ಪೌರಕಾರ್ಮಿಕರಿಗೆ ಸಮವಸ್ತ್ರ–ಫುಡ್ ಕಿಟ್ ವಿತರಿಸಿದ ಸಂತೋಷ ಚವ್ಹಾಣ್
ಹುಬ್ಬಳ್ಳಿ, 28 ಮಾರ್ಚ್ (ಹಿ.ಸ.): ಆ್ಯಂಕರ್: ನಗರದ ನೈರ್ಮಲ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಪೌರಕಾರ್ಮಿಕರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಹುಬ್ಬಳ್ಳಿ ವಾರ್ಡ್ ನಂ. 41ರಲ್ಲಿ ಇಂದು ಅರ್ಥಪೂರ್ಣ ಹಾಗೂ ಶ್ಲಾಘನೀಯ ಕಾರ್ಯಕ್ರಮ ಆಯೋಜಿಸಲಾಯಿತು. ವಿಶ್ವಭಾರತಿ ವಿದ್ಯಾಪೀಠದ ಶ್ರೀ ಕಂಠಪಲ್ಲಿ ಸಮೀರ
Distribution


ಹುಬ್ಬಳ್ಳಿ, 28 ಮಾರ್ಚ್ (ಹಿ.ಸ.):

ಆ್ಯಂಕರ್:

ನಗರದ ನೈರ್ಮಲ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಪೌರಕಾರ್ಮಿಕರ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಹುಬ್ಬಳ್ಳಿ ವಾರ್ಡ್ ನಂ. 41ರಲ್ಲಿ ಇಂದು ಅರ್ಥಪೂರ್ಣ ಹಾಗೂ ಶ್ಲಾಘನೀಯ ಕಾರ್ಯಕ್ರಮ ಆಯೋಜಿಸಲಾಯಿತು.

ವಿಶ್ವಭಾರತಿ ವಿದ್ಯಾಪೀಠದ ಶ್ರೀ ಕಂಠಪಲ್ಲಿ ಸಮೀರ ಆಚಾರ್ಯ ಅವರ ನೇತೃತ್ವದಲ್ಲಿ, ಉಪಮಹಾಪೌರರು ಹಾಗೂ ವಾರ್ಡ್ ನಂ. 41ರ ಪಾಲಿಕೆ ಸದಸ್ಯರಾದ ಸಂತೋಷ್ ಚವ್ಹಾಣ್ ಅವರ ಮಾರ್ಗದರ್ಶನದಲ್ಲಿ, ಮಹಾನಗರ ಪಾಲಿಕೆ ಆಯುಕ್ತರಾದ ಡಾ ರುದ್ರೇಶ್ ಘಾಳಿ ಅವರ ಸಹಕಾರದೊಂದಿಗೆ ಈ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಸ್ವಚ್ಛತಾ ಸಿಬ್ಬಂದಿಗೆ ನೂತನ ಸಮವಸ್ತ್ರಗಳನ್ನು ವಿತರಿಸಲಾಗಿದ್ದು, ಜೊತೆಗೆ ಅವರ ದೈನಂದಿನ ಬಳಕೆಗೆ ಅಗತ್ಯವಾದ ಊಟದ ಡಬ್ಬಿ ಮತ್ತು ನೀರಿನ ಬಾಟಲಿಯನ್ನು ಒಳಗೊಂಡ ‘ಫುಡ್ ಕಿಟ್’ ಬ್ಯಾಗ್‌ಗಳನ್ನು ನೀಡಿ ಗೌರವಿಸಲಾಯಿತು.

ನಗರದ ಸ್ವಚ್ಛತೆಗಾಗಿ ನಿರಂತರವಾಗಿ ದುಡಿಯುವ ಈ ಸ್ವಚ್ಛತಾ ಸೇನಾನಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಹಾಗೂ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ದು ಮಿಣಜಗಿ, ಶ್ರೀಮತಿ ಮೀನಾಕ್ಷಿ ಅವರಗೊಳ, ಅಜಯ್ ನಾಯ್ಕರ್, ರವಿ ಕದಂ, ಜ್ಯೋತಿಬಾ ಮೋರೆ, ರಾಜು ನೇರಲೇಕರ, ರಾಜೇಂದ್ರ ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜೊತೆಗೆ ಆರೋಗ್ಯ ನಿರೀಕ್ಷಕರಾದ ಜೀಶಾನ್ ಹಾಗೂ ಆರೋಗ್ಯ ಮೇಲ್ವಿಚಾರಕರಾದ ದೇವಪ್ಪ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande