ಏ.12 ಕ್ಕೆ ಬೀದರ್ ನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಭೆ
ಬಳ್ಳಾರಿ, 26 ಮಾರ್ಚ್ (ಹಿ.ಸ.) ಆ್ಯಂಕರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 92ನೇ ಸರ್ವ ಸದಸ್ಯರ ಸಾಮಾನ್ಯ ಮಹಾಸಭೆಯನ್ನು ಬೀದರ್ ನಲ್ಲಿ ಏ.12 ರಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್.ವೀ
ಏ.12 ಕ್ಕೆ ಬೀದರ್ನಲ್ಲಿ ಕಾರ್ಯನಿರತ  ಪತ್ರಕರ್ತರ ಸಂಘದ  ಸರ್ವ ಸದಸ್ಯರ ಸಭೆ


ಬಳ್ಳಾರಿ, 26 ಮಾರ್ಚ್ (ಹಿ.ಸ.)

ಆ್ಯಂಕರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 92ನೇ ಸರ್ವ ಸದಸ್ಯರ ಸಾಮಾನ್ಯ ಮಹಾಸಭೆಯನ್ನು ಬೀದರ್ ನಲ್ಲಿ ಏ.12 ರಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ ತಿಳಿಸಿದ್ದಾರೆ.

ಬೀದರ್ ನ ನಾವದಗೇರಿ ಜನವಾಡ ರಸ್ತೆಯಲ್ಲಿರುವ ಝೀರಾ ಕನ್ವೆನಶನ್ ಹಾಲ್ ನಲ್ಲಿ ಅಂದು ಬೆಳಗ್ಗೆ 9.45ಕ್ಕೆ ಸಭೆ ನಡೆಯಲಿದೆ. ಸಾಮಾನ್ಯ ಮಹಾ ಸಭೆಯಲ್ಲಿ ಪಾಲ್ಗೊಳ್ಳಲು 2025-2026ನೇ ಸಾಲಿನ ಸಂಘದ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿ ಇರಬೇಕು.

ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಗೆ ಅನುಮೋದನೆ ಪಡೆಯುವುದು, 2024-25ನೇ ಸಾಲಿನ ವಾರ್ಷಿಕ ವರದಿ ಮಂಡನೆ, 2024-25ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆ ವರದಿ ಮಂಡನೆ, ಅನುಮೋದನೆ, ಜಿಲ್ಲಾ ಮತ್ತು ತಾಲೂಕು ಸಂಘಗಳ ಆಡಿಟ್ ಮಾಡಿಸುವ ಬಗ್ಗೆ, ಸಂಘದ ಬೈಲಾ ಪರಿಷ್ಕರಣೆ ಹಾಗೂ ಅಧ್ಯಕ್ಷರ ಅಪ್ಪಣೆ ಮೇರೆಗೆ ಇನ್ನಿತರ ವಿಷಯಗಳ ಚರ್ಚೆ ನಡೆಯಲಿದೆ.

ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಇಚ್ಛಿಸುವ ಸದಸ್ಯರು ವಿಷಯ ಸೂಚಿಯನ್ನು ಲಿಖಿತವಾಗಿ ಮಾ. 30 ರೊಳಗೆ ರಾಜ್ಯ ಸಮಿತಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. ಸಾಮಾನ್ಯ ಸಭೆಗೆ ಸಂಘದ ಸದಸ್ಯರೆಲ್ಲ ಕಡ್ಡಾ ಯವಾಗಿ ಹಾಜರಾಗುವಂತೆ ಜಿಲ್ಲಾ ಪ್ರದಾನ ಕಾರ್ಯದರ್ಶಿ ನರಸಿಂಹಮೂರ್ತಿ ಕುಲಕರ್ಣಿ ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande