
ಹಾಸನ, 22 ಮಾರ್ಚ್ (ಹಿ.ಸ.):
ಆ್ಯಂಕರ್:
ಸೌಹಾರ್ದ ಅಧಿನಿಯಮ ಹಾಗೂ ಸಹಕಾರಿಯ ಬೈಲಾ ರೀತ್ಯಾ ಕಾರ್ಯನಿರ್ವಹಿಸದೆ ಸ್ಥಗಿತಗೊಂಡು ತದನಂತರ ಸಮಾಪನೆಗೊಂಡಿರುವ. ಪ್ರಸ್ತುತ ನೋಂದಣಿ ರದ್ದತಿಗೆ ಕ್ರಮವಿಡಬೇಕಾಗಿದ್ದು, ಮಾ. 30 ರಂದು ಬೆಳಗ್ಗೆ 11 ಘಂಟೆಗೆ ಅಂತಿಮ ಮಹಾಸಭೆಯನ್ನು ನಿಗದಿಪಡಿಸಿದ್ದು, ಸಹಕಾರಿಗಳ ನೋಂದಣಿ ರದ್ದತಿ ಕುರಿತು ಆಕ್ಷೇಪಣೆಗಳು ಇದ್ದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಪುಷ್ಪಗಿರಿ ಸೌಹಾರ್ದ ಸಹಕಾರಿ ನಿ. ಹೋಸ್ ನೈನ್ ರಸ್ತೆ, ಈದ್ಗಾ ಮುಂಭಾಗ, ಶರಣ ಸದನ ಬಸವರಾಜೇಂದ್ರ ಶಾಲೆಯ ಹತ್ತಿರ ಉತ್ತರ ಬಡವಣೆ ಹಾಜರಾಗಿ ಆಕ್ಷೇಪಣೆ ಸಲ್ಲಿಸಬಹುದು.
ಶ್ರೀ ಅನ್ನಪೂರ್ಣ ಸೌಹಾರ್ದ ಸಹಕಾರಿ ನಿ. ಚಿಂದೇನಹಳ್ಳಿ ಗಡಿ, ಜೈ ಮಾರುತಿ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿ. ಚನ್ನರಾಯಪಟ್ಟಣ, ಸ್ನೇಹ ಸಂಜೀವಿನಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ ನುಗ್ಗೇಹಳ್ಳಿ, ಶ್ರೀದೇವಿ ಹಾಸನಾಂಬ ಸೌಹಾರ್ದ ಸಹಕಾರಿ ಸಂಘ ಹಾಸನ ನಿಸರ್ಗ ಸೌಹಾರ್ದ ಸ್ವ- ಸಹಾಯ ಸಹಕಾರಿ ನಿ ಕೆಂಕೆರೆ, ಅರಸೀಕೆರೆ ನೋಂದಣಿ ರದ್ದತಿಗೆ ಕ್ರಮವಿಡಲಾಗುವುದೆಂದು ಸಹಕಾರ ಸಂಘಗಳ ಸಹಾಯಕ ನಿಂಬಂಧಕರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa