ಮಹಿಳೆ ದುರ್ಬಲಳಲ್ಲ ಬಲಶಾಲಿ:ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಪಿರಿಯಾಪಟ್ಟಣ, 28 ಮಾರ್ಚ್ (ಹಿ.ಸ.): ಆ್ಯಂಕರ್:ಮಹಿಳೆಯರು ಇವತ್ತು ಕಟ್ಟುಪಾಡುಗಳನ್ನು ಒಡೆದು ಮುಂದೆ ಸಾಗುತ್ತಿದ್ದಾರೆ. ಸ್ವಾಭಿಮಾನದ ಜೀವನ ಕಂಡುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಪಿರಿಯಾಪಟ್ಟಣ ತಾಲೂಕು ಆಡಳಿತ ಹಾಗೂ ತಾಲೂಕು ‌
ಹೆಬ್ಬಾಳಕರ್


ಪಿರಿಯಾಪಟ್ಟಣ, 28 ಮಾರ್ಚ್ (ಹಿ.ಸ.):

ಆ್ಯಂಕರ್:ಮಹಿಳೆಯರು ಇವತ್ತು ಕಟ್ಟುಪಾಡುಗಳನ್ನು ಒಡೆದು ಮುಂದೆ ಸಾಗುತ್ತಿದ್ದಾರೆ. ಸ್ವಾಭಿಮಾನದ ಜೀವನ ಕಂಡುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಪಿರಿಯಾಪಟ್ಟಣ ತಾಲೂಕು ಆಡಳಿತ ಹಾಗೂ ತಾಲೂಕು ‌ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ‌ ಸಚಿವರು ಮಾತನಾಡಿದರು.

ಮೊದಲು ಮಹಿಳೆಯರಿಗೆ ಎಷ್ಟು ಕಷ್ಟವಿತ್ತು. ಗಂಡಸರನ್ನು ಮಾತನಾಡಿಸುವಾಗ ಹೆಂಗಸರು ತಲೆ ಬಗ್ಗಿಸಿ ಮಾತನಾಡಬೇಕಿತ್ತು. ತಲೆಯ ಮೇಲೆ ಸೆರಗು ಮುಚ್ಚಿಕೊಳ್ಳಬೇಕಿತ್ತು. ಮೌನಕ್ಕೆ ಶರಣಾಗಬೇಕಿತ್ತು, ಸ್ವಾಭಿಮಾನ ಹತ್ತಿಕ್ಕಿಕೊಳ್ಳಬೇಕಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮಹಿಳೆಯನ್ನು ದುರ್ಬಲ ಎಂದು ನೋಡುವ ಕಾಲ ಮುಗಿದಿದೆ. ಮಹಿಳೆಯನ್ನು ನಿರ್ಧಾರ ಮಾಡುವ ಶಕ್ತಿಯಾಗಿ ಗುರುತಿಸುವ ಕಾಲ ಬಂದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗೃಹಲಕ್ಷ್ಮಿ ಯೋಜನೆಯನ್ನು ಹಕ್ಕಿನಿಂದ ತೆಗೆದುಕೊಂಡು, ಶಕ್ತಿ ಯೋಜನೆಯಲ್ಲಿ ಬಹಳ ಸ್ವಾಭಿಮಾನದಿಂದ ಪ್ರಯಾಣ ಮಾಡುತ್ತಿದ್ದಾಳೆ. ಒಬ್ಬ ಮಹಿಳಾ ಮಂತ್ರಿಯಾಗಿ ಇದಕ್ಕಿಂತ ಸಂತೋಷ ಇನ್ನೊಂದಿಲ್ಲ. ನಾನು ರಾಣಿ ಚನ್ನಮ್ಮನ ವಂಶಸ್ಥೆ, 300 ವರ್ಷ ನಮ್ಮನ್ನು ಆಳಿದ ಬ್ರಿಟಿಷರ ವಿರುದ್ಧ ಟೊಂಕಕಟ್ಟಿ ಹೋರಾಡಿದ ಮಹಿಳೆ ನಮ್ಮ ಕಿತ್ತೂರು ರಾಣಿ ಚನ್ನಮ್ಮ. ದೊಡ್ಡ ದೊಡ್ಡ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಸ್ವಾಭಿಮಾನಿ ಮಹಿಳೆ ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ. ಇದರರ್ಥ ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಮಾನವನ ಕರ್ತವ್ಯ ಎಂದರು.

ನಮ್ಮ ಮಕ್ಕಳೇ ಮುಂದಿನ ಭವಿಷ್ಯ, ಸುಮ್ಮನಿರು ಎನ್ನುವುದನ್ನು ಬಿಟ್ಟು ಮಾತನಾಡು ಎಂದು ನಾವು ಮಗಳಿಗೆ ಹೇಳಿಕೊಡಬೇಕು. ಕೇವಲ ವಿದ್ಯಾಭ್ಯಾಸ ಕಲಿಸದೇ ಸ್ವಂತ ಕಾಲಮೇಲೆ ನಿಲ್ಲುವಂತೆ ನಿಮ್ಮ ಮಕ್ಕಳನ್ನು ರೂಪಿಸಿ, ಸ್ವಾಭಿಮಾನದ ಪಾಠವನ್ನು ಕಲಿಸಬೇಕು, ಬೇರೆಯವರಿಗೆ ಗೌರವ ಕೊಡುವುದರ ಜೊತೆಗೆ ನಿನಗೆ ನೀನು ಗೌರವ ಕೊಡುವುದನ್ನು ಕಲಿ ಎಂಬುದನ್ನು ಕಲಿಸಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಾವು ಆರ್ಥಿಕವಾಗಿ ಸಬಲೀಕರಣಗೊಂಡರೆ ಬೇರೆಯವರು ನಮಗೆ ಮರ್ಯಾದೆಯನ್ನು ಕೊಡುತ್ತಾರೆ. ಹೀಗಾಗಿ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ಇದು ನಮಗೆ ಸ್ವಾಭಿಮಾನದ ಪ್ರಶ್ನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande