ಚನ್ನಸಂದ್ರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ
ಚನ್ನಸಂದ್ರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ
ಕೋಲಾರ ತಾಲ್ಲೂಕಿನ ಚನ್ನಸಂದ್ರದಲ್ಲಿ ವಿಶ್ವರಂಗಭೂಮಿ ದಿನದ ಅಂಗವಾಗಿ ಈನೆಲ ಈಜಲ ಕಲಾ ತಂಡದಿAದ ಬೀದಿ ನಾಟಕ ಪ್ರದರ್ಶನ ನಡೆಯಿತು.


ಕೋಲಾರ ಮಾರ್ಚ್ ೨೮ (ಹಿ.ಸ):

ಆ್ಯಂಕರ್ : ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ‘ಈ ನೆಲ ಈ ಜಲ’ ಕಲಾ ತಂಡದ ವತಿಯಿಂದ ಅರ್ಥಪೂರ್ಣ ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಂಗಭೂಮಿಯು ಕೇವಲ ಮನರಂಜನೆಯ ಮಾಧ್ಯಮವಾಗದೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿಯಾಗಿದೆ ಎಂದು ಈ ಸಂದರ್ಭದಲ್ಲಿ ಕಲಾವಿದರು ಸಾರಿದರು.

ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಂಡದ ಕಲಾವಿದರು ಸಾಮಾಜಿಕ ಪಿಡುಗುಗಳು, ಪರಿಸರ ಸಂರಕ್ಷಣೆ ಮತ್ತು ಮಣ್ಣಿನ ಗುಣದ ಕುರಿತು ಜಾಗೃತಿ ಮೂಡಿಸುವ ನಾಟಕವನ್ನು ಪ್ರದರ್ಶಿಸಿದರು. ಗ್ರಾಮೀಣ ಭಾಗದಲ್ಲಿ ರಂಗಭೂಮಿ ಚಟುವಟಿಕೆಗಳು ಜೀವಂತವಾಗಿದ್ದಾಗ ಮಾತ್ರ ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯ ಎಂದು ಕಾರ್ಯಕ್ರಮದ ಸಂಘಟಕರು ಆಶಯ ವ್ಯಕ್ತಪಡಿಸಿದರು. ನಾಟಕದ ಸಂಭಾಷಣೆ ಮತ್ತು ಕಲಾವಿದರ ನೈಪುಣ್ಯತೆಗೆ ಗ್ರಾಮಸ್ಥರು ಮನಸೋತರು. ಡಿಜಿಟಲ್ ಯುಗದ ಅಬ್ಬರದ ನಡುವೆಯೂ ರಂಗಭೂಮಿಯ ನೈಜತೆಯನ್ನು ಉಳಿಸಿಕೊಳ್ಳುವ ಇಂತಹ ಪ್ರಯತ್ನಗಳಿಗೆ ಸ್ಥಳೀಯ ಮುಖಂಡರು ಶ್ಲಾಘನೆ ವ್ಯಕ್ತಪಡಿಸಿದರು.

ನಾಟಕ ಪ್ರದರ್ಶನದಲ್ಲಿ ಈನೆಲ ಈಜಲ ಬಿ.ವೆಂಕಟಾಚಲಪತಿ, ಹೆಚ್.ಶಾಂತಮ್ಮ, ಕುಡುವನಹಳ್ಳಿ ಗಣೇಶಪ್ಪ, ಮುನಿರತ್ನಮ್ಮ, ವೀರಸ್ವಾಮಿ ಮುಂತಾದ ಕಲಾವಿದರು ನಾಟಕ ಪ್ರದರ್ಶನ ನೀಡಿದರು. ಚನ್ನಸಂದ್ರ ಗ್ರಾಮದ ಪ್ರಮುಖರು, ಕಲಾಭಿಮಾನಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande