
ನವದೆಹಲಿ, 31 ಮಾರ್ಚ್ (ಹಿ.ಸ.):
ಆ್ಯಂಕರ್:
ಚಿನಿವಾರ ಮಾರುಕಟ್ಟೆಯಲ್ಲಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,48,270 ರಿಂದ ₹1,48,420 ರವರೆಗೆ ವಹಿವಾಟು ನಡೆಸುತ್ತಿದೆ. 22 ಕ್ಯಾರೆಟ್ ಚಿನ್ನದ ದರವು ₹1,35,910 ರಿಂದ ₹1,36,060 ರ ನಡುವೆ ದಾಖಲಾಗಿದೆ.
ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ ₹1,48,420 ಹಾಗೂ 22 ಕ್ಯಾರೆಟ್ ₹1,36,060 ದರದಲ್ಲಿ ಮಾರಾಟವಾಗುತ್ತಿದೆ. ಆರ್ಥಿಕ ರಾಜಧಾನಿ ಮುಂಬಯಿನಲ್ಲಿ 24 ಕ್ಯಾರೆಟ್ ₹1,48,270 ಮತ್ತು 22 ಕ್ಯಾರೆಟ್ ₹1,35,910 ದರ ದಾಖಲಾಗಿದೆ.
ಇದೇ ವೇಳೆ, ದೆಹಲಿ ಮಾರುಕಟ್ಟೆಯಲ್ಲಿ ಬೆಳ್ಳಿ ದರ ಪ್ರತಿ ಕಿಲೋಗ್ರಾಂಗೆ ₹2,44,900 ಮಟ್ಟದಲ್ಲಿ ಸ್ಥಿರವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa