ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ 2026 ಘೋಷಣೆ: 15 ನಗರಗಳಲ್ಲಿ ನೇರ ಪಂದ್ಯದ ಅನುಭವ
ನವದೆಹಲಿ, 23 ಮಾರ್ಚ್ (ಹಿ.ಸ.): ಆ್ಯಂಕರ್: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ಫ್ಯಾನ್ ಪಾರ್ಕ್ 2026 ರ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಕಾರ್ಯಕ್ರಮವು ಐಪಿಎಲ್ 2026 ರ ಆರಂಭಿಕ ಹಂತದೊಂದಿಗೆ ಹೊಂದಿಕೆಯಾಗಲಿದ್ದು, ದೇಶಾದ್ಯಂತದ ಅಭಿಮಾನಿಗಳಿಗೆ ಕ್ರೀ
Ipl


ನವದೆಹಲಿ, 23 ಮಾರ್ಚ್ (ಹಿ.ಸ.):

ಆ್ಯಂಕರ್:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ಫ್ಯಾನ್ ಪಾರ್ಕ್ 2026 ರ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಕಾರ್ಯಕ್ರಮವು ಐಪಿಎಲ್ 2026 ರ ಆರಂಭಿಕ ಹಂತದೊಂದಿಗೆ ಹೊಂದಿಕೆಯಾಗಲಿದ್ದು, ದೇಶಾದ್ಯಂತದ ಅಭಿಮಾನಿಗಳಿಗೆ ಕ್ರೀಡಾಂಗಣದ ಹೊರಗೆ ನೇರ ಪಂದ್ಯಗಳ ಉತ್ಸಾಹವನ್ನು ಅನುಭವಿಸಲು ಅವಕಾಶ ನೀಡಲಿದೆ.

ಮಂಡಳಿಯ ಮಾಹಿತಿ ಪ್ರಕಾರ, ಮೊದಲ ಮೂರು ವಾರಗಳಲ್ಲಿ 11 ರಾಜ್ಯಗಳ 15 ನಗರಗಳಲ್ಲಿ ಫ್ಯಾನ್ ಪಾರ್ಕ್‌ಗಳು ನಡೆಯಲಿವೆ. ಈ ಮೂಲಕ ಐಪಿಎಲ್ ರಂಜನೆ ಇನ್ನಷ್ಟು ಪ್ರೇಕ್ಷಕರಿಗೆ ತಲುಪಿಸಿ, ಸಮುದಾಯ ವಾತಾವರಣದಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ.

ಫ್ಯಾನ್ ಪಾರ್ಕ್‌ಗಳು ಮೂರು ವಾರಾಂತ್ಯಗಳಲ್ಲಿ ನಡೆಯಲಿವೆ:

ಮೊದಲ ಹಂತ: ಮಾರ್ಚ್ 28 ಮತ್ತು 29, ಎರಡನೇ ಹಂತ: ಏಪ್ರಿಲ್ 4 ಮತ್ತು 5, ಮೂರನೇ ಹಂತ: ಏಪ್ರಿಲ್ 11 ಮತ್ತು 12, 2026

ಪ್ರತಿ ವಾರಾಂತ್ಯದಲ್ಲಿ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ತಲಾ ಐದು ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ನಗರಗಳ ಪಟ್ಟಿ:

ಮೊದಲ ವಾರ: ರೋಹ್ಟಕ್, ಭೋಪಾಲ್, ನಾಗ್ಪುರ, ತುಮಕೂರು, ಕೃಷ್ಣನಗರ

ಎರಡನೇ ವಾರ: ಮಥುರಾ, ಜೋಧ್‌ಪುರ, ನಿಜಾಮಾಬಾದ್, ಮೈಸೂರು, ಭುವನೇಶ್ವರ

ಮೂರನೇ ವಾರ: ಮೀರತ್, ನಾಡಿಯಾಡ್, ರತ್ನಗಿರಿ, ಕೊಯಮತ್ತೂರು, ರೂರ್ಕೆಲಾ

ಪ್ರತಿ ಫ್ಯಾನ್ ಪಾರ್ಕ್‌ನಲ್ಲಿ ದೊಡ್ಡ ಪರದೆಗಳಲ್ಲಿ ಪಂದ್ಯಗಳ ನೇರ ಪ್ರಸಾರ, ಸಂಗೀತ ಮತ್ತು ಮನರಂಜನೆ ಕಾರ್ಯಕ್ರಮಗಳು, ಫುಡ್ ಕೋರ್ಟ್, ಮಕ್ಕಳ ಆಟದ ವಲಯ ಸೇರಿದಂತೆ ಹಲವು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ವರ್ಚುವಲ್ ಬ್ಯಾಟಿಂಗ್, ಬೌಲಿಂಗ್ ನೆಟ್‌ಗಳು, ಫೇಸ್ ಪೇಂಟಿಂಗ್, ಚಿಯರ್ ಮೀಟರ್‌ಗಳು ಹಾಗೂ 360-ಡಿಗ್ರಿ ಫೋಟೋ ಬೂತ್‌ಗಳಂತಹ ವಿಶೇಷ ಅನುಭವಗಳೂ ಲಭ್ಯವಾಗಲಿವೆ.

2015ರಲ್ಲಿ ಆರಂಭವಾದ ಈ ಉಪಕ್ರಮವು ಐಪಿಎಲ್ ಉತ್ಸಾಹವನ್ನು ದೇಶದ ಮೂಲೆಮೂಲೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, 2026ರಲ್ಲೂ ಇದೇ ಪರಂಪರೆ ಮುಂದುವರಿಯಲಿದೆ. ಮುಂದಿನ ಹಂತಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande