ಲೋಕಸಭೆಯಲ್ಲಿ ‘ಹಣಕಾಸು ಮಸೂದೆ–2026’ ಮಂಡನೆ
ನವದೆಹಲಿ, 23 ಮಾರ್ಚ್ (ಹಿ.ಸ.): ಆ್ಯಂಕರ್:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಯಲ್ಲಿ ‘ಹಣಕಾಸು ಮಸೂದೆ–2026’ ಅನ್ನು ಮಂಡಿಸಿದರು. ಈ ಮಸೂದೆ 2026-27ನೇ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರದ ಹಣಕಾಸು ಪ್ರಸ್ತಾವನೆಗಳು, ತೆರಿಗೆ ವ್ಯವಸ್ಥೆ ಹಾಗೂ ಬಜೆಟ್ ನೀತಿಗಳನ್ನು ಜಾರ
ನಿರ್ಮಲಾ ಸೀತಾರಾಮನ್


ನವದೆಹಲಿ, 23 ಮಾರ್ಚ್ (ಹಿ.ಸ.):

ಆ್ಯಂಕರ್:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಯಲ್ಲಿ ‘ಹಣಕಾಸು ಮಸೂದೆ–2026’ ಅನ್ನು ಮಂಡಿಸಿದರು. ಈ ಮಸೂದೆ 2026-27ನೇ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರದ ಹಣಕಾಸು ಪ್ರಸ್ತಾವನೆಗಳು, ತೆರಿಗೆ ವ್ಯವಸ್ಥೆ ಹಾಗೂ ಬಜೆಟ್ ನೀತಿಗಳನ್ನು ಜಾರಿಗೆ ತರುವ ಪ್ರಮುಖ ಶಾಸನಾತ್ಮಕ ಕ್ರಮವಾಗಿದೆ.

ಸೀತಾರಾಮನ್ ಅವರು ಮಸೂದೆಯನ್ನು ಸದನದಲ್ಲಿ ಪರಿಚಯಿಸಿ, ಅದರ ಪರಿಗಣನೆ ಮತ್ತು ಅಂಗೀಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಬಳಿಕ ಮಸೂದೆ ಕುರಿತು ಚರ್ಚೆ ಆರಂಭವಾಗಿದ್ದು, ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಚರ್ಚೆಯನ್ನು ಮುಂದುವರೆಸಿದರು.

ಈ ಹಣಕಾಸು ಮಸೂದೆ 2026-27ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಎಲ್ಲಾ ಹಣಕಾಸು ನಿರ್ಧಾರಗಳಿಗೆ ಕಾನೂನು ಮಾನ್ಯತೆ ನೀಡುವ ಉದ್ದೇಶ ಹೊಂದಿದೆ. ತೆರಿಗೆ ಬದಲಾವಣೆಗಳು, ಆದಾಯ ಹೆಚ್ಚಿಸುವ ಕ್ರಮಗಳು ಹಾಗೂ ವಿವಿಧ ಆರ್ಥಿಕ ಪ್ರಸ್ತಾವನೆಗಳನ್ನು ಜಾರಿಗೆ ತರಲು ಇದು ಅವಶ್ಯಕವಾದ ವಿಧಾನವಾಗಿದೆ.

ಹಣಕಾಸು ಮಸೂದೆ ಎಂದರೇನು?

ಹಣಕಾಸು ಮಸೂದೆ ಎನ್ನುವುದು ಕೇಂದ್ರ ಬಜೆಟ್ ನಂತರ ಸಂಸತ್ತಿನಲ್ಲಿ ಮಂಡಿಸಲಾಗುವ ವಾರ್ಷಿಕ ಹಣಕಾಸು ದಾಖಲೆ. ಇದರಲ್ಲಿ ತೆರಿಗೆ ವಿಧಿಸುವಿಕೆ, ತೆರಿಗೆ ಬದಲಾವಣೆ ಹಾಗೂ ಸರ್ಕಾರದ ಆದಾಯವನ್ನು ಹೆಚ್ಚಿಸುವ ಕ್ರಮಗಳು ಒಳಗೊಂಡಿರುತ್ತವೆ. ಇದು ಭಾರತೀಯ ಸಂವಿಧಾನದ ವಿಧಿ 110 (ಹಣ ಮಸೂದೆ) ಅಥವಾ ವಿಧಿ 117 (ಹಣಕಾಸು ಮಸೂದೆ) ಅಡಿಯಲ್ಲಿ ಬರುತ್ತದೆ.

ಈ ಮಸೂದೆಯನ್ನು ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದು ಮತ್ತು ಎರಡೂ ಸದನಗಳ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಷ್ಟ್ರಪತಿ ಅನುಮೋದನೆ ಸಿಕ್ಕರೆ ಅದು ‘ಹಣಕಾಸು ಕಾಯಿದೆ’ಯಾಗಿ ಜಾರಿಯಾಗುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande