ಭಾನುವಾರದ ಭವಿಷ್ಯ
ಹುಬ್ಬಳ್ಳಿ, 29 ಮಾರ್ಚ್ (ಹಿ.ಸ.): ಆ್ಯಂಕರ್: *ಮೇಷ ರಾಶಿ.* ಪ್ರಯಾಣಗಳಲ್ಲಿ ಹೊಸ ಪರಿಚಯಗಳು ಉಂಟಾಗುತ್ತವೆ. ನೂತನ ವ್ಯಾಪಾರಗಳಲ್ಲಿ ಸ್ಥಿರ ಲಾಭಗಳನ್ನು ಗಳಿಸುತ್ತೀರಿ. ಇತರರ ವ್ಯವಹಾರಗಳಿಂದ ದೂರವಿರುವುದು ಉತ್ತಮ. ಉದ್ಯೋಗದಲ್ಲಿ ಅಧಿಕಾರಿಗಳ ಸಹಕಾರ ದೊರೆಯುತ್ತದೆ. ಆರ್ಥಿಕ ಸ್ಥಿತಿ ಅನುಕೂಲಕರವಾಗಿರ
ಭಾನುವಾರದ ಭವಿಷ್ಯ


ಹುಬ್ಬಳ್ಳಿ, 29 ಮಾರ್ಚ್ (ಹಿ.ಸ.):

ಆ್ಯಂಕರ್:

*ಮೇಷ ರಾಶಿ.*

ಪ್ರಯಾಣಗಳಲ್ಲಿ ಹೊಸ ಪರಿಚಯಗಳು ಉಂಟಾಗುತ್ತವೆ. ನೂತನ ವ್ಯಾಪಾರಗಳಲ್ಲಿ ಸ್ಥಿರ ಲಾಭಗಳನ್ನು ಗಳಿಸುತ್ತೀರಿ. ಇತರರ ವ್ಯವಹಾರಗಳಿಂದ ದೂರವಿರುವುದು ಉತ್ತಮ. ಉದ್ಯೋಗದಲ್ಲಿ ಅಧಿಕಾರಿಗಳ ಸಹಕಾರ ದೊರೆಯುತ್ತದೆ. ಆರ್ಥಿಕ ಸ್ಥಿತಿ ಅನುಕೂಲಕರವಾಗಿರುತ್ತದೆ. ನಿರುದ್ಯೋಗಿಗಳ ಪ್ರಯತ್ನಗಳು ಫಲಕಾರಿಯಾಗುತ್ತವೆ.

*ವೃಷಭ ರಾಶಿ.*

ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ದೂರ ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಮನೆ ಮತ್ತು ಹೊರಗಿನ ಪರಿಸ್ಥಿತಿಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಬಾಲ್ಯದ ಸ್ನೇಹಿತರೊಂದಿಗೆ ವಿವಾದಗಳು ಉಂಟಾಗುತ್ತವೆ. ವೃತ್ತಿ ಹಾಗೂ ಉದ್ಯೋಗದಲ್ಲಿ ಇತರರಿಂದ ಟೀಕೆಗಳು ಎದುರಾಗುತ್ತದೆ. ನಿರುದ್ಯೋಗಿಗಳಿಗೆ ಮಿಶ್ರ ಫಲಿತಾಂಶಗಳು ಲಭಿಸುತ್ತವೆ.

*ಮಿಥುನ ರಾಶಿ.*

ಮೌಲ್ಯಯುತ ವಸ್ತ್ರಾಭರಣಗಳನ್ನು ಖರೀದಿಸುವಿರಿ. ವೃತ್ತಿ ಮತ್ತು ವ್ಯಾಪಾರಗಳಲ್ಲಿ ಶ್ರಮಕ್ಕೆ ತಕ್ಕ ಫಲ ದೊರೆಯುವುದು. ದೂರದ ಬಂಧುಗಳಿಂದ ಶುಭಕಾರ್ಯಗಳ ಆಹ್ವಾನಗಳು ಬರಲಿವೆ. ಸಂತಾನದ ವಿದ್ಯಾಭ್ಯಾಸ ಸಂಬಂಧಿತ ಹೊಸ ಅವಕಾಶಗಳು ದೊರೆಯುವವು. ಉದ್ಯೋಗಿಗಳಿಗೆ ಪದೋನ್ನತಿ ಯೋಗವಿದೆ. ಆರ್ಥಿಕ ಸ್ಥಿತಿ ಅನುಕೂಲಕರವಾಗಿರುತ್ತದೆ.

*ಕಟಕ ರಾಶಿ.*

ಸಹೋದರರೊಂದಿಗೆ ಆಸ್ತಿ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಬಂಧು ಮಿತ್ರರೊಂದಿಗೆ ನಡೆದಿರುವ ಕಲಹಗಳು ಪರಿಹಾರದ ದಿಕ್ಕಿನಲ್ಲಿ ಸಾಗುವವು. ಪ್ರಮುಖ ಕಾರ್ಯಗಳಲ್ಲಿ ಶ್ರಮಕ್ಕೆ ತಕ್ಕ ಫಲ ದೊರೆಯದಿರಬಹುದು. ಆರೋಗ್ಯದ ಕಡೆ ವಿಶೇಷ ಗಮನ ಅಗತ್ಯ. ವಾಹನ ಪ್ರಯಾಣಗಳಲ್ಲಿ ಎಚ್ಚರಿಕೆ ಅಗತ್ಯ. ವೃತ್ತಿ ಹಾಗೂ ಉದ್ಯೋಗದಲ್ಲಿ ಹೆಚ್ಚುವರಿ ಕೆಲಸದ ಭಾರ ಎದುರಾಗುವುದು.

*ಸಿಂಹ ರಾಶಿ.*

ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಕಾರ್ಯಗಳನ್ನು ನಿಧಾನವಾಗಿ ಪೂರ್ಣಗೊಳಿಸುವಿರಿ. ಆರ್ಥಿಕ ಸ್ಥಿತಿ ತೃಪ್ತಿಕರವಾಗಿರುತ್ತದೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳ ಪರಿಚಯಗಳು ಹೆಚ್ಚಾಗುವವು. ಕುಟುಂಬದೊಂದಿಗೆ ಸಂತೋಷವಾಗಿ ಸಮಯ ಕಳೆಯುವಿರಿ. ವೃತ್ತಿ ಮತ್ತು ವ್ಯಾಪಾರಗಳಲ್ಲಿ ಲಾಭ ಕಂಡುಬರುವುದು. ದೀರ್ಘಕಾಲದ ಸಾಲ ಸಮಸ್ಯೆಗಳು ಕೆಲಮಟ್ಟಿಗೆ ನಿವಾರಣೆಯಾಗುವವು.

*ಕನ್ಯಾ ರಾಶಿ.*

ಸಾಲ ತೀರಿಸುವ ಪ್ರಯತ್ನಗಳು ಯಶಸ್ವಿಯಾಗುವವು. ಗೃಹ ನಿರ್ಮಾಣ ಕಾರ್ಯಗಳು ವೇಗ ಪಡೆಯುವವು. ಅನಾರೋಗ್ಯ ಸಮಸ್ಯೆಗಳಿಂದ ಹೊರಬರುವಿರಿ. ಉದ್ಯೋಗದಲ್ಲಿ ಅಧಿಕಾರಿಗಳ ಮೆಚ್ಚುಗೆ ದೊರೆಯುವುದು. ಕೈಗೊಂಡ ಕಾರ್ಯಗಳು ಅಡಚಣೆಗಳಿದ್ದರೂ ನಿಧಾನವಾಗಿ ಪೂರ್ಣಗೊಳ್ಳುವವು. ಆರ್ಥಿಕ ಸ್ಥಿತಿ ಸಾಮಾನ್ಯವಾಗಿದ್ದರೂ ಅಗತ್ಯಕ್ಕೆ ಹಣ ಲಭಿಸುವುದು.

*ತುಲಾ ರಾಶಿ.*

ಪ್ರಮುಖ ಕಾರ್ಯಗಳಲ್ಲಿ ಜೀವನ ಸಂಗಾತಿಯ ಸಹಕಾರ ದೊರೆಯುವುದು. ಕೈಗೊಂಡ ಕಾರ್ಯಗಳಲ್ಲಿ ಅಪ್ರಯತ್ನ ಸಾಧನೆ ಕಂಡುಬರುವುದು. ಆತ್ಮೀಯರಿಂದ ಶುಭವಾರ್ತೆಗಳು ದೊರೆಯುವವು. ಆರ್ಥಿಕ ಸ್ಥಿತಿ ಅನುಕೂಲಕರವಾಗಿರುತ್ತದೆ. ಸ್ನೇಹಿತರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಮೌಲ್ಯಯುತ ವಸ್ತ್ರಾಭರಣಗಳನ್ನು ಖರೀದಿಸುವಿರಿ. ನಿರುದ್ಯೋಗಿಗಳ ಪ್ರಯತ್ನಗಳು ಫಲಕಾರಿಯಾಗುವವು.

*ವೃಶ್ಚಿಕ ರಾಶಿ.*

ಆರ್ಥಿಕ ಸ್ಥಿತಿ ನಿರೀಕ್ಷಿತ ಮಟ್ಟದಲ್ಲಿರುವುದಿಲ್ಲ. ನಿರುದ್ಯೋಗಿಗಳು ದೊರೆತ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಳ್ಳಲು ವಿಫಲರಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುವವು. ವೃತ್ತಿ ಹಾಗೂ ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಸೂಚನೆಗಳಿವೆ. ದೂರ ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ದೈವ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

*ಧನುಸ್ಸು ರಾಶಿ.*

ಭೂಸಂಬಂಧಿತ ವಿವಾದಗಳಲ್ಲಿ ಹೊಸ ಒಪ್ಪಂದಗಳು ಆಗುತ್ತವೆ . ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತೀರಿ. ವೃತ್ತಿ ಮತ್ತು ವ್ಯಾಪಾರಗಳಲ್ಲಿ ಲಾಭ ಕಂಡುಬರುತ್ತದೆ. ಕೈಗೊಂಡ ಕಾರ್ಯಗಳು ಅಡಚಣೆಗಳಿದ್ದರೂ ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಆಕಸ್ಮಿಕ ಧನಲಾಭ ಯೋಗವಿದೆ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ. ದೈವ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ.

*ಮಕರ ರಾಶಿ.*

ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ ಹಿರಿಯರ ಪ್ರಶಂಸೆ ಪಡೆಯುತ್ತೀರಿ. ಹಳೆಯ ಸ್ನೇಹಿತರಿಂದ ಶುಭಕಾರ್ಯಗಳ ಆಹ್ವಾನಗಳು ದೊರೆಯುತ್ತವೆ . ಪ್ರಮುಖ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ವೃತ್ತಿ ಮತ್ತು ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಹೊಸ ವಾಹನ ಖರೀದಿ ಯೋಗವಿದೆ.

*ಕುಂಭ ರಾಶಿ.*

ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯ. ವ್ಯರ್ಥ ಖರ್ಚುಗಳನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಕೈಗೊಂಡ ಕಾರ್ಯಗಳು ನಿಧಾನವಾಗಿ ಸಾಗುತ್ತದೆ. ವೃತ್ತಿ ಮತ್ತು ವ್ಯಾಪಾರಗಳಲ್ಲಿ ಇತರರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತದೆ. ಉದ್ಯೋಗದಲ್ಲಿ ಸ್ವಲ್ಪ ಅಡಚಣೆಗಳು ಎದುರಾಗುತ್ತವೆ. ಸಂತಾನದ ವಿದ್ಯಾಭ್ಯಾಸದ ಮೇಲೆ ಗಮನ ಹರಿಸುತ್ತೀರಿ.

*ಮೀನ ರಾಶಿ.*

ಮನೆ ಹಾಗೂ ಹೊರಗಿನ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ಆತ್ಮೀಯರಿಂದ ಅಪರೂಪದ ಆಹ್ವಾನಗಳು ದೊರೆಯುತ್ತವೆ . ವೃತ್ತಿ ಮತ್ತು ಉದ್ಯೋಗದಲ್ಲಿ ಕೆಲಸದ ಒತ್ತಡದಿಂದ ನಿವಾರಣೆ ದೊರೆಯುವುದು. ಪ್ರಯಾಣಗಳಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗುವುದು. ಕೈಗೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ವ್ಯಾಪಾರಗಳಲ್ಲಿ ಲಾಭ ಕಂಡುಬರುತ್ತವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande