
ರಾಯಚೂರು, 04 ಮಾರ್ಚ್ (ಹಿ.ಸ.):
ಆ್ಯಂಕರ್:
ತಾಪಮಾನ ಏರಿಕೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ಮನವಿ ಮಾಡಿದ್ದಾರೆ.
ಮಾಡಬೇಕಾದುದು:
ಸಡಿಲ ಹತ್ತಿ ಬಟ್ಟೆ ಧರಿಸಬೇಕು, ಸಾಕಷ್ಟು ನೀರು–ಮಜ್ಜಿಗೆ–ಎಳೆನೀರು ಕುಡಿಯಬೇಕು, ಹೊರಗೆ ಹೋಗುವಾಗ ನೀರು ಜೊತೆಗೆ ಇರಿಸಬೇಕು, ಶುದ್ಧ ಆಹಾರ ಸೇವಿಸಬೇಕು, ಕೈ ತೊಳೆಯುವ ಅಭ್ಯಾಸ ಪಾಲಿಸಬೇಕು.
ಮಾಡಬಾರದದ್ದು:
ಗಾಢ/ಬಿಗಿಯಾದ ಬಟ್ಟೆ ಧರಿಸಬಾರದು, ಸೋಡಾ–ಕಾಫಿ–ಮದ್ಯಪಾನ ತಪ್ಪಿಸಬೇಕು, ಮಸಾಲೆಯುಕ್ತ ಆಹಾರ ಸೇವಿಸಬಾರದು, ಶುದ್ಧೀಕರಿಸದ ನೀರು ಕುಡಿಯಬಾರದು.
ಶಾಖಾಘಾತ ಲಕ್ಷಣಗಳು:
ಗಾಬರಿ, ಸ್ಪಷ್ಟವಲ್ಲದ ಮಾತು, ಅರೆಪ್ರಜ್ಞೆ, ದೇಹದ ಉಷ್ಣತೆ ಹೆಚ್ಚಳ.
ತುರ್ತು ಕ್ರಮ:
ನೆರಳಿಗೆ ಸ್ಥಳಾಂತರಿಸಿ, ಬಟ್ಟೆ ಸಡಿಲಗೊಳಿಸಿ, ಸಾಮಾನ್ಯ ನೀರಿನಿಂದ ಒರೆಸಿ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅಗತ್ಯವಿದ್ದರೆ 108ಕ್ಕೆ ಕರೆ ಮಾಡಬೇಕು.
ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa