ಜೆಡಿಯು ತೊರೆದು ಆರ್ಎಲ್ಡಿ ಸೇರ್ಪಡೆಯಾದ ಕೆ.ಸಿ.ತ್ಯಾಗಿ
ನವದೆಹಲಿ, 22 ಮಾರ್ಚ್ (ಹಿ.ಸ.): ಆ್ಯಂಕರ್: ಇತ್ತೀಚೆಗೆ ಜೆಡಿ(ಯು)ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಾಯಕ ಕೆ.ಸಿ.ತ್ಯಾಗಿ ಭಾನುವಾರ ಆರ್‌ಎಲ್‌ಡಿ ಸೇರಿದರು. ಅವರನ್ನು ಕೇಂದ್ರ ಸಚಿವ ಹಾಗೂ ಆರ್‌ಎಲ್‌ಡಿ ಅಧ್ಯಕ್ಷ ಜಯಂತ ಚೌದರಿ ಅವರು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಕೆ.ಸಿ. ತ್ಯಾಗಿ ಅ
K.c.thaygi


ನವದೆಹಲಿ, 22 ಮಾರ್ಚ್ (ಹಿ.ಸ.):

ಆ್ಯಂಕರ್:

ಇತ್ತೀಚೆಗೆ ಜೆಡಿ(ಯು)ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಾಯಕ ಕೆ.ಸಿ.ತ್ಯಾಗಿ ಭಾನುವಾರ ಆರ್‌ಎಲ್‌ಡಿ ಸೇರಿದರು. ಅವರನ್ನು ಕೇಂದ್ರ ಸಚಿವ ಹಾಗೂ ಆರ್‌ಎಲ್‌ಡಿ ಅಧ್ಯಕ್ಷ ಜಯಂತ ಚೌದರಿ ಅವರು ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

ಕೆ.ಸಿ. ತ್ಯಾಗಿ ಅವರು 2003ರಲ್ಲಿ ಸಮತಾ ಪಕ್ಷದಿಂದ ಜೆಡಿ(ಯು)ಗೆ ಸೇರಿ, ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮುಖ್ಯ ಪ್ರಧಾನ ಕಾರ್ಯದರ್ಶಿ, ಮುಖ್ಯ ವಕ್ತಾರ ಹಾಗೂ ರಾಜಕೀಯ ಸಲಹೆಗಾರರಾಗಿ ಅವರ ಪಾತ್ರ ಗಮನಾರ್ಹವಾಗಿತ್ತು.

ಪಕ್ಷತ್ಯಾಗದ ಬಗ್ಗೆ ಸ್ಪಷ್ಟ ಕಾರಣವನ್ನು ಬಹಿರಂಗಪಡಿಸದಿದ್ದರೂ, ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳಿ ಕೇಂದ್ರ ರಾಜಕೀಯದಲ್ಲಿ ತೊಡಗಿಸಿಕೊಂಡ ನಂತರ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಆದಾಗ್ಯೂ, ಆರ್‌ಎಲ್‌ಡಿ ಸೇರ್ಪಡೆಯಾದ ಬಳಿಕವೂ ತ್ಯಾಗಿ ಅವರು ಜೆಡಿ(ಯು) ವಿರುದ್ಧ ಯಾವುದೇ ನಕಾರಾತ್ಮಕ ಹೇಳಿಕೆ ನೀಡಿಲ್ಲ. “ನಿತೀಶ್ ಕುಮಾರ್ ಅವರನ್ನು ನಾನು ಇನ್ನೂ ಸಂಪೂರ್ಣವಾಗಿ ಗೌರವಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಜೆಡಿ(ಯು) ಮತ್ತು ಆರ್‌ಎಲ್‌ಡಿ ಪಕ್ಷಗಳ ನಡುವಿನ ತತ್ವಶಾಸ್ತ್ರೀಯ ಸಾಮ್ಯತೆಯನ್ನು ಅವರು ಉಲ್ಲೇಖಿಸಿದ್ದಾರೆ. ಎರಡೂ ಪಕ್ಷಗಳು ಚೌಧರಿ ಚರಣ್ ಸಿಂಗ್, ಕರ್ಪೂರಿ ಠಾಕೂರ್ ಮತ್ತು ರಾಮ್ ಮನೋಹರ್ ಲೋಹಿಯಾ ಅವರ ಸಮಾಜವಾದಿ ಚಿಂತನೆಗಳಿಂದ ಪ್ರೇರಿತವಾಗಿವೆ ಎಂದು ಅವರು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande