
ಕೋಲಾರ,ಮಾ.೨೮(ಹಿ.ಸ):
ಆ್ಯಂಕರ್ : ಶ್ರೀನಿವಾಸಪುರ ತಾಲ್ಲೂಕು ಶ್ಯಾಗತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇದೆ ಮೊದಲಬಾರಿಗೆ ಪಡಿತರ ವಿತರಣೆ ಮಾಡುವುದರ ಜೊತೆಗೆ ಸಹಕಾರ ಬ್ಯಾಂಕ್ ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದು ಸಂಘದ ನೂತನ ಅಧ್ಯಕ್ಷ ಎಸ್.ವಿ. ಸುಧಾಕರ್ ತಿಳಿಸಿದರು.
ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿ ಲಕ್ಷಿಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶ್ಯಾಗತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ೩ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದ ಎಸ್.ವಿ. ಸುಧಾಕರ್, ನಮ್ಮ ಸಂಘದಲ್ಲಿ ಈಗಾಗಲೆ ಪಕ್ಷಾತೀತವಾಗಿ ೧೨ ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು, ಇಂದು ನಡೆದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅವಿರೋಧವಾಗಿ ಸತತ ೩ನೇ ಬಾರಿಗೆ ಆಯ್ಕೆ ಮಾಡಿದ ಸಂಘದ ಎಲ್ಲ ನಿರ್ದೇಶಕರಿಗೆ ಗ್ರಾಮದ ಮುಖಂಡರಿಗೆ, ಉತ್ಪಾದಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಹಿಂದೆ ಬೇರೆಯವರ ಪರವಾನಿಗೆ ಹೆಸರಿನಲ್ಲಿ ಪಡಿತರ, ಸಂಘದ ಮೂಲಕ ವಿತರಣೆಯಾಗುತ್ತಿತ್ತು, ಸುಮಾರು ೪ ಹಳ್ಳಿಗಳಿಗಳಲ್ಲಿ ೫೮೦ ಪಡಿತರ ಕಾರ್ಡುದಾರರಿದ್ದಾರೆ, ಗ್ರಾಹಕರ ಹಿತ ದೃಷ್ಟಿಯಿಂದ ಶ್ರಮವಹಿಸಿ ನಮ್ಮ ಸಂಘದ ಮೂಲಕ ಅಧಿಕೃತವಾಗಿ ಪಡಿತರ ಅಕ್ಕಿ ವಿತರಿಸಲು ನಿಯಮಾನುಸಾರ ಮುಂದಾಗಿದ್ದೇವೆ ಎಂದರು.
ಜೊತೆಗೆ ಮುಂದಿನ ದಿನಗಳಲ್ಲಿ ಸಹಕಾರ ಬ್ಯಾಂಕ್ ನಮ್ಮ ಸಂಘದಲ್ಲಿ ನಡೆಯಲು ಸಿದ್ದತೆಗಳನ್ನು ಮಾಡುತ್ತಿದ್ದೇವೆ, ನಮ್ಮ ಸಂಘಕ್ಕೆ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಹೆಚ್ಚಿನ ಸಹಕಾರ ನೀಡಿದ್ದಾರೆ, ಜೊತೆಗೆ ಕೋಮುಲ್ ತಾಲ್ಲೂಕು ಘಟಕ ನಿರ್ದೇಶಕರು, ಉಪ ವ್ಯವಸ್ಥಾಪಕರು ಉತ್ತಮ ಸಹಕಾರ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದಲ್ಲಿ ಬಿ.ಎಂ.ಸಿ ಕೇಂದ್ರ ಪ್ರಾರಂಭಿಸಲು ಸಿದ್ದರಾಗಿದ್ದೇವೆ, ಹಾಲು ಉತ್ಪಾದಕರು ಗುಣಮಟ್ಟ ಹಾಲು ಹಾಕುವುದರ ಮೂಲಕ ಸಂಘವನ್ನು ಮತ್ತಷ್ಟು ಬಲಪಡಿಸಬೇಕು. ಜಿಲ್ಲೆಯಲ್ಲೇ ಮಾದರಿ ಸಂಘ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ರೋಟರಿ ಸಂಸ್ಥೆ ವತಿಯಿಂದ ಈ ಭಾಗದಲ್ಲಿ ಅರ್ಹ ಫಲಾನುಭವಿಗಳಿಗೆ ೧೦ ಹಸುಗಳನ್ನು ಉಚಿತವಾಗಿ ವಿತರಣೆ ಮಾಡಲಿದ್ದೇವೆ. ಜೊತೆಗೆ ಬಿ.ಇ. ಮಾಡುತ್ತಿರುವ ವಿದ್ಯಾರ್ಥಿಗಳಿಗೆ ೪ ಲ್ಯಾಪ್ ಟಾಪ್ ಗಳನ್ನು ನೀಡಲಿದ್ದೇವೆ ಎಂದು ತಿಳಿಸಿದರು.
ಈ ಚುನಾವಣಾ ಪ್ರಕ್ರಿಯೆಯನ್ನು ಮುಸ್ಟಾಕ್ ಅಹಮದ್ ನಡೆಸಿಕೊಟ್ಟಿದ್ದಾರೆ. ಈ ವೇಳೆ ನಿರ್ದೇಶಕರಾದ ಅಮೀರ್ ಜಾನ್, ಶ್ರೀನಿವಾಸಗೌಡ, ವೆಂಕಟರಾಮೇಗೌಡ, ಆಂಜೆನೇಯರೆಡ್ಡಿ, ವೆಂಕಟೇಶ್ಗೌಡ, ಶ್ರೀನಿವಾಸ್, ವೆಂಕಟರಾಮೇಗೌಡ, ಭಾಸ್ಕರ್, ವೆಂಕಟಮ್ಮ, ಪ್ರಮೀಳ, ಮಾಜಿ ಅಧ್ಯಕ್ಷ ಬಚ್ಚಿರೆಡ್ಡಿ, ಕಾರ್ಯದರ್ಶಿ ಎಸ್.ವಿ. ಮುನಿನಾರಾಯಣ, ಗುಮಾಸ್ತ, ಎಸ್.ವಿ. ಮಂಜುನಾಥ್, ಕೃಷ್ಣೇಗೌಡ, ಗ್ರಾ.ಪಂ ಸದಸ್ಯ ವಿವೇಕ್, ರಮೇಶ್, ಪಿಳ್ಳೆಗೌಡ, ಎಲ್ಲ ಉರ್ದೇಶಕರು, ಗ್ರಾಮಸ್ಥರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್