
ನವದೆಹಲಿ, 21 ಮಾರ್ಚ್ (ಹಿ.ಸ.):
ಆ್ಯಂಕರ್:
ದೇಶದ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ (ಆರ್‌ಆರ್‌ಯು) ಮತ್ತು ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಅಕಾಡೆಮಿ ನಡುವೆ ಒಪ್ಪಂದ ಪತ್ರ (ಎಂಒಯು) ಗೆ ಸಹಿ ಮಾಡಲಾಗಿದೆ. ಈ ಒಪ್ಪಂದವು ಭದ್ರತಾ ತರಬೇತಿಗೆ ಶೈಕ್ಷಣಿಕ ಮಾನ್ಯತೆ ನೀಡುವುದು ಹಾಗೂ ವೃತ್ತಿಪರ ಶ್ರೇಷ್ಠತೆಯನ್ನು ಉತ್ತೇಜಿಸುವುದನ್ನು ಉದ್ದೇಶಿಸಿದೆ.
ನವದೆಹಲಿಯ ಎಸ್‌ಎಸ್‌ಬಿ ಮುಖ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಆರ್‌ಯು ಪ್ರೊ-ವೈಸ್ ಚಾನ್ಸಲರ್ ಪ್ರೊ. ಕಲ್ಪೇಶ್ ಎಚ್. ವಾಂಡ್ರಾ, ಅಫಿಲಿಯೇಶನ್ ಮತ್ತು ಅಕ್ರಿಡಿಟೇಶನ್ ಡೀನ್ ಅವಿನಾಶ ಖರೇಲ್ ಹಾಗೂ ಎಸ್‌ಎಸ್‌ಬಿ ಮಹಾನಿರ್ದೇಶಕ ಸಂಜಯ್ ಸಿಂಘಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ಪ್ರಕಾರ, ಈ ಕಾರ್ಯತಂತ್ರದ ಭಾಗಸಹಕಾರದಡಿ ಆರ್‌ಆರ್‌ಯು, ಎಸ್‌ಎಸ್‌ಬಿ ಅಕಾಡೆಮಿಯಲ್ಲಿ ನಡೆಯುವ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಶೈಕ್ಷಣಿಕ ಮಾನ್ಯತೆ ನೀಡಲಿದೆ. ಜೊತೆಗೆ, ಎರಡೂ ಸಂಸ್ಥೆಗಳು ತಮ್ಮ ಶೈಕ್ಷಣಿಕ ಸಂಪನ್ಮೂಲಗಳು, ಪರಿಣತಿ ಹಾಗೂ ವಿಶೇಷ ತರಬೇತಿ ಸೌಲಭ್ಯಗಳನ್ನು ಹಂಚಿಕೊಳ್ಳಲಿವೆ. ಇದರಿಂದ ಅಕಾಡೆಮಿಕ್ ಸಂಶೋಧನೆ ಮತ್ತು ನೆಲಮಟ್ಟದ ಭದ್ರತಾ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಪ್ರೊ. ವಾಂಡ್ರಾ ಮಾತನಾಡಿ, “ಸ್ಮಾರ್ಟ್ ಬಾರ್ಡರ್ ಮ್ಯಾನೇಜ್ಮೆಂಟ್” ಸೇರಿದಂತೆ ವಿಶೇಷ ಕೋರ್ಸ್‌ಗಳು ಈಗಾಗಲೇ ಆರಂಭವಾಗಿವೆ ಎಂದು ತಿಳಿಸಿದ್ದಾರೆ. ಆರ್‌ಆರ್‌ಯು ತನ್ನ ಅತ್ಯಾಧುನಿಕ ಪ್ರಯೋಗಶಾಲೆಗಳು ಮತ್ತು ಕ್ಷೇತ್ರಾಧಾರಿತ ಕಾರ್ಯಾಗಾರಗಳ ಮೂಲಕ ಎಸ್‌ಎಸ್‌ಬಿ ಸಿಬ್ಬಂದಿಗೆ ಪ್ರಾಯೋಗಿಕ ತರಬೇತಿ ನೀಡಲಿದೆ ಎಂದು ಹೇಳಿದರು.
ಎಸ್‌ಎಸ್‌ಬಿ ಮಹಾನಿರ್ದೇಶಕ ಸಂಜಯ್ ಸಿಂಘಲ್ ಈ ಮುಂದಾಳುತ್ವವನ್ನು ಸ್ವಾಗತಿಸಿ, ಈ ಸಹಕಾರದಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೌಶಲ್ಯಾಭಿವೃದ್ಧಿ ಹಾಗೂ ಮರು-ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದ್ದಾರೆ. ಬದಲಾಗುತ್ತಿರುವ ಆಂತರಿಕ ಭದ್ರತಾ ಸವಾಲುಗಳಿಗೆ ಹೊಂದಿಕೊಳ್ಳಲು ಇದು ಸಹಕಾರಿ ಆಗಲಿದೆ ಎಂದರು.
ಒಪ್ಪಂದದಡಿ, ಎಸ್‌ಎಸ್‌ಬಿ ನಡೆಸುತ್ತಿರುವ ಇತ್ತೀಚಿನ ಮತ್ತು ಭವಿಷ್ಯದ ಪಠ್ಯಕ್ರಮಗಳನ್ನು ಆರ್‌ಆರ್‌ಯು ಮೌಲ್ಯಮಾಪನ ಮಾಡಿ, ಪ್ರಮಾಣಪತ್ರ, ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ ಮಟ್ಟದ ಮಾನ್ಯತೆ ನೀಡಲಿದೆ. ಇದರೊಂದಿಗೆ ಮಾನಕೀಕೃತ ಮೌಲ್ಯಮಾಪನ ವ್ಯವಸ್ಥೆ ಹಾಗೂ ನಿಯಮಿತ ಪಠ್ಯಕ್ರಮ ಪರಿಶೀಲನೆಯನ್ನೂ ಜಾರಿಗೆ ತರಲಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ಆರ್‌ಆರ್‌ಯು, ರಾಷ್ಟ್ರೀಯ ಭದ್ರತೆ ಮತ್ತು ಪೊಲೀಸ್ ವ್ಯವಸ್ಥೆಯ ಕ್ಷೇತ್ರದಲ್ಲಿ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಯಾಗಿ ಹೊರಹೊಮ್ಮುವ ಗುರಿ ಹೊಂದಿದೆ.
ಈ ಉಪಕ್ರಮವು ಗೃಹ ಸಚಿವಾಲಯದ “ಒಕ್ಕೂಟಿತ ತರಬೇತಿ” ದೃಷ್ಟಿಕೋಣವನ್ನು ಮುಂದುವರಿಸುವುದರ ಜೊತೆಗೆ ಸಿದ್ಧಾಂತ ಮತ್ತು ಪ್ರಾಯೋಗಿಕ ಗಡಿಯ ನಿರ್ವಹಣೆಯ ನಡುವಿನ ಸಮನ್ವಯವನ್ನು ಬಲಪಡಿಸುತ್ತದೆ. ಇದರಿಂದ ಎಸ್‌ಎಸ್‌ಬಿ ಸಿಬ್ಬಂದಿಗೆ ಶೈಕ್ಷಣಿಕ ಮಾನ್ಯತೆ ಹಾಗೂ ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ಲಭ್ಯವಾಗಲಿವೆ.
ತಜ್ಞರ ಅಭಿಪ್ರಾಯದಂತೆ, ಈ ಭಾಗಸಹಕಾರವು ಭಾರತದ ಭದ್ರತಾ ವ್ಯವಸ್ಥೆಯನ್ನು ಹೆಚ್ಚು ವೃತ್ತಿಪರ ಹಾಗೂ ತಂತ್ರಜ್ಞಾನಾಧಾರಿತವಾಗಿಸಲು ಮಹತ್ವದ ಮೈಲಿಗಲ್ಲಾಗಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa