
ರುದ್ರಪ್ರಯಾಗ, 22 ಮಾರ್ಚ್ (ಹಿ.ಸ.):
ಆ್ಯಂಕರ್:
ವಿಶ್ವಪ್ರಸಿದ್ಧ ಜ್ಯೋತಿರ್ಲಿಂಗ ಕ್ಷೇತ್ರವಾದ ಕೇದಾರನಾಥ ಧಾಮದಲ್ಲಿ ಇತ್ತೀಚೆಗೆ ಸುರಿದ ಭಾರೀ ಹಿಮಪಾತದ ಪರಿಣಾಮ, ಇಡೀ ಕಣಿವೆ ದಟ್ಟ ಹಿಮದ ಹೊದಿಕೆಯಿಂದ ಆವೃತವಾಗಿದೆ. ಈ ಮನಮೋಹಕ ದೃಶ್ಯಗಳ ನಡುವೆ ಶೂನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದ್ದು, ತೀವ್ರ ಚಳಿಯ ನಡುವೆಯೂ ಭದ್ರತಾ ಪಡೆಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿವೆ.
ಐಟಿಬಿಪಿ ಹಾಗೂ ಉತ್ತರಾಖಂಡ ಪೊಲೀಸರು ದೇವಸ್ಥಾನ ಪ್ರದೇಶದಲ್ಲಿ ನಿರಂತರ ಗಸ್ತು ನಡೆಸುತ್ತಿದ್ದು, ಭದ್ರತೆಯನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳಲಾಗುತ್ತಿದೆ. ಹಿಮಪಾತದ ನಡುವೆಯೂ ಯಾವುದೇ ಅಡಚಣೆ ಉಂಟಾಗದಂತೆ ದೇವಾಲಯ ಸಂಕೀರ್ಣದ ಸುತ್ತಲೂ ವಿಶೇಷ ಕಾವಲು ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆಯೂ ಸೈನಿಕರು ತಮ್ಮ ಕರ್ತವ್ಯಗಳನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುತ್ತಿದ್ದಾರೆ. ತಮ್ಮ ಬ್ಯಾರಕ್‌ಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹಿಮವನ್ನು ತೆರವುಗೊಳಿಸುವ ಮೂಲಕ, ಕಾರ್ಯಾಚರಣೆಗಳು ಸುಗಮವಾಗಿ ಸಾಗುವಂತೆ ನೋಡಿಕೊಳ್ಳಲಾಗುತ್ತಿದೆ.
ಭದ್ರತಾ ಪಡೆಗಳ ಈ ಜಂಟಿ ಕಾರ್ಯಾಚರಣೆ ಕೇವಲ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಲ್ಲದೆ, ಹವಾಮಾನದಿಂದ ಉಂಟಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆಯನ್ನು ತೋರಿಸುತ್ತಿದೆ. “ಸ್ನೇಹ, ಸೇವೆ ಮತ್ತು ಭದ್ರತೆ” ಎಂಬ ಧ್ಯೇಯವಾಕ್ಯದೊಂದಿಗೆ ಸೈನಿಕರು ಉನ್ನತ ಮನೋಸ್ಥೈರ್ಯದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸ್ಥಳಿಯ ಆಡಳಿತ ನೀಡಿರುವ ಮಾಹಿತಿ ಪ್ರಕಾರ, ಧಾಮ ಪ್ರದೇಶದ ಎಲ್ಲಾ ಚಟುವಟಿಕೆಗಳ ಮೇಲ್ವಿಚಾರಣೆ ನಿರಂತರವಾಗಿ ನಡೆಯುತ್ತಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಭದ್ರತಾ ಪಡೆಗಳು ಪೂರ್ಣ ಸಜ್ಜಾಗಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa