ಪಿಎಸ್ಎಲ್ ಚೆಂಡು ವಿರೂಪ ವಿವಾದ: ಆರೋಪ ನಿರಾಕರಿಸಿದ ಫಖರ್ ಜಮಾನ್
ಲಾಹೋರ್, 30 ಮಾರ್ಚ್ (ಹಿ.ಸ.): ಆ್ಯಂಕರ್: ಪಿಎಸ್‌ಎಲ್ ನಲ್ಲಿ ಚೆಂಡು ವಿರೂಪಗೊಳಿಸುವಿಕೆ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಲಾಹೋರ್ ಖಲಂದರ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಫಖರ್ ಜಮಾನ್ ವಿರುದ್ಧ ಆರೋಪ ಕೇಳಿಬಂದಿದೆ. ಲಾಹೋರ್ ಖಲಂದರ್ಸ್ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಕರಾ
ಫಖರ್ ಜಮಾನ್


ಲಾಹೋರ್, 30 ಮಾರ್ಚ್ (ಹಿ.ಸ.):

ಆ್ಯಂಕರ್:

ಪಿಎಸ್‌ಎಲ್ ನಲ್ಲಿ ಚೆಂಡು ವಿರೂಪಗೊಳಿಸುವಿಕೆ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಲಾಹೋರ್ ಖಲಂದರ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಫಖರ್ ಜಮಾನ್ ವಿರುದ್ಧ ಆರೋಪ ಕೇಳಿಬಂದಿದೆ.

ಲಾಹೋರ್ ಖಲಂದರ್ಸ್ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಕರಾಚಿ ಇನ್ನಿಂಗ್ಸ್‌ನ ಅಂತಿಮ ಓವರ್‌ಗೆ ಮುನ್ನ ಚೆಂಡಿನ ಸ್ಥಿತಿಯನ್ನು ಬದಲಾಯಿಸಿದ ಆರೋಪ ಫಖರ್ ಜಮಾನ್ ಮೇಲೆ ಹೊರಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಅವರು ತಮ್ಮ ಸಹ ಆಟಗಾರರಾದ ಹಾರಿಸ್ ರೌಫ್ ಮತ್ತು ನಾಯಕ ಶಾಹಿದ್ ಅಫ್ರಿದಿ ಜೊತೆ ಚರ್ಚೆ ನಡೆಸುತ್ತಿರುವುದು ಕಂಡುಬಂದಿದೆ.

ಮೈದಾನದಲ್ಲಿದ್ದ ಅಂಪೈರ್ ಫೈಸಲ್ ಅಫ್ರಿದಿ ಅನುಮಾನಗೊಂಡು ಮಧ್ಯಪ್ರವೇಶಿಸಿ ಚೆಂಡನ್ನು ಪರಿಶೀಲಿಸಿದ ಬಳಿಕ, ಅದರ ಸ್ಥಿತಿಯಲ್ಲಿ ಬದಲಾವಣೆ ಕಂಡುಬಂದಿದೆ ಎಂದು ತೀರ್ಮಾನಿಸಿದರು. ಇದರಿಂದ ಕರಾಚಿ ಕಿಂಗ್ಸ್ ತಂಡಕ್ಕೆ ಐದು ರನ್ ಪೆನಾಲ್ಟಿ ನೀಡಲಾಗಿದ್ದು, ಅಂತಿಮ ಓವರ್‌ಗೆ ಹೊಸ ಚೆಂಡು ನೀಡಲಾಯಿತು. ಈ ನಿರ್ಧಾರ ಪಂದ್ಯ ಫಲಿತಾಂಶದ ಮೇಲೆ ಮಹತ್ವದ ಪರಿಣಾಮ ಬೀರಿತು.

ಪಂದ್ಯದ ನಂತರ ಪಿಸಿಬಿ ಹೇಳಿಕೆ ನೀಡಿದ್ದು, ಆಟಗಾರರ ನಡವಳಿಕಾ ಸಂಹಿತೆಯ ಆರ್ಟಿಕಲ್ 2.14 ಅಡಿಯಲ್ಲಿ ಲೆವೆಲ್-3 ಅಪರಾಧವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದೆ.

ಮ್ಯಾಚ್ ರೆಫರಿ ರೋಶನ್ ಮಹಾನಾಮ ನೇತೃತ್ವದ ವಿಚಾರಣೆಯಲ್ಲಿ ಫಖರ್ ಜಮಾನ್ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಮುಂದಿನ 48 ಗಂಟೆಗಳ ಒಳಗೆ ಮತ್ತೆ ವಿಚಾರಣೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.

ಇದಾಗ್ಯೂ, ಪಂದ್ಯದಲ್ಲಿ ಐದು ರನ್ ಪೆನಾಲ್ಟಿಯ ನಂತರ ಕರಾಚಿ ಕಿಂಗ್ಸ್‌ಗೆ ಅಂತಿಮ ಓವರ್‌ನಲ್ಲಿ 9 ರನ್ ಅಗತ್ಯವಿದ್ದು, ಆಲ್‌ರೌಂಡರ್ ಅಬ್ಬಾಸ್ ಅಫ್ರಿದಿ ರೌಫ್ ಬೌಲಿಂಗ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಗೆಲುವು ಸಾಧಿಸಿದರು.

ಆರೋಪ ಸಾಬೀತಾದರೆ, ಫಖರ್ ಜಮಾನ್ ಹಾಗೂ ಲಾಹೋರ್ ಖಲಂದರ್ಸ್ ತಂಡ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗಬಹುದು – ಅಮಾನತು ಅಥವಾ ಭಾರೀ ದಂಡ ಸೇರಿ ಕ್ರಮಗಳು ಸಾಧ್ಯವೆಂದು ಮೂಲಗಳು ತಿಳಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande