ಅಸ್ಸಾಂ ರೈಫಲ್ಸ್ ಸಂಸ್ಥಾಪನಾ ದಿನ:ಶುಭಾಶಯ ಕೋರಿದ ಅಮಿತ್ ಶಾ
ನವದೆಹಲಿ, 24 ಮಾರ್ಚ್ (ಹಿ.ಸ.): ಆ್ಯಂಕರ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂ ರೈಫಲ್ಸ್‌ನ ಧೈರ್ಯಶಾಲಿ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಸಂಸ್ಥಾಪನಾ ದಿನದ ಅಂಗವಾಗಿ ಎಕ್ಸ್ ಮೂಲಕ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಈ ಸಂದರ್ಭದಲ್ಲಿ ಅವರು, ಈಶಾನ್ಯ ಭಾರತದ ಸವಾಲಿನ ಭೂಪ್ರದೇಶಗಳಲ
Rising day


ನವದೆಹಲಿ, 24 ಮಾರ್ಚ್ (ಹಿ.ಸ.):

ಆ್ಯಂಕರ್:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂ ರೈಫಲ್ಸ್‌ನ ಧೈರ್ಯಶಾಲಿ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಸಂಸ್ಥಾಪನಾ ದಿನದ ಅಂಗವಾಗಿ ಎಕ್ಸ್ ಮೂಲಕ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಈ ಸಂದರ್ಭದಲ್ಲಿ ಅವರು, ಈಶಾನ್ಯ ಭಾರತದ ಸವಾಲಿನ ಭೂಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸ್ಸಾಂ ರೈಫಲ್ಸ್ ಯೋಧರು ನಮ್ಮ ಗಡಿಗಳನ್ನು ಕಾಪಾಡುವುದಲ್ಲದೆ, ಮಾನವೀಯ ಸೇವೆಗಳ ಮೂಲಕ ಸ್ಥಳೀಯ ಸಮುದಾಯಗಳಲ್ಲಿ ವಿಶ್ವಾಸವನ್ನು ಬೆಳೆಸುತ್ತಿದ್ದಾರೆ ಎಂದು ಪ್ರಶಂಸಿಸಿದರು. ಅವರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿ ರಾಷ್ಟ್ರದ ಭದ್ರತೆಗೆ ದೊಡ್ಡ ಕೊಡುಗೆ ಎಂದು ಅವರು ಹೇಳಿದರು.

ಇದೇ ವೇಳೆ, ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅಸ್ಸಾಂ ರೈಫಲ್ಸ್‌ನ ಧೀರ ಯೋಧರನ್ನು ಸ್ಮರಿಸಿ, ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande