ಗಂಗೂಬಾಯಿ ಹಾನಗಲ್ ಜಯಂತಿ: ಡಿ.ಕೆ.ಶಿವಕುಮಾರ್ ನಮನ
ಬೆಂಗಳೂರು, 05 ಮಾರ್ಚ್ (ಹಿ.ಸ.): ಆ್ಯಂಕರ್:ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜೆ, ಪದ್ಮವಿಭೂಷಣ ಪುರಸ್ಕೃತ ಗಾನ ಕೋಗಿಲೆ ಡಾ. ಗಂಗೂಬಾಯಿ ಹಾನಗಲ್ ಅವರ ಜಯಂತಿಯ ಅಂಗವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹ
Dks


ಬೆಂಗಳೂರು, 05 ಮಾರ್ಚ್ (ಹಿ.ಸ.):

ಆ್ಯಂಕರ್:ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜೆ, ಪದ್ಮವಿಭೂಷಣ ಪುರಸ್ಕೃತ ಗಾನ ಕೋಗಿಲೆ ಡಾ. ಗಂಗೂಬಾಯಿ ಹಾನಗಲ್ ಅವರ ಜಯಂತಿಯ ಅಂಗವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಕಿರಾನಾ ಘರಾಣೆಯ ಸಂಗೀತ ಲೋಕದ ಮೇರು ಗಾಯಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಕಠಿಣ ಪರಿಶ್ರಮ, ಅಪ್ರತಿಮ ಪ್ರತಿಭೆ ಮತ್ತು ಅನನ್ಯ ಶೈಲಿಯ ಮೂಲಕ ಜಗತ್ತಿನಾದ್ಯಂತ ಕನ್ನಡ ನಾಡಿನ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಸ್ಮರಿಸಿದರು.

“ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡು ಅನೇಕ ಶಿಷ್ಯರನ್ನು ರೂಪಿಸಿದ ಈ ಅಪ್ರತಿಮ ಸಾಧಕಿ ನಮ್ಮೆಲ್ಲರಿಗೂ ಸದಾ ಸ್ಫೂರ್ತಿ. ಅವರ ಸಂಗೀತ ಪರಂಪರೆ ಮುಂದಿನ ಪೀಳಿಗೆಗಳಿಗೂ ದಾರಿ ದೀಪವಾಗಲಿ” ಎಂದು ಅವರು ಹೇಳಿದ್ದಾರೆ.

ಗಂಗೂಬಾಯಿ ಹಾನಗಲ್ ಅವರ ಸೇವೆ ಮತ್ತು ಸಾಧನೆಗಳು ಭಾರತೀಯ ಶಾಸ್ತ್ರೀಯ ಸಂಗೀತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿವೆ ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande