ನಾಟಕ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರ ಆಯ್ಕೆಗೆ ಅರ್ಜಿ ಆಹ್ವಾನ
ಶಿವಮೊಗ್ಗ, 08 ಮಾರ್ಚ್ (ಹಿ.ಸ.): ಆ್ಯಂಕರ್: ಶಿವಮೊಗ್ಗ ರಂಗಾಯಣವು ಏ.14 ರಿಂದ ಮೇ.03ರವರೆಗೆ ಆಯೋಜಿಸುತ್ತಿರುವ ಚಿಣ್ಣರ ಸಿಹಿಮೊಗ್ಗೆ-ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ರಂಗತರಬೇತಿ, ನಾಟಕ ನಿರ್ದೇಶನ ಮಾಡಲು ರಂಗಭೂಮಿಯ ಹಿನ್ನೆಲೆಯುಳ್ಳ 06 ನಾಟಕ ನಿರ್ದೇಶಕರು ಮತ್ತು 06 ಜನ ಸಹಾಯಕ ನಿರ್ದೇಶಕರ ಆ
ನಾಟಕ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರ ಆಯ್ಕೆಗೆ ಅರ್ಜಿ ಆಹ್ವಾನ


ಶಿವಮೊಗ್ಗ, 08 ಮಾರ್ಚ್ (ಹಿ.ಸ.):

ಆ್ಯಂಕರ್:

ಶಿವಮೊಗ್ಗ ರಂಗಾಯಣವು ಏ.14 ರಿಂದ ಮೇ.03ರವರೆಗೆ ಆಯೋಜಿಸುತ್ತಿರುವ ಚಿಣ್ಣರ ಸಿಹಿಮೊಗ್ಗೆ-ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ರಂಗತರಬೇತಿ, ನಾಟಕ ನಿರ್ದೇಶನ ಮಾಡಲು ರಂಗಭೂಮಿಯ ಹಿನ್ನೆಲೆಯುಳ್ಳ 06 ನಾಟಕ ನಿರ್ದೇಶಕರು ಮತ್ತು 06 ಜನ ಸಹಾಯಕ ನಿರ್ದೇಶಕರ ಆಯ್ಕೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಕ್ಕಳೊಂದಿಗೆ ರಂಗಭೂಮಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಅನುಭವ ಹೊಂದಿರಬೇಕು. ನಾಟಕದಲ್ಲಿ ಅಭಿನಯಿಸಿರುವ ಮತ್ತು ನಾಟಕ ನಿರ್ಮಾಣದಲ್ಲಿ ಪರಿಣಿತಿ ಹೊಂದಿರಬೇಕು. ವಯೋಮಾನ ಕನಿಷ್ಠ 23 ರಿಂದ 40 ವರ್ಷದೊಳಗಿರಬೇಕು. ಶಿವಮೊಗ್ಗ ರಂಗಾಯಣದಲ್ಲಿ 22 ದಿನಗಳು ಶಿಬಿರದಲ್ಲಿ ಕಡ್ಡಾಯವಾಗಿ ಉಪಸ್ಥಿತರಿರಬೇಕು. ನಾಟಕ ನಿರ್ದೇಶಕರಿಗೆ ಗೌರವ ಸಂಭಾವನೆ ರೂ.18,000/- ಜೊತೆಗೆ ರಂಗಾಯಣ, ಶಿವಮೊಗ್ಗದಲ್ಲಿಯೇ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ನಾಟಕದ ಸಹಾಯಕ ನಿರ್ದೇಶಕರಿಗೆ ಗೌರವ ಸಂಭಾವನೆ ರೂ.15,000/- ಜೊತೆಗೆ ರಂಗಾಯಣ, ಶಿವಮೊಗ್ಗದಲ್ಲಿಯೇ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಆಸಕ್ತರು ಒಂದು ಬಿಳಿ ಹಾಳೆಯಲ್ಲಿ ವೈಯಕ್ತಿಕ ವಿವರ, ರಂಗಭೂಮಿಯ ಅನುಭವವನ್ನು ಬರೆದು ಸಹಿಯೊಂದಿಗೆ ಆಡಳಿತಾಧಿಕಾರಿಗಳು, ರಂಗಾಯಣ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ-577201 ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್ admn.rangayanashivamogga@gmail.com ಮೂಲಕ ಕಳುಹಿಸಬಹುದಾಗಿದೆ.

ಆಯ್ಕೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ರಂಗಾಯಣ, ಶಿವಮೊಗ್ಗದ್ದೆ ಆಗಿರುತ್ತದೆ. ಅರ್ಜಿಯ ಜೊತೆಯಲ್ಲಿ ಇತ್ತೀಚಿನ ಭಾವಚಿತ್ರ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ರಂಗಭೂಮಿ ಅನುಭವದ ವಿವರ, ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿ ಮಾ. 16ರೊಳಗಾಗಿ ಸಲ್ಲಿಸುವಂತೆ ಹಾಗೂ ಸಂದರ್ಶನದ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ರಂಗಾಯಣ, ಶಿವಮೊಗ್ಗ ಕಛೇರಿ, ದೂರವಾಣಿ ಸಂಖ್ಯೆ 08182-256353, 7975229166 ಯನ್ನು ಸಂಪರ್ಕಿಸಬಹುದಾಗಿದೆ.

-------------

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande