ಸೋಮವಾರದ ರಾಶಿಫಲ
ಹುಬ್ಬಳ್ಳಿ, 23 ಮಾರ್ಚ್ (ಹಿ.ಸ.): ಆ್ಯಂಕರ್: *ಮೇಷ ರಾಶಿ.* ಬರಬೇಕಾದ ಬಾಕಿಗಳು ಸಮಯಕ್ಕೆ ದೊರೆಯುವುದಿಲ್ಲ. ಖರ್ಚು ಹೆಚ್ಚಾಗುತ್ತದೆ. ಕೈಗೊಂಡ ಕೆಲಸಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ಸಾಲ ಪಡೆಯುವ ಪ್ರಯತ್ನಗಳು ಫಲಕಾರಿಯಾಗುವುದಿಲ್ಲ. ವೃತ್ತಿ-ವ್ಯವಹಾರಗಳಲ್ಲಿ ಶ್ರಮ ಮಾತ್ರ ಕಾಣಿಸಿ ಫಲಿತಾಂಶ ಕಡಿಮೆ
ಸೋಮವಾರದ ರಾಶಿಫಲ


ಹುಬ್ಬಳ್ಳಿ, 23 ಮಾರ್ಚ್ (ಹಿ.ಸ.):

ಆ್ಯಂಕರ್:

*ಮೇಷ ರಾಶಿ.*

ಬರಬೇಕಾದ ಬಾಕಿಗಳು ಸಮಯಕ್ಕೆ ದೊರೆಯುವುದಿಲ್ಲ. ಖರ್ಚು ಹೆಚ್ಚಾಗುತ್ತದೆ. ಕೈಗೊಂಡ ಕೆಲಸಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ಸಾಲ ಪಡೆಯುವ ಪ್ರಯತ್ನಗಳು ಫಲಕಾರಿಯಾಗುವುದಿಲ್ಲ. ವೃತ್ತಿ-ವ್ಯವಹಾರಗಳಲ್ಲಿ ಶ್ರಮ ಮಾತ್ರ ಕಾಣಿಸಿ ಫಲಿತಾಂಶ ಕಡಿಮೆ ಇರುತ್ತದೆ. ಉದ್ಯೋಗದಲ್ಲಿ ಸ್ಥಳಾಂತರ ಸೂಚನೆಗಳಿವೆ. ಇತರರೊಂದಿಗೆ ಅನಿರೀಕ್ಷಿತ ಭಿನ್ನಾಭಿಪ್ರಾಯಗಳು ಉಂಟಾಗಬಹುದು.

*ವೃಷಭ ರಾಶಿ.*

ಸ್ಥಿರಾಸ್ತಿ ಖರೀದಿ-ಮಾರಾಟಗಳು ಲಾಭದಾಯಕವಾಗಿರುತ್ತವೆ. ದೂರ ಪ್ರಯಾಣಗಳಿಂದ ಆರ್ಥಿಕ ಲಾಭ ಸಿಗುತ್ತದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಅನುಗ್ರಹದಿಂದ ಉನ್ನತ ಹುದ್ದೆಗಳು ದೊರೆಯುತ್ತವೆ. ಪ್ರಮುಖ ಕಾರ್ಯಗಳಲ್ಲಿ ಸ್ವಂತ ಆಲೋಚನೆಗಳು ಲಾಭಕರವಾಗುತ್ತವೆ. ಆರ್ಥಿಕ ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ.

*ಮಿಥುನ ರಾಶಿ.*

ಬಂಧು-ಮಿತ್ರರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ವೃತ್ತಿ-ವ್ಯವಹಾರ ವಿಸ್ತರಣೆಯ ಪ್ರಯತ್ನಗಳು ಫಲಿಸುತ್ತವೆ. ಸಮಾಜದಲ್ಲಿ ಸೇವಾ ಕಾರ್ಯಕ್ರಮಗಳನ್ನು ನಡೆಸಿ ಗೌರವವನ್ನು ಹೆಚ್ಚಿಸಿಕೊಳ್ಳುತ್ತೀರಿ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ನಿರುದ್ಯೋಗಿಗಳ ನಿರೀಕ್ಷೆಗಳು ನೆರವೇರುತ್ತವೆ. ಉದ್ಯೋಗದಲ್ಲಿ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ.

*ಕಟಕ ರಾಶಿ.*

ಎಲ್ಲಾ ದಿಕ್ಕುಗಳಿಂದ ಆದಾಯ ಬರುತ್ತದೆ. ಶತ್ರು ಸಂಬಂಧಿತ ಸಮಸ್ಯೆಗಳಿಂದ ಹೊರಬರುತ್ತೀರಿ. ಮೌಲ್ಯಯುತ ವಸ್ತುಗಳು ಮತ್ತು ವಾಹನಗಳನ್ನು ಖರೀದಿಸುತ್ತೀರಿ. ಕೈಗೊಂಡ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಮನೆಯಲ್ಲಿ ಶುಭಕಾರ್ಯಗಳ ವಿಚಾರ ಪ್ರಸ್ತಾಪವಾಗುತ್ತದೆ. ವೃತ್ತಿ-ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ದೊರೆಯುತ್ತದೆ.

*ಸಿಂಹ ರಾಶಿ.*

ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಅಡಚಣೆಗಳು ಎದುರಾಗುತ್ತವೆ. ಮನೆ ವಾತಾವರಣದಲ್ಲಿ ಸ್ವಲ್ಪ ಅಶಾಂತಿ ಕಾಣಬಹುದು. ನಿರುದ್ಯೋಗಿಗಳ ಪರಿಶ್ರಮ ವ್ಯರ್ಥವಾಗಬಹುದು.ಮಕ್ಕಳ ವಿದ್ಯಾಭ್ಯಾಸ ಮತ್ತು ಉದ್ಯೋಗ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ವ್ಯವಹಾರಗಳಲ್ಲಿ ವೆಚ್ಚ ಹೆಚ್ಚಾಗುತ್ತದೆ.

*ಕನ್ಯಾ ರಾಶಿ.*

ಮೌಲ್ಯಯುತ ವಸ್ತುಗಳು ಮತ್ತು ವಾಹನಗಳನ್ನು ಖರೀದಿಸುತ್ತೀರಿ. ದೂರ ಪ್ರಯಾಣಗಳು ಅನುಕೂಲಕರವಾಗುತ್ತವೆ. ಪ್ರಮುಖ ಕಾರ್ಯಗಳಲ್ಲಿ ಆಪ್ತರ ಸಹಾಯ ದೊರೆಯುತ್ತದೆ. ಆರ್ಥಿಕವಾಗಿ ಕೆಲವು ತೊಂದರೆಗಳಿದ್ದರೂ ಸೌಲಭ್ಯಗಳಲ್ಲಿ ಕೊರತೆ ಇರುವುದಿಲ್ಲ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಸ್ಥಿರಾಸ್ತಿ ಸಂಬಂಧಿತ ವಿವಾದಗಳು ಪರಿಹಾರವಾಗುತ್ತವೆ.

*ತುಲಾ ರಾಶಿ.*

ಹಳೆಯ ಸ್ನೇಹಿತರೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸುತ್ತೀರಿ. ಆರ್ಥಿಕ ಅನುಕೂಲತೆ ಹೆಚ್ಚಾಗುತ್ತದೆ. ಕುಟುಂಬ ವಿಚಾರಗಳಲ್ಲಿ ಆಲೋಚನೆಗಳು ಕಾರ್ಯರೂಪಕ್ಕೆ ಬರುತ್ತವೆ. ಕೈಗೊಂಡ ಕೆಲಸಗಳಲ್ಲಿ ಅಡಚಣೆಗಳು ನಿವಾರಣೆಯಾಗುತ್ತವೆ. ಸ್ಥಿರಾಸ್ತಿ ಖರೀದಿ-ಮಾರಾಟಗಳಲ್ಲಿ ಲಾಭ ದೊರೆಯುತ್ತದೆ. ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.

*ವೃಶ್ಚಿಕ ರಾಶಿ.*

ಇತರರಿಗೆ ಸಹಾಯ ಸಹಕಾರ ನೀಡುತ್ತೀರಿ.ಪಾಲುದಾರ ವ್ಯವಹಾರಗಳಲ್ಲಿ ಹೊಸ ಲಾಭಗಳನ್ನು ಪಡೆಯುತ್ತೀರಿ. ಖರ್ಚಿಗೆ ತಕ್ಕ ಆದಾಯ ದೊರೆಯುತ್ತದೆ. ಕೈಗೊಂಡ ಕೆಲಸಗಳು ನಿಧಾನವಾಗಿ ಸಾಗುತ್ತವೆ. ವೃತ್ತಿ-ಉದ್ಯೋಗದಲ್ಲಿ ಮೇಲಾಧಿಕಾರಿಗಳ ಸಹಾಯದಿಂದ ಹೊಸ ಹುದ್ದೆಗಳು ದೊರೆಯುತ್ತವೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

*ಧನುಸ್ಸು ರಾಶಿ.*

ಉದ್ಯೋಗ ಪ್ರಯತ್ನಗಳಲ್ಲಿ ಅಡಚಣೆಗಳು ಎದುರಾಗುತ್ತವೆ. ಆಕಸ್ಮಿಕ ಪ್ರಯಾಣಗಳಿಂದ ದೈಹಿಕ ಶ್ರಮ ಹೆಚ್ಚಾಗುತ್ತದೆ. ಕೈಗೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ. ಜೀವನ ಸಂಗಾತಿಯೊಂದಿಗೆ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ. ವೃತ್ತಿ-ವ್ಯವಹಾರಗಳಲ್ಲಿ ಗೊಂದಲದ ಪರಿಸ್ಥಿತಿ ಇರುತ್ತದೆ. ಆಪ್ತರಿಂದ ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ.

*ಮಕರ ರಾಶಿ.*

ಕೆಲವು ವಿಷಯಗಳಲ್ಲಿ ಕುಟುಂಬ ಸದಸ್ಯರ ಸಲಹೆಗಳು ಅನುಕೂಲಕರವಾಗುತ್ತವೆ. ಕೈಗೊಂಡ ಕೆಲಸಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ದೂರದ ಬಂಧು-ಮಿತ್ರರಿಂದ ಅಪರೂಪದ ಆಹ್ವಾನಗಳು ದೊರೆಯುತ್ತವೆ. ಸಂತಾನಕ್ಕೆ ಹೊಸ ವಿದ್ಯಾ ಅವಕಾಶಗಳು ಸಿಗುತ್ತವೆ. ವ್ಯವಹಾರ ವಿಸ್ತರಣೆಯ ಪ್ರಯತ್ನಗಳು ನಿರಾಶೆ ಉಂಟುಮಾಡುತ್ತವೆ.

*ಕುಂಭ ರಾಶಿ.*

ಕೈಗೊಂಡ ಕೆಲಸಗಳಲ್ಲಿ ಸ್ವಲ್ಪ ಅಡಚಣೆಗಳು ಎದುರಾಗುತ್ತವೆ. ಬಂಧು-ಮಿತ್ರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ದೀರ್ಘಕಾಲದ ಸಾಲದ ಒತ್ತಡ ಹೆಚ್ಚಾಗುತ್ತದೆ. ಪ್ರಯಾಣಗಳಲ್ಲಿ ಆಕಸ್ಮಿಕ ಬದಲಾವಣೆಗಳು ಸಂಭವಿಸಬಹುದು. ವ್ಯವಹಾರದಲ್ಲಿ ಭಾಗಸ್ಥರ ವರ್ತನೆಯಿಂದ ತಲೆನೋವು ಉಂಟಾಗುತ್ತವೆ. ವೃತ್ತಿ-ಉದ್ಯೋಗಗಳು ನಿಧಾನಗತಿಯಲ್ಲಿ ಸಾಗುತ್ತವೆ.

*ಮೀನ ರಾಶಿ.*

ಹಳೆಯ ಸ್ನೇಹಿತರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಕೈಗೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ಆಪ್ತರಿಂದ ವಿವಾದಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ಸಿಗುತ್ತದೆ. ವ್ಯವಹಾರದಲ್ಲಿ ಹೊಸ ಆಲೋಚನೆಗಳನ್ನು ಜಾರಿಗೆ ತರುತ್ತೀರಿ. ಆರ್ಥಿಕವಾಗಿ ಪ್ರಗತಿ ಸಾಧಿಸುತ್ತೀರಿ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande