ಲವ್ ಜಿಹಾದ್ ಕುರಿತು ಜಾಗೃತಿ, ಯುವತಿಯರಿಗೆ ಸಿನಿಮಾ ಪ್ರದರ್ಶನ
ಗದಗ, 22 ಮಾರ್ಚ್ (ಹಿ.ಸ.) ಆ್ಯಂಕರ್:- ಗದಗ ನಗರದಲ್ಲಿ ಹಿಂದೂ ಸಮಾಜದ ಜಾಗೃತಿಗಾಗಿ ಕ್ರಾಂತಿ ಸೇನಾ ಗದಗ ಜಿಲ್ಲಾ ಘಟಕ ಹಾಗೂ ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳದ ನೇತೃತ್ವದಲ್ಲಿ ಯುವತಿಯರಿಗೆ ಲವ್ ಜಿಹಾದ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಅಂಗವಾಗಿ 650ಕ್ಕೂ ಹೆಚ್ಚು ಹಿಂ
ಫೋಟೋ


ಗದಗ, 22 ಮಾರ್ಚ್ (ಹಿ.ಸ.)

ಆ್ಯಂಕರ್:- ಗದಗ ನಗರದಲ್ಲಿ ಹಿಂದೂ ಸಮಾಜದ ಜಾಗೃತಿಗಾಗಿ ಕ್ರಾಂತಿ ಸೇನಾ ಗದಗ ಜಿಲ್ಲಾ ಘಟಕ ಹಾಗೂ ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳದ ನೇತೃತ್ವದಲ್ಲಿ ಯುವತಿಯರಿಗೆ ಲವ್ ಜಿಹಾದ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಅಂಗವಾಗಿ 650ಕ್ಕೂ ಹೆಚ್ಚು ಹಿಂದೂ ಯುವತಿಯರಿಗೆ “ಕೇರಳ ಸ್ಟೋರಿ-2” ಸಿನಿಮಾವನ್ನು ಪ್ರದರ್ಶಿಸಿ ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಾಂತಿ ಸೇನಾ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಅವರು, ಯುವತಿಯರನ್ನು ಮೋಸದ ಜಾಲಕ್ಕೆ ಸೆಳೆದು ಮತಾಂತರ ಮಾಡುವ ಘಟನೆಗಳ ಬಗ್ಗೆ ಎಚ್ಚರಿಕೆ ನೀಡಿದರು. “ಪೋಷಕರು ಹಾಗೂ ಸಮಾಜ ಜಾಗೃತಿಯಾಗಿದ್ರೆ ಮಾತ್ರ ಇಂತಹ ಘಟನೆಗಳನ್ನು ತಡೆಹಿಡಿಯಲು ಸಾಧ್ಯ. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಅವರ ಚಟುವಟಿಕೆಗಳ ಮೇಲೂ ಪೋಷಕರು ನಿಗಾವಹಿಸಬೇಕು” ಎಂದು ಅವರು ಹೇಳಿದರು.

ಸಮಾಜದ ಪ್ರತಿಯೊಬ್ಬರೂ ಜಾಗೃತಿಯಿಂದ ನಡೆದುಕೊಂಡಾಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ತಿಳಿಸಿದ ಅವರು, ಶಾಲಾ-ಕಾಲೇಜುಗಳಲ್ಲಿ ಅನುಮಾನಾಸ್ಪದ ಘಟನೆಗಳು ಕಂಡುಬಂದರೆ ತಕ್ಷಣವೇ ಹಿರಿಯರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಮಾತನಾಡಿದ ಕಬಾಡಿ ಅವರು, ಯುವತಿಯರು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿ ಜಾಗೃತಿಯನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು. ಯುವಜನತೆ ಸಮಾಜದ ಜವಾಬ್ದಾರಿಯನ್ನು ಅರಿತು ಎಚ್ಚರಿಕೆಯಿಂದ ನಡೆದುಕೊಳ್ಳಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದ ವೇಳೆ ಯುವತಿಯರಿಗೆ ಲವ್ ಜಿಹಾದ್ಗೆ ಬಲಿಯಾಗದಂತೆ ಪ್ರಮಾಣ ವಚನ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ರಾಣಿ ಚಂದಾವರಿ, ರೇಣುಕಾ ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿ ಯುವತಿಯರಿಗೆ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಪ್ರವೀಣ್ ಹಬೀಬ, ಭೀಮಾ ಕಾಟಿಗರ್, ಭರತ್ ಮರಿಯಪ್ಪನವರ್, ಶಿವು ಕುಂಬಾರ್, ಕಿರಣ ಪಟ್ಟಣಶೆಟ್ಟಿ, ಪವನ್ ಪುರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಒಟ್ಟಾರೆ, ಈ ಜಾಗೃತಿ ಕಾರ್ಯಕ್ರಮವು ಯುವತಿಯರಲ್ಲಿ ಆತ್ಮರಕ್ಷಣೆ ಹಾಗೂ ಸಾಮಾಜಿಕ ಜಾಗೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗಮನಾರ್ಹವಾಗಿದ್ದು, ಸಮಾಜದಲ್ಲಿ ಜವಾಬ್ದಾರಿಯುತ ಮನೋಭಾವ ಬೆಳೆಸುವ ಪ್ರಯತ್ನವಾಗಿ ಕಾಣಿಸಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande