ಸ್ವಯಂ ಸೇವಕ ಗೃಹರಕ್ಷಕ ಸದಸ್ಯರ ಭರ್ತಿಗೆ ಸಂದರ್ಶನ
ಹಾಸನ, 08 ಮಾರ್ಚ್ (ಹಿ.ಸ.): ಆ್ಯಂಕರ್: ಹಾಸನ ಜಿಲ್ಲೆಯ ಗೃಹರಕ್ಷಕ ಘಟಕ ಹಾಗೂ ಉಪ ಘಟಕಗಳಲ್ಲಿ ಖಾಲಿ ಇರುವ 249 ಸ್ವಯಂ ಸೇವಕ ಗೃಹರಕ್ಷಕ ಗೌರವ ಸದಸ್ಯ ಸ್ಥಾನಗಳಿಗೆ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳಿಗೆ ಮಾ.12 ಬೆಳಿಗ್ಗೆ 10:30 ಗಂಟೆಗೆ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಸಂದರ್ಶನವನ್ನು ನಡೆಸಲು
ಸ್ವಯಂ ಸೇವಕ ಗೃಹರಕ್ಷಕ ಸದಸ್ಯರ ಭರ್ತಿಗೆ ಸಂದರ್ಶನ


ಹಾಸನ, 08 ಮಾರ್ಚ್ (ಹಿ.ಸ.):

ಆ್ಯಂಕರ್:

ಹಾಸನ ಜಿಲ್ಲೆಯ ಗೃಹರಕ್ಷಕ ಘಟಕ ಹಾಗೂ ಉಪ ಘಟಕಗಳಲ್ಲಿ ಖಾಲಿ ಇರುವ 249 ಸ್ವಯಂ ಸೇವಕ ಗೃಹರಕ್ಷಕ ಗೌರವ ಸದಸ್ಯ ಸ್ಥಾನಗಳಿಗೆ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳಿಗೆ ಮಾ.12 ಬೆಳಿಗ್ಗೆ 10:30 ಗಂಟೆಗೆ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಸಂದರ್ಶನವನ್ನು ನಡೆಸಲು ನಿರ್ಧರಿಸಲಾಗಿದೆ.

ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಜನ್ಮ ದಿನಾಂಕದ ಮೂಲ ಪ್ರಮಾಣಪತ್ರ ದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ ಎಂದು ಜಿಲ್ಲಾ ಗೃಹರಕ್ಷಕರ ಆಯ್ಕೆ ಸಮಿತಿಯ ಸಮಾದೇಷ್ಟರು ಹಾಗೂ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande