
ಬಳ್ಳಾರಿ, 04 ಮಾರ್ಚ್ (ಹಿ.ಸ.):
ಆ್ಯಂಕರ್:
ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರು, ನಿವೃತ್ತ ಶಿಕ್ಷಕರು ಆಗಿದ್ದ ಬಸವೇಶ್ವರ ನಗರ ನಿವಾಸಿ ಎಂ. ಶರಭಯ್ಯ (88) ಅವರು ಬುಧವಾರ ಸಂಜೆ ಲಿಂಗೈಕ್ಯರಾಗಿದ್ದಾರೆ.
ಮೃತರು ಧರ್ಮಪತ್ನಿ ಶ್ರೀಮತಿ ಬಸಲಿಂಗಮ್ಮ,ಪುತ್ರ, ಸೊಸೆ, ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಶಿಷ್ಯವರ್ಗ, ಭಕ್ತರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಗುರು - ಹಿರಿಯರ ಸಮ್ಮುಖದಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ನೆರವೇರಲಿದೆ.
ವಿವರಗಳಿಗಾಗಿ ಪುತ್ರ ಎಂ. ಚಂದ್ರಮೌಳಿ, ಮೊಬೈಲ್ ಸಂಖ್ಯೆ +919986081469 ಗೆ ಕರೆ ಮಾಡಲು ಕೋರಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa