
ನವದೆಹಲಿ, 24 ಮಾರ್ಚ್ (ಹಿ.ಸ.):
ಆ್ಯಂಕರ್:
ಪಶ್ಚಿಮ ಏಷ್ಯಾದ ಕದನ ವಿರಾಮದ ಸುತ್ತಲಿನ ಅನಿಶ್ಚಿತತೆ ನಡುವೆಯೂ ಜಾಗತಿಕ ಷೇರು ಮಾರುಕಟ್ಟೆಗಳು ಮಂಗಳವಾರ ಸಕಾರಾತ್ಮಕ ಸಂಕೇತಗಳನ್ನು ನೀಡಿವೆ. ಅಮೆರಿಕದ ಮಾರುಕಟ್ಟೆಗಳ ಏರಿಕೆ ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿ ಕಂಡುಬಂದ ಖರೀದಿ ಚಟುವಟಿಕೆ ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸಿದೆ.
ಅಮೆರಿಕಾದಲ್ಲಿ ಡೌ ಜೋನ್ಸ್ ಆರಂಭಿಕ ವಹಿವಾಟಿನಲ್ಲಿ 1,100 ಅಂಕಗಳಷ್ಟು ಏರಿಕೆ ಕಂಡಿದ್ದರೂ, ನಂತರ ಲಾಭ ಕಡಿಮೆಯಾಗಿದ್ದು ಸುಮಾರು 600 ಅಂಕಗಳ ಮಟ್ಟದಲ್ಲಿ ಸ್ಥಿರವಾಯಿತು. ಎಸ್&ಪಿ 500 1.15 ಶೇಕಡಾ ಏರಿಕೆಯೊಂದಿಗೆ 6,581 ಅಂಕಗಳಲ್ಲಿ ಮುಕ್ತಾಯಗೊಂಡಿದ್ದು, ನಾಸ್ಡಾಕ್ ಕಾಂಪೋಸ್ಟ್ 1.38 ಶೇಕಡಾ ಲಾಭದೊಂದಿಗೆ 21,946.76 ಅಂಕಗಳಿಗೆ ತಲುಪಿದೆ. ಆದರೆ ಡೌ ಜೋನ್ಸ ಪ್ಯುಚರ್ 0.31 ಶೇಕಡಾ ಕುಸಿತದೊಂದಿಗೆ ವಹಿವಾಟು ನಡೆಸುತ್ತಿರುವುದು ಗಮನಾರ್ಹ.
ಯುರೋಪಿನ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರಗತಿ ಕಂಡುಬಂದಿದೆ. ಎಫಟಿಎಸ ಎ 100 0.24 ಶೇಕಡಾ ಕುಸಿತಗೊಂಡರೆ, ಸಿಎಸಿ 40 0.78 ಶೇಕಡಾ ಏರಿಕೆಯಾಗಿದೆ.ಡಿಎಎಕ್ಸ 1.21 ಶೇಕಡಾ ಏರಿಕೆಯಿಂದ ಉತ್ತಮ ಪ್ರದರ್ಶನ ನೀಡಿದೆ.
ಏಷ್ಯಾದ ಮಾರುಕಟ್ಟೆಗಳು ಇಂದು ಸಾಮಾನ್ಯವಾಗಿ ಉತ್ತಮ ವಹಿವಾಟು ನಡೆಸುತ್ತಿವೆ. ನಿಕ್ಕಿ 225 0.73 ಶೇಕಡಾ ಏರಿಕೆಯೊಂದಿಗೆ 51,891 ಅಂಕಗಳಿಗೆ ತಲುಪಿದರೆ, ಕೊಸ್ಪಿ 2.06 ಶೇಕಡಾ ಏರಿಕೆಯಿಂದ 5,517.29 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ಹ್ಯಾಂಗ್ ಸೆಂಗ್ ಇಂಡೆಕ್ಸ 1.81 ಶೇಕಡಾ ಏರಿಕೆಯೊಂದಿಗೆ 24,823 ಅಂಕಗಳಿಗೆ ತಲುಪಿದ್ದು, ಶಾಂಘೈ ಸಂಯೋಜಿತ ಸೂಚ್ಯಂಕ 0.95 ಶೇಕಡಾ ಲಾಭದೊಂದಿಗೆ 3,849.34 ಅಂಕಗಳಲ್ಲಿ ಇದೆ.
ಇದರ ನಡುವೆ, ಗಿಫ್ಟ್ ನಿಫ್ಟಿ 1.54 ಶೇಕಡಾ ಏರಿಕೆಯೊಂದಿಗೆ 22,810 ಅಂಕಗಳಲ್ಲಿ ವಹಿವಾಟು ನಡೆಸುತ್ತಿರುವುದು ಭಾರತೀಯ ಷೇರು ಮಾರುಕಟ್ಟೆಗೂ ಧನಾತ್ಮಕ ಆರಂಭದ ಸೂಚನೆ ನೀಡುತ್ತಿದೆ.
ಒಟ್ಟಿನಲ್ಲಿ, ಜಾಗತಿಕ ರಾಜಕೀಯ ಉದ್ವಿಗ್ನತೆ ಮುಂದುವರಿದಿದ್ದರೂ ಮಾರುಕಟ್ಟೆಗಳು ಸ್ಥಿರತೆಯನ್ನು ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದು, ಹೂಡಿಕೆದಾರರಲ್ಲಿ ಎಚ್ಚರಿಕೆಯಿಂದಲೂ ಆಶಾವಾದ ಮನೋಭಾವ ಮುಂದುವರಿದಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa