ್, ಶಿವನಗೌಡ ನಾಯಕ್, ಶಾಸಕರು ಹಾಗೂ ರಾಜ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷರಾದ ಸಿಮೆಂಟ್ ಮಂಜು, ಶಾಸಕ ಚಂದ್ರಪ್ಪ, ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷರಾದ ಬಂಗಾರು ಹನುಮಂತು, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಮಾಜಿ ಶಾಸಕರಾದ ಬಸವರಾಜ ದಡೇಸೂಗೂರು ಹಾಗೂ ಸಂಪಂಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande