ವಿಜಯಪುರದಲ್ಲಿ ನಾಳೆ ಭವ್ಯ ರಾಮನವಮಿ ಶೋಭಾಯಾತ್ರೆ
ವಿಜಯಪುರ, 28 ಮಾರ್ಚ್ (ಹಿ.ಸ.) ಆ್ಯಂಕರ್ : ರಾಮನವಮಿ ಉತ್ಸವದ ಅಂಗವಾಗಿ ವಿಜಯಪುರದಲ್ಲಿ ಭವ್ಯ ಶೋಭಾಯಾತ್ರೆ ಆಯೋಜಿಸಲಾಗಿದ್ದು, ರಾಮನವಮಿ ಉತ್ಸವ ಸಮಿತಿ ವಿಜಯಪುರದ ವತಿಯಿಂದ ನಾಳೆ ರವಿವಾರ ಸಂಜೆ 4 ಗಂಟೆಗೆ ನಗರದ ಶ್ರೀರಾಮ ಮಂದಿರದಿಂದ ಶೋಭಾಯಾತ್ರೆ ಪ್ರಾರಂಭವಾಗಲುವುದು ಎಂದು ಸಮಿತಿ ಅಧ್ಯಕ್ಷ ರಘು ಅಣ್ಣಿ
ರಾಮನವಮಿ


ವಿಜಯಪುರ, 28 ಮಾರ್ಚ್ (ಹಿ.ಸ.)

ಆ್ಯಂಕರ್ : ರಾಮನವಮಿ ಉತ್ಸವದ ಅಂಗವಾಗಿ ವಿಜಯಪುರದಲ್ಲಿ ಭವ್ಯ ಶೋಭಾಯಾತ್ರೆ ಆಯೋಜಿಸಲಾಗಿದ್ದು, ರಾಮನವಮಿ ಉತ್ಸವ ಸಮಿತಿ ವಿಜಯಪುರದ ವತಿಯಿಂದ ನಾಳೆ ರವಿವಾರ ಸಂಜೆ 4 ಗಂಟೆಗೆ ನಗರದ ಶ್ರೀರಾಮ ಮಂದಿರದಿಂದ ಶೋಭಾಯಾತ್ರೆ ಪ್ರಾರಂಭವಾಗಲುವುದು ಎಂದು ಸಮಿತಿ ಅಧ್ಯಕ್ಷ ರಘು ಅಣ್ಣಿಗೇರಿ ತಿಳಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನವಮಿ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ವಿಜೃಂಭಣೆಯಿಂದ ಆಚರಿಸುವ ಉದ್ದೇಶದಿಂದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಸ್ತ ಹಿಂದೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸಿ ರಾಮನವಮಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande