ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಕುಸಿತ
ನವದೆಹಲಿ, 23 ಮಾರ್ಚ್ (ಹಿ.ಸ.): ಆ್ಯಂಕರ್: ಪಶ್ಚಿಮ ಏಷ್ಯಾದಲ್ಲಿನ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್‌ಗಳ ಸಂಚಾರದ ಬಗ್ಗೆ ಉಂಟಾದ ಅನಿಶ್ಚಿತತೆಯಿಂದ ಜಾಗತಿಕ ಷೇರು ಮಾರುಕಟ್ಟೆಗಳು ಗಂಭೀರ ಒತ್ತಡಕ್ಕೆ ಒಳಗಾಗಿವೆ. ಇದರ ಪರಿಣಾಮವಾಗಿ ಅಮೆರಿಕಾ, ಯುರೋಪ್ ಹಾಗೂ
Market


ನವದೆಹಲಿ, 23 ಮಾರ್ಚ್ (ಹಿ.ಸ.):

ಆ್ಯಂಕರ್:

ಪಶ್ಚಿಮ ಏಷ್ಯಾದಲ್ಲಿನ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್‌ಗಳ ಸಂಚಾರದ ಬಗ್ಗೆ ಉಂಟಾದ ಅನಿಶ್ಚಿತತೆಯಿಂದ ಜಾಗತಿಕ ಷೇರು ಮಾರುಕಟ್ಟೆಗಳು ಗಂಭೀರ ಒತ್ತಡಕ್ಕೆ ಒಳಗಾಗಿವೆ. ಇದರ ಪರಿಣಾಮವಾಗಿ ಅಮೆರಿಕಾ, ಯುರೋಪ್ ಹಾಗೂ ಏಷ್ಯಾದ ಮಾರುಕಟ್ಟೆಗಳು ಗಮನಾರ್ಹ ಕುಸಿತವನ್ನು ದಾಖಲಿಸಿವೆ.

ಅಮೆರಿಕಾದ ವಾಲ್ ಸ್ಟ್ರೀಟ್ ನಲ್ಲಿ ಹೂಡಿಕೆದಾರರಲ್ಲಿ ಆತಂಕದ ವಾತಾವರಣ ಹೆಚ್ಚಿದ್ದು, ಪ್ರಮುಖ ಸೂಚ್ಯಂಕಗಳು ಕುಸಿತದೊಂದಿಗೆ ಮುಕ್ತಾಯಗೊಂಡಿವೆ. ಎಸ್ &ಪಿ 500 100.01 ಅಂಕಗಳು (1.51%) ಇಳಿಕೆಯಿಂದ 6,506.48 ಮಟ್ಟದಲ್ಲಿ ಮುಚ್ಚಿದರೆ, ನಾಸ್ಡಾಕ್ ಕಾಂಪೊಸಿಟ್ 443.08 ಅಂಕಗಳು (2.01%) ಕುಸಿದು 21,647.61 ಅಂಕಗಳಿಗೆ ತಲುಪಿದೆ. ಡೌ ಜೋನ್ಸ್ ಪ್ಯುಚ್ಚರ ಸಹ 0.17% ಇಳಿಕೆಯಿಂದ 45,504.02 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಯುರೋಪಿನ ಮಾರುಕಟ್ಟೆಗಳಲ್ಲಿಯೂ ನಿರಂತರ ಮಾರಾಟದ ಒತ್ತಡ ಮುಂದುವರಿದಿದ್ದು, ಎಪಟಿಎಸ ಈ 100 1.46% ಇಳಿಕೆಯಿಂದ 9,918.33 ಅಂಕಕ್ಕೆ ತಲುಪಿದೆ. ಸಿಎಸಿ 40 1.86% ಕುಸಿತದಿಂದ 7,665.62 ಅಂಕಗಳಿಗೆ ಇಳಿದರೆ, ಡಿಎಎಕ್ಸ 2.05% ಕುಸಿತದಿಂದ 22,380.19 ಅಂಕಗಳಿಗೆ ತಲುಪಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಇಂದು ವ್ಯಾಪಕ ಕುಸಿತ ಕಂಡುಬಂದಿದ್ದು, ಬಹುತೇಕ ಸೂಚ್ಯಂಕಗಳು ಕೆಂಪು ಗುರುತಿನಲ್ಲಿ ವಹಿವಾಟು ನಡೆಸುತ್ತಿವೆ. ಗಿಫ್ಟ್ ನಿಫ್ಟಿ 1.86% ಇಳಿಕೆಯಿಂದ 22,706 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿಕ್ಕಿ 225 3.91% ಕುಸಿದು 51,285 ಅಂಕಗಳಿಗೆ ತಲುಪಿದರೆ, ಹ್ಯಾಂಗಸೆಂಗ್ ಸೂಚ್ಯಂಕ್ 3.44% ಇಳಿಕೆಯಿಂದ 24,408 ಅಂಕಗಳಿಗೆ ಇಳಿದಿದೆ.

ಇದೇ ವೇಳೆ ಕೊಸ್ಪಿ 5.85% ಭಾರೀ ಕುಸಿತ ಕಂಡು 5,443.23 ಅಂಕಗಳಿಗೆ ತಲುಪಿದ್ದು, ಹೂಡಿಕೆದಾರರಲ್ಲಿ ಆತಂಕ ಹೆಚ್ಚುತ್ತಿರುವುದು ಗೋಚರಿಸುತ್ತಿದೆ. ಶಾಂಘೈ ಕಾಂಪೊಸಿಟ್

2.50% ಕುಸಿತದಿಂದ 3,858.18 ಅಂಕಗಳಿಗೆ ಇಳಿದರೆ, ಇತರೆ ಏಷ್ಯಾ ಮಾರುಕಟ್ಟೆಗಳಲ್ಲಿಯೂ ಇದೇ ರೀತಿಯ ನಕಾರಾತ್ಮಕ ಧೋರಣೆ ಮುಂದುವರಿದಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande