
ಹುಬ್ಬಳ್ಳಿ, 22 ಮಾರ್ಚ್ (ಹಿ.ಸ.):
ಆ್ಯಂಕರ್:
ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಬು. ಅರಳಿಕಟ್ಟಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಲೆಕ್ಕ ಶೀರ್ಷಿಕೆ 5054 ಅಡಿಯಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ಗ್ರಾಮದ ಬಾಲಣ್ಣವರ ಮನೆಯಿಂದ ಒಳ ರಸ್ತೆಯ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಎಂ.ಆರ್. ಪಾಟೀಲ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ರಸ್ತೆ ಕಾಮಗಾರಿಯಿಂದ ಗ್ರಾಮಸ್ಥರಿಗೆ ಸುಗಮ ಸಂಚಾರ ಸೌಲಭ್ಯ ಲಭಿಸುವುದರ ಜೊತೆಗೆ ಸ್ಥಳೀಯ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂದು ಶಾಸಕ ಎಂ.ಆರ್. ಪಾಟೀಲ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕರಾದ ಸುರೇಶ್ ಬಣವಿ, ಗಂಗಾಧರಯ್ಯ ಯರಗಂಬಳಿಮಠ, ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ನಿಂಗನಗೌಡ ಮರಿಗೌಡ, ಟಿ.ಜಿ. ಬಾಲಣ್ಣವರ, ನೇಮಚಂದ್ರ ಬಸಾಪುರ, ಉಮೇಶ್ ಕುಸುಗಲ್, ಮಲ್ಲಯ್ಯ ಶಂಭಾಳಿಮಠ, ರಾಜಶೇಖರ್ ಶಾಬಳ, ಶ್ರೀಮತಿ ಸೋಮವ್ವ ಚೆನ್ನಪ್ಪ ನಿಂಗಪ್ಪನವರ, ಶ್ರೀಮತಿ ಯಲ್ಲಮ್ಮ ಗಾಣಿಗೇರ್, ಮಂಜುನಾಥ್ ದ್ಯಾಮಕ್ಕನವರ್, ಲಿಂಗರಾಜ್ ಮೆಣಸಿನಕಾಯಿ, ಉಮೇಶ್ ದೊಡ್ಮನಿ, ಈಶ್ವರಗೌಡ ಹಿರೇಗೌಡ್ರು, ಜಗದೀಶ್ ಸುಣಗಾರ, ಮಂಜುನಾಥ್ ಹುಂಬಿ, ಸತೀಶ್ ಶೆಟ್ಟರ್ ಸೇರಿದಂತೆ ಬೂತ್ ಅಧ್ಯಕ್ಷರುಗಳು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa