ಈದ್-ಉಲ್-ಫಿತರ್ ಮಲ್ಲಿಕಾರ್ಜುನ ಖರ್ಗೆ ಶುಭಾಶಯ
ಬೆಂಗಳೂರು, 21 ಮಾರ್ಚ್ (ಹಿ.ಸ.): ಆ್ಯಂಕರ್: ಈದ್-ಉಲ್-ಫಿತರ್ ಹಬ್ಬದ ಪ್ರಯುಕ್ತ ದೇಶದ ನಾಗರಿಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿರುವ ಅವರು, ಈದ್ ಹಬ್ಬವು ಸಹಾನುಭೂತಿ, ಔದಾರ್ಯ ಮತ್ತ
Eid


ಬೆಂಗಳೂರು, 21 ಮಾರ್ಚ್ (ಹಿ.ಸ.):

ಆ್ಯಂಕರ್:

ಈದ್-ಉಲ್-ಫಿತರ್ ಹಬ್ಬದ ಪ್ರಯುಕ್ತ ದೇಶದ ನಾಗರಿಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿರುವ ಅವರು, ಈದ್ ಹಬ್ಬವು ಸಹಾನುಭೂತಿ, ಔದಾರ್ಯ ಮತ್ತು ಒಗ್ಗಟ್ಟಿನ ಸಂಕೇತವಾಗಿದ್ದು, ನಮ್ಮ ಹಂಚಿಕೆಯ ಮಾನವೀಯತೆಯಲ್ಲಿರುವ ಶಕ್ತಿಯನ್ನು ತೋರಿಸುತ್ತದೆ. ಜೊತೆಗೆ, ಭಾರತದ ವೈವಿಧ್ಯಮಯ ಮತ್ತು ಬಹುತ್ವ ಸಮಾಜದ ಸೌಂದರ್ಯವನ್ನು ಇದು ನೆನಪಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಶುಭ ಸಂದರ್ಭದಲ್ಲಿ ಶಾಂತಿ ಮತ್ತು ಸಮೃದ್ಧಿ ಎಲ್ಲರ ಜೀವನದಲ್ಲಿ ನೆಲೆಸಲಿ. ನಮ್ಮ ಸುತ್ತಮುತ್ತಲಿನವರಿಗೆ ದಯೆ, ಸೇವಾ ಮನೋಭಾವವನ್ನು ವಿಸ್ತರಿಸಲು ಈ ಹಬ್ಬವು ಎಲ್ಲರಿಗೂ ಸ್ಫೂರ್ತಿ ನೀಡಲಿ ಎಂದು ಅವರು ಆಶಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande