ಪಶ್ಚಿಮ ಏಷ್ಯಾ ಬಿಕ್ಕಟ್ಟು: 36 ವಿಶೇಷ ವಿಮಾನಗಳ ಕಾರ್ಯಾಚರಣೆ – ಏರ್ ಇಂಡಿಯಾ ಘೋಷಣೆ
ನವದೆಹಲಿ, 31 ಮಾರ್ಚ್ (ಹಿ.ಸ.): ಆ್ಯಂಕರ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸಪ್ರೆಸ್ ಇಂದು (ಮಂಗಳವಾರ) ಒಟ್ಟು 36 ನಿಗದಿತ ಹಾಗೂ ನಿಗದಿತವಲ್ಲದ ವಿಶೇಷ ವಿಮಾನಗಳ ಕಾರ್ಯಾಚರಣೆ ನಡೆಸಲಿವೆ ಎಂದು ಪ್ರಕಟಿಸಿವೆ. ಟಾಟಾ ಗುಂ
Air India


ನವದೆಹಲಿ, 31 ಮಾರ್ಚ್ (ಹಿ.ಸ.):

ಆ್ಯಂಕರ್:

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸಪ್ರೆಸ್ ಇಂದು (ಮಂಗಳವಾರ) ಒಟ್ಟು 36 ನಿಗದಿತ ಹಾಗೂ ನಿಗದಿತವಲ್ಲದ ವಿಶೇಷ ವಿಮಾನಗಳ ಕಾರ್ಯಾಚರಣೆ ನಡೆಸಲಿವೆ ಎಂದು ಪ್ರಕಟಿಸಿವೆ.

ಟಾಟಾ ಗುಂಪಿನ ನೇತೃತ್ವದ ಈ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ಏಷ್ಯಾ ಪ್ರದೇಶಕ್ಕೆ ಮತ್ತು ಅಲ್ಲಿಂದ ಈ ವಿಶೇಷ ಸೇವೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿವೆ.

ವಿಮಾನಯಾನ ಸಂಸ್ಥೆಗಳ ಹೇಳಿಕೆಯ ಪ್ರಕಾರ, ಒಟ್ಟು 36 ವಿಮಾನಗಳಲ್ಲಿ ಸುಮಾರು 20 ವಿಮಾನಗಳು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಮತ್ತು ಅಲ್ಲಿಂದ ಕಾರ್ಯನಿರ್ವಹಿಸುವ ‘ನಿಗದಿತವಲ್ಲದ ಸೇವೆಗಳು’ ಆಗಿವೆ. ಈ ವಿಮಾನಗಳು ಮುಖ್ಯವಾಗಿ ದುಬೈ, ಅಬುಧಾಬಿ, ರಿಯಾದ್ ಮತ್ತು ಮಸ್ಕತ್ ಮೊದಲಾದ ಪ್ರಮುಖ ತಾಣಗಳನ್ನು ಸಂಪರ್ಕಿಸಲಿವೆ.

ಈ ಕಾರ್ಯಾಚರಣೆಗಳು ನಿರ್ಗಮನ ನಿಲ್ದಾಣಗಳಲ್ಲಿ ಸ್ಲಾಟ್ ಲಭ್ಯತೆ ಹಾಗೂ ಪ್ರಸ್ತುತ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಜೊತೆಗೆ, ಸಂಬಂಧಿತ ಭಾರತೀಯ ನಿಯಂತ್ರಕ ಸಂಸ್ಥೆಗಳು ಮತ್ತು ಯುಎಇ ಸ್ಥಳೀಯ ಅಧಿಕಾರಿಗಳಿಂದ ಅಗತ್ಯ ಅನುಮತಿಗಳನ್ನು ಪಡೆದ ಬಳಿಕವೇ ಎಲ್ಲಾ ವಿಮಾನಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ವಿದೇಶದಲ್ಲಿರುವ ಭಾರತೀಯರಿಗೆ ಹಾಗೂ ತುರ್ತು ಪ್ರಯಾಣಿಕರಿಗೆ ಈ ಕ್ರಮ ಮಹತ್ವದ ನೆರವಾಗಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande