ಮಾರ್ಚ್ 31ರಂದು ಪ್ರಧಾನಿ ಮೋದಿ ಗುಜರಾತ ಭೇಟಿ
ಗಾಂಧಿನಗರ, 28 ಮಾರ್ಚ್ (ಹಿ.ಸ.): ಆ್ಯಂಕರ್:ನರೇಂದ್ರ ಮೋದಿ ಅವರು ಮಾರ್ಚ್ 31ರಂದು ಗುಜರಾತಗೆ ಒಂದು ದಿನದ ಭೇಟಿಗೆ ಆಗಮಿಸಿ, ₹891 ಕೋಟಿ ಮೌಲ್ಯದ ಪ್ರಮುಖ ರೈಲ್ವೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಪಡಿಸುವ ಜೊತೆಗೆ ಆರ್ಥಿಕ ಚಟುವಟಿಕೆಗೂ ಉತ್ತೇಜ
Railway station


ಗಾಂಧಿನಗರ, 28 ಮಾರ್ಚ್ (ಹಿ.ಸ.):

ಆ್ಯಂಕರ್:ನರೇಂದ್ರ ಮೋದಿ ಅವರು ಮಾರ್ಚ್ 31ರಂದು ಗುಜರಾತಗೆ ಒಂದು ದಿನದ ಭೇಟಿಗೆ ಆಗಮಿಸಿ, ₹891 ಕೋಟಿ ಮೌಲ್ಯದ ಪ್ರಮುಖ ರೈಲ್ವೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಪಡಿಸುವ ಜೊತೆಗೆ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ.

ಈ ಸಂದರ್ಭದಲ್ಲಿ, ಭಾರತೀಯ ರೈಲ್ವೆ ಸಚಿವಾಲಯದ ವಿವಿಧ ಯೋಜನೆಗಳನ್ನು ಜನತೆಗೆ ಸಮರ್ಪಿಸಲಾಗುತ್ತದೆ. ಕಾರ್ಯಕ್ರಮವನ್ನು ವಾವ್-ಥ್ರಾಡ್ ಪ್ರದೇಶದಿಂದ ವರ್ಚುವಲ್ ಮೂಲಕ ಉದ್ಘಾಟಿಸಲಾಗುವುದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉಪಸ್ಥಿತರಿರುವರು ಎಂದು ರಾಜ್ಯ ಮಾಹಿತಿ ಇಲಾಖೆ ತಿಳಿಸಿದೆ.

ಪ್ರಮುಖವಾಗಿ ₹482 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಹಿಮ್ಮತ್‌ನಗರ–ಖೇಡ್‌ಬ್ರಹ್ಮ (55 ಕಿ.ಮೀ) ಹೊಸ ರೈಲು ಮಾರ್ಗವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದು ಸಬರ್ಕಾಂತ ಜಿಲ್ಲೆಯ ಸಂಪರ್ಕವನ್ನು ಸುಧಾರಿಸಿ, ಅಹಮದಾಬಾದ್ ಮತ್ತು ಉದಯಪುರ ನಡುವೆ ನೇರ ಸಂಪರ್ಕ ಒದಗಿಸುತ್ತದೆ. ಇದರಿಂದ ಆರೋಗ್ಯ, ಶಿಕ್ಷಣ ಸೇರಿದಂತೆ ಅಗತ್ಯ ಸೇವೆಗಳ ಪ್ರವೇಶ ಹೆಚ್ಚುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚುವ ನಿರೀಕ್ಷೆಯಿದೆ.

ಇದರ ಜೊತೆಗೆ, ಕನಾಲಸ್–ಜಾಮ್‌ನಗರ (27 ಕಿ.ಮೀ) ದ್ವಿಮುಖ ಯೋಜನೆ ಹಾಗೂ ₹257 ಕೋಟಿ ವೆಚ್ಚದ ಗಾಂಧಿಧಾಮ್–ಆದಿಪುರ (11 ಕಿ.ಮೀ) ಮಲ್ಟಿಟ್ರ್ಯಾಕಿಂಗ್ ಯೋಜನೆಗಳನ್ನೂ ಉದ್ಘಾಟಿಸಲಾಗುತ್ತದೆ. ಈ ಯೋಜನೆಗಳಿಂದ ರೈಲು ಸಂಚಾರ ವೇಗ ಹೆಚ್ಚಳವಾಗುವುದರ ಜೊತೆಗೆ ಸರಕು ಸಾಗಣೆ ಸುಗಮಗೊಳ್ಳಲಿದೆ. ಪ್ರಮುಖ ಕೈಗಾರಿಕಾ ಕೇಂದ್ರಗಳಾದ ದೀನದಯಾಳ್ ಪೋರ್ಟ್ ಸಂಪರ್ಕವೂ ಮತ್ತಷ್ಟು ಬಲವಾಗಲಿದೆ.

ಕಾರ್ಯಕ್ರಮದ ಭಾಗವಾಗಿ ಖೇಡ್‌ಬ್ರಹ್ಮದಿಂದ ಹಿಮ್ಮತ್‌ನಗರ ಮೂಲಕ ಅಹಮದಾಬಾದ್‌ಗೆ ಹೊಸ ರೈಲು ಸೇವೆಗೆ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ. ಈ ಹೊಸ ರೈಲು ಸೇವೆಯಿಂದ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಂಚಾರ ಸೌಲಭ್ಯ ದೊರೆಯಲಿದ್ದು, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೂ ಉತ್ತೇಜನ ಸಿಗಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande