ಇಂಡಿ ಪಟ್ಟಣದಲ್ಲಿ ಕಳ್ಳರ ಕಾಟ: ವ್ಯಾಪಾರಸ್ಥರಲ್ಲಿ ಆತಂಕ
ವಿಜಯಪುರ, 28 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ಪಟ್ಟಣದ ಅಂಗಡಿ, ಮನೆಗಳನ್ನು ಬಿಡದೇ ನಿರಂತರವಾಗಿ ಕಳ್ಳರು ತಮ್ಮ ಕೈಚಳಕ ತೊರಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ಹಾಗೂ ವ್ಯಾಪಾರಸ್ಥರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಪಟ್ಟಣದ ಮಹಾವೀರ್
ಇಂಡಿ ಪಟ್ಟಣದಲ್ಲಿ ಕಳ್ಳರ ಕಾಟ: ವ್ಯಾಪಾರಸ್ಥರಲ್ಲಿ ಆತಂಕ


ವಿಜಯಪುರ, 28 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ಪಟ್ಟಣದ ಅಂಗಡಿ, ಮನೆಗಳನ್ನು ಬಿಡದೇ ನಿರಂತರವಾಗಿ ಕಳ್ಳರು ತಮ್ಮ ಕೈಚಳಕ ತೊರಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ಹಾಗೂ ವ್ಯಾಪಾರಸ್ಥರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.

ಪಟ್ಟಣದ ಮಹಾವೀರ್ ಸರ್ಕಲ್ನಲ್ಲಿರುವ ಪ್ರಮೋದ್ ಟ್ರೇಡರ್ಸ್ ಅಂಗಡಿಯ ಮಾಲೀಕರ ಮನೆಯಲ್ಲಿ ಕಳ್ಳರು ನುಗ್ಗಿ ಕಳ್ಳತನ ನಡೆಸಿದ್ದಾರೆ. ಮನೆಯಲ್ಲಿ ಇರಿಸಿದ್ದ ಸುಮಾರು ೮ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಸುಮಾರು ೨ ಲಕ್ಷ ರೂಪಾಯಿ ನಗದು ಕಳ್ಳರು ಕದ್ದ ಪರಾರಿಯಾಗಿದ್ದಾರೆ.

ಕುಟುಂಬದವರು ಬೇರೆ ಊರಿಗೆ ತೆರಳಿದ್ದರು. ಇದನ್ನು ಗಮನಿಸಿ

ರಾತ್ರಿ ವೇಳೆಯಲ್ಲಿ ಮನೆಗೆ ನುಗ್ಗಿದ ಕಳ್ಳರು ಅಲ್ಮಾರಿಗಳನ್ನು ಒಡೆದು ಆಭರಣ ಮತ್ತು ಹಣವನ್ನು ಕದ್ದೊಯ್ದಿದ್ದಾರೆ.

ಅದೇ ರೀತಿ ವೀರೇಂದ್ರ ಪಾಂಡ್ರೆ ಅವರ ಅಂಗಡಿ ಬಾಗಿಲು ಒಡೆದು ೫ ಸಾವಿರ ನಗದು ಹಾಗೂ ೩ ಲಕ್ಷದ ಸಿಗರೇಟ್ ಪಾನ್ ಮಸಾಲಾ ಸೇರಿದಂತೆ ಹಲವು ಬೆಲೆ ಬಾಳುವ ವಸ್ತುಗಳನ್ನು ಕದ್ದ ಖದೀಮರು ಸಿಸಿ ಟಿವಿ ಡಿವಿಆರ್ ನ್ನು ಕಿತ್ತಕೊಂಡು ಪರಾರಿ ಆಗಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಇಂಡಿ ಪಟ್ಟಣ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳತನ ನಡೆದ ಮನೆಯ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಮುಂದುವರೆಸಿದ್ದಾರೆ.

ಈ ಘಟನೆ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದ್ದು, ಪಟ್ಟಣದಲ್ಲಿ ರಾತ್ರಿ ವೇಳೆ ಪೊಲೀಸ್ ಪೆಟ್ರೋಲಿಂಗ್ ಹೆಚ್ಚಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande