ಮೈಸೂರು - ಅಜ್ಮೀರು ರೈಲು ಸಂಚಾರಕ್ಕೆ ಮನವಿ
ನವದೆಹಲಿ, 28 ಮಾರ್ಚ್ (ಹಿ.ಸ.) ಆ್ಯಂಕರ್ : ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ನವದೆಹಲಿಯಲ್ಲಿ ಶನಿವಾರ ಮಧ್ಯಾಹ್ನ ಭೇಟಿ ಮಾಡಿ, ಮೈಸೂರು - ಅಜ್ಮೀರು ರೈಲನ್ನು ಚಿತ್ರದುರ್ಗ, ರಾಯದುರ್ಗ ಮತ್ತು ಹೊಸಪೇಟೆ ಮಾರ್ಗದಲ್ಲಿ ವಾರದ ಒಂದು ದಿನ ಮತ್ತು
ಮೈಸೂರು - ಅಜ್ಮೀರು ರೈಲು ಸಂಚಾರಕ್ಕೆ ಮನವಿ


ಮೈಸೂರು - ಅಜ್ಮೀರು ರೈಲು ಸಂಚಾರಕ್ಕೆ ಮನವಿ


ಮೈಸೂರು - ಅಜ್ಮೀರು ರೈಲು ಸಂಚಾರಕ್ಕೆ ಮನವಿ


ನವದೆಹಲಿ, 28 ಮಾರ್ಚ್ (ಹಿ.ಸ.)

ಆ್ಯಂಕರ್ : ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ನವದೆಹಲಿಯಲ್ಲಿ ಶನಿವಾರ ಮಧ್ಯಾಹ್ನ ಭೇಟಿ ಮಾಡಿ, ಮೈಸೂರು - ಅಜ್ಮೀರು ರೈಲನ್ನು ಚಿತ್ರದುರ್ಗ, ರಾಯದುರ್ಗ ಮತ್ತು ಹೊಸಪೇಟೆ ಮಾರ್ಗದಲ್ಲಿ ವಾರದ ಒಂದು ದಿನ ಮತ್ತು ದಾವಣಗೆರೆ - ಕೊಟ್ಟೂರು ಮಾರ್ಗದಲ್ಲಿ ಒಂದು ದಿನ ಸಂಚರಿಸುವಂತೆ ಕ್ರಮಕೈಗೊಳ್ಳಲು ಕೋರಿ ಮನವಿ ಸಲ್ಲಿಸಿದೆ.

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯುಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ನಿಯೋಗವು ಅವರನ್ನು ಭೇಟಿ ಮಾಡಿ, ಬಳ್ಳಾರಿ - ಸಿರುಗುಪ್ಪ - ಸಿಂಧನೂರು ರೈಲ್ವೆ ಮಾರ್ಗದ ಪ್ರಧಾನ ಬೇಡಿಕೆಯ ಕುರಿತು ಸಚಿವರ ಜೊತೆಯಲ್ಲಿ ಚರ್ಚೆ ನಡೆಸಿದಾಗ, ಸಚಿವರು ಬಳ್ಳಾರಿ ಮಾರ್ಗದಲ್ಲಿ `ವಂದೇ ಭಾರತ್', ಸೂಪರ್ ಫಾಸ್ಟ್ ಜನ ಶತಾಬ್ದಿ ಅಥವಾ ಇಂಟರ್ ಸಿಟಿ ರೈಲು ಆರಂಭಿಸುವಂತೆ ರೈಲ್ವೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದರು.

ಆಗ, ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ಸಚಿವ ವಿ. ಸೋಮಣ್ಣ ಅವರನ್ನು ಸನ್ಮಾನಿಸಿ ಅಭಿನಂದಿಸಿ, ಹೆಚ್ಚಿನ ಪ್ರಮಾಣದಲ್ಲಿ ರೈಲುಗಳನ್ನು ಬಳ್ಳಾರಿ ಮಾರ್ಗವಾಗಿ ಸಂಚರಿಸುವಂತೆ ಕ್ರಮಕೈಗೊಳ್ಲಲು ಕೋರಿತು.

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಲ್ಲಿ ಸಿರುಗುಪ್ಪ ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷರಾದ ಎನ್.ಜಿ. ಬಸವರಾಜಪ್ಪ, ಸಿರುಗುಪ್ಪ ಎಪಿಎಂಸಿ ಮಾಜಿ ನಿರ್ದೇಶಕರಾದ ಪಲ್ಲೇದ್ ಯೋಗರಾಜ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಕಾರ್ಯದರ್ಶಿಗಳಾದ ಕೋಳೂರು ಚಂದ್ರಶೇಖರ ಗೌಡ, ಸಿರುಗುಪ್ಪ ವಿಷ್ಣು ವಿಲಾಸ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ನಿರ್ದೇಶಕರಾದ ಕೋಸಗಿ ನಾಗರಾಜ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande