ಕಲ್ಯಾಣದ ಕ್ರಾಂತಿಯನ್ನು ಮೀರಿಸಲಿರುವ ಬಲ್ಡೋಟ ಕಂಪನಿ ವಿರುದ್ಧದ ಹೋರಾಟ
ಕೊಪ್ಪಳ, 21 ಮಾರ್ಚ್ (ಹಿ.ಸ.) ಆ್ಯಂಕರ್ : ಒಂದು ಕೋಟಿ ಜನರು ಕೇಳಿಸಿಕೊಂಡ ಮೇಲೆ, ಅದು ಕರ್ನಾಟಕ ಹಾಗೂ ದೇಶಾದ್ಯಂತ ಪ್ರತಿಧ್ವನಿಸಿ ಟಿವಿ ವಾಹಿನಿಗಳು, ಪತ್ರಿಕೆಗಳು, ಸಾಮಾಜಿಕ ಜಾಲತಾಣ ಮೀರಿ ಕೇಳಿಸಿ ಚರ್ಚೆ, ವಿಚಾರ ವಿನಿಮಯ ನಡೆದು 2024ರಿಂದಲೇ ಹೋರಾಟ ಪ್ರತಿಧ್ವನಿಸುತ್ತದೆ. ಮೊನ್ನೆ ಅದರ
ಕಲ್ಯಾಣದ ಕ್ರಾಂತಿಯನ್ನು ಮೀರಿಸಲಿರುವ ಬಲ್ಡೋಟ ಕಂಪನಿ ವಿರುದ್ಧದ ಹೋರಾಟ..


ಕಲ್ಯಾಣದ ಕ್ರಾಂತಿಯನ್ನು ಮೀರಿಸಲಿರುವ ಬಲ್ಡೋಟ ಕಂಪನಿ ವಿರುದ್ಧದ ಹೋರಾಟ..


ಕಲ್ಯಾಣದ ಕ್ರಾಂತಿಯನ್ನು ಮೀರಿಸಲಿರುವ ಬಲ್ಡೋಟ ಕಂಪನಿ ವಿರುದ್ಧದ ಹೋರಾಟ..


ಕಲ್ಯಾಣದ ಕ್ರಾಂತಿಯನ್ನು ಮೀರಿಸಲಿರುವ ಬಲ್ಡೋಟ ಕಂಪನಿ ವಿರುದ್ಧದ ಹೋರಾಟ..


ಕಲ್ಯಾಣದ ಕ್ರಾಂತಿಯನ್ನು ಮೀರಿಸಲಿರುವ ಬಲ್ಡೋಟ ಕಂಪನಿ ವಿರುದ್ಧದ ಹೋರಾಟ..


ಕೊಪ್ಪಳ, 21 ಮಾರ್ಚ್ (ಹಿ.ಸ.)

ಆ್ಯಂಕರ್ : ಒಂದು ಕೋಟಿ ಜನರು ಕೇಳಿಸಿಕೊಂಡ ಮೇಲೆ, ಅದು ಕರ್ನಾಟಕ ಹಾಗೂ ದೇಶಾದ್ಯಂತ ಪ್ರತಿಧ್ವನಿಸಿ ಟಿವಿ ವಾಹಿನಿಗಳು, ಪತ್ರಿಕೆಗಳು, ಸಾಮಾಜಿಕ ಜಾಲತಾಣ ಮೀರಿ ಕೇಳಿಸಿ ಚರ್ಚೆ, ವಿಚಾರ ವಿನಿಮಯ ನಡೆದು 2024ರಿಂದಲೇ ಹೋರಾಟ ಪ್ರತಿಧ್ವನಿಸುತ್ತದೆ.

ಮೊನ್ನೆ ಅದರ ಪ್ರತಿಫಲವಾಗಿ ಕೊಪ್ಪಳ ಬಂದ್ ಯಶಸ್ವಿಯಾಗಿದೆ. ಇದು ಜನರ ಆಕ್ರೋಶದ ಸ್ಯಾಂಪಲ್ಲು. ರಸ್ತೆ ಚಳುವಳಿ, ಮನವಿಗಳ ಹಂತ ದಾಟಿ, ಈಗ ಈ ಕೂಗು 23-03-2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನತ್ತ ಹೊರಟಿದೆ. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಹಬ್ಬಲಿದೆ. ಸಾಹಿತಿ, ಶಿಕ್ಷಣತಜ್ಞ, ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಸಂಚಾಲಕತ್ವದಲ್ಲಿ, ಸಾವಿರಾರು ಜನ ಬೆಂಗಳೂರಿನ ಫ್ರೀಡಂ ಪಾರ್ಕ್ಲ್ಲಿ ಕೊಪ್ಪಳದ ಕಾರ್ಖಾನೆಗಳಿಂದ ಹೊರಡುವ ವಿಷಾನೀಲ ವಿರುದ್ಧ ಪ್ರತಿಭಟಿಸಿ, ರಾಜ್ಯ ಜನತೆಯ ಗಮನ ಸೆಳೆಯಲಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದ ಅನೇಕ ಮಂತ್ರಿಗಳಿಗೆ ಮನವಿಯನ್ನು ನೀಡುವ ಹಂತ ದಾಟಿ, ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ ಸೇರಿದಂತೆ, ಎಲ್ಲರಿಗೂ ಮನವಿ ಮಾಡಿದ್ದಾಗಿದೆ. ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರ್ಸ್ವಾಮಿ ಮತ್ತು ವಿ. ಸೋಮಣ್ಣ ಕೂಡ ಇದಕ್ಕೆ ಹೊರತಿಲ್ಲ.

ಅದರಲ್ಲೂ ಕೊಪ್ಪಳದ ಅರ್ಧ ಭಾಗದಲ್ಲಿ ವಿವಿಧ ರೀತಿಯ 200 ಕ್ಕೂ ಹೆಚ್ಚು ಕಾರ್ಖಾನೆಗಳು ಹುಟ್ಟಿವೆ. ಗಿಣಿಗೇರಾ, ಮುನಿರಾಬಾದ್, ಹುಲಿಗಿ, ಹಿರೇಬಗನಾಳ ಸುತ್ತಮುತ್ತಲು ಕಾರ್ಖಾನೆಗಳ ಗೂಡುಗಳಿವೆ. ತುಂಗಭದ್ರ ಡ್ಯಾಮ್ನ ನೀರಿನಿಂದಾಗಿ ಡ್ಯಾಮ್ ಸುತ್ತ ಈ ಕಾರ್ಖಾನೆಗಳ ಜಾಲ ಹರಡಿಕೊಂಡಿವೆ. ದಿನನಿತ್ಯ ಈ ಕಾರ್ಖಾನೆಗಳು ತುಂಗಭದ್ರೆಯ ಒಡಲಿಗೆ, ಕಾರ್ಖಾನೆ ಮಲಿನ ಜಲವನ್ನು ಬಿಟ್ಟು, ನೀರಿಗೆ ವಿಷ ಬೆರೆಸುತ್ತಿವೆ. ಒಂದು ಕಾಲದಲ್ಲಿ ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತು ಈ ಕಾರ್ಖಾನೆಗಳಿಂದಾಗಿ ಅರ್ಥ ಕಳೆದುಕೊಂಡಿದೆ.

ಕಾರ್ಮಿಕರಿಗೆ ಕೆಲಸ ಕೊಡುವ ನೆಪದಲ್ಲಿ, ಲಕ್ಷಾಂತರ ಜನರಿಗೆ ಉದ್ಯೋಗ ಕೊಡುವುದು ಸತ್ಯವಾಗಿದ್ದರು. ದೇಶದ, ರಾಜ್ಯದ ಭೂ ಸಂಪತ್ತು ಬಳಸಿಕೊಂಡು, ಉತ್ಪಾದಿಸಿದ ಉತ್ಪನ್ನವನ್ನು ಮಾರಿ ಮಾಲೀಕರು ಶ್ರೀಮಂತರಾಗಿದ್ದಾರೆ. ಈ ಮಾಲೀಕರು ನಗರಗಳಲ್ಲಿ ಐಷರಾಮಿ ಜೀವನ ನಡೆಸಿಕೊಂಡು ಸುಖವಾಗಿದ್ದಾರೆ. ಇವರು ಉಲ್ಲಂಘಿಸಿದ ಕಾನೂನಿಂದ, ಹೊಗೆ ಉಗುಳುವ ಕಾರ್ಖಾನೆಗಳು ಜನಸಾಮಾನ್ಯನಿಗೆ ರಾಕ್ಷಸ ಸಂತತಿಗಳಾಗಿವೆ.

ಅದರಲ್ಲೂ ಗಿಣಿಗೇರಾ ಹೋಬಳಿಯ 50 ರಿಂದ 100 ಹಳ್ಳಿಗಳಲ್ಲಿ, ಈ ವಿಷ ಗಾಳಿ ಹರಡಿ, ಮಾರಕ ರೋಗಗಳ ಸೃಷ್ಟಿಗೆ ಕಾರಣವಾಗಿದೆ. ಈ ಕಾರಣದಿಂದಾಗಿ ಪ್ರತಿಭಟನೆಯ ಕೂಗು, ಈಗ ಒಬ್ಬರಿಂದ ಕೋಟಿ ಜನರಿಗೆ ತಲುಪಿದೆ.

ಕಾರ್ಖಾನೆ ಧೂಳು ಹಾಗೂ ಹೊಗೆಗಳನ್ನು ಬಂಕರ್ಗಳಲ್ಲಿ ಅಥವಾ ಅವುಗಳನ್ನು ನಿವಾರಿಸಬಹುದಾದ ಕ್ರಮಗಳು ದುಬಾರಿಯನ್ನುವ ಕಾರಣಕ್ಕೆ, ಕಾರ್ಖಾನೆಗಳು ಈ ವಿಷ ಪೂರಿತ ಹೊಗೆಯನ್ನು ಬಹಿರಂಗವಾಗಿ ರಾತ್ರಿ ಬಿಡುತ್ತವೆ. ಇದು ಸುತ್ತಲಿನ ಹಳ್ಳಿಗಳ ಮನೆ, ನೀರು, ಬೆಳೆ ಬೆಳೆಯುವ ಜಮೀನು ಮತ್ತು ಜನರ ಮೇಲೆ ಬೀಳುವ ಈ ಹೊಗೆಯ ಧೂಳಿನಿಂದ ಜನರಲ್ಲಿ ಕೆಮ್ಮು, ಅಸ್ತಮ, ಕ್ಯಾನ್ಸರ್ ನಂತಹ ಹೆಮ್ಮಾರಿಗಳನ್ನು ಸೃಷ್ಟಿಸಿ, ಜನಜೀವನ ಅಸ್ವಸ್ಥಗೊಳಿಸಿದೆ.

ಇಲ್ಲಿ ಹೋರಾಟಕ್ಕೆ ನಿಂತ, ಜನರ ನಾಯಕತ್ವವಹಿಸಿದ ಅಲ್ಲಮಪ್ರಭು ಬೆಟ್ಟದೂರು ಜಂಟಿ ಕ್ರಿಯಾ ಸಮಿತಿಗೆ ಸಂಚಾಲಕರಾಗಿದ್ದು, ನೇರ ಮಾತಿನ, ಸೌಮ್ಯ ಸ್ವಭಾವದ ಹೋರಾಟಗಾರ, ಶಿಕ್ಷಣತಜ್ಞ. ಅಪಾರವಾದ ಅರವಿನ ಮನುಷ್ಯ. 83ರ ಈ ಕುದುರೆ, ಪ್ರಕರಣದ ಹೋರಾಟದಿಂದ ಬೆಳಕಿಗೆ ಬಂದವರು. ಗವಿಮಠ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ, ಪ್ರಿನ್ಸಿಪಾಲರಾಗಿ ಲಕ್ಷಾಂತರ ವಿದ್ಯಾರ್ಥಿಗಳ ಮೆಚ್ಚಿನ ಗುರು. ಇದು ಒಂದೆಡೆಯಾದರೆ. ದಿಟ್ಟ ನಿಲುವುಗಳಿಂದ ಕೊಪ್ಪಳ ಜನರ ಪರವಾಗಿ, ನೂರಾರು ಹೋರಾಟಗಳ ರೂವಾರಿ ಕೂಡಾ.

ಈ ವಿಷಯವಾಗಿ 2019 ರಲ್ಲಿ ಕೊಪ್ಪಳದ ಹೋರಾಟಗಾರರು ಮಾಲಿಕೆಯಲ್ಲಿ, ಗೋಕಾಕ್ ಸಮ್ಮೇಳನದಲ್ಲಿ ನಾನು ಇವರನ್ನು ಕುರಿತು, ವಿಚಾರ ಸಂಕಿರಣ ರೂಪಿಸಿದ್ದೆ. ಇವರ ಹೋರಾಟದ ಜೊತೆಗಾರರಲ್ಲಿ ಗವಿಸಿದ್ದ ಬಳ್ಳಾರಿ, ವಿಠ್ಠಪ್ಪ ಗೋರಂಟ್ಲಿ ಈಗ ಇಲ್ಲವಾದರೂ, ಅವರೆಲ್ಲರ ಸಹಕಾರ ಮರೆಯುವಂತಿಲ್ಲ. ಇನ್ನೋರ್ವ ಹಿರಿಯ ಎಚ್.ಎಸ್. ಪಾಟೀಲ್ ವಯೋವೃದ್ಧರಾಗಿ ಮನೆ ಸೇರಿದ್ದರು, ಮನೆಯಿಂದಲೇ ಇಂದಿನ ಆಧುನಿಕ ಸಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ.

ಇದಕ್ಕೆಲ್ಲ ಹೊಣೆಗಾರಿಕೆಯಾದದ್ದು ಬಲ್ದೋಟ ಕಾರ್ಖಾನೆ ವಿಸ್ತರಣೆ. ಎಂ.ಎಸ್.ಪಿ.ಎಲ್. ಹೆಸರಿನಲ್ಲಿದ್ದ ಈ ಕಾರ್ಖಾನೆ, ಕೊಪ್ಪಳ ತಾಲ್ಲೂಕಿನ ಅರ್ಧ ಭೂ ಭಾಗ ಖರೀದಿ ಮಾಡಿದೆ. ಕೆಲವರು ವಿರೋಧಿಸಿ, ತಮ್ಮ ಜಮೀನು ವಾಪಸ್ ಕೋರ್ಟ್ಗೆ ಹೋಗಿದ್ದಾರೆ. ಕೈಗಾರಿಕೆಗಳಿಗೆ ರತ್ನಗಂಬಳಿ ಹಾಸಿ, ಸ್ವಾಗತಿಸಿದ ರಾಜ್ಯ ಹಾಗೂ ಭ್ರಷ್ಟ ಹಾದಿಯ ಮೂಲಕ, ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಬಲ್ಡೋಟ ಕಾರ್ಖಾನೆ ವಿಸ್ತರಣೆಗೆ ಕೈಹಾಕಿದೆ. ನೋಡ ನೋಡುತಿದ್ದಂತೆ ಕೊಪ್ಪಳದ ಬಾಗಿಲಿಗೆ, ತನ್ನ ಕಾಂಪೌಂಡ್ ವಿಸ್ತರಿಸಿದೆ. ಕಾರ್ಖಾನೆಯ ವಿಸ್ತರಣೆಗೆ ಬೇಕಾದ ಸಲಕರಣೆಗಳ ಸಂಗ್ರಹ ಮಾಡಿ, ಒಳಗಿನಿಂದೊಳಗೆ ತನ್ನ ಕೆಲಸ ಆರಂಭಿಸಿದೆ. ಜನ ಜಾನುವಾರ ಬಳಸುತ್ತಿದ್ದ ಕೆರೆಯನ್ನು ತನ್ನ ಕಂಪೌಂಡ್ನೊಳಗೆ ಸೇರಿಸಿಕೊಂಡು ಬೀಗ ಜಡಿದಿದೆ.

ಇಲ್ಲಿಯವರೆಗೆ ಮೌನವಾಗಿದ್ದ ಈ ಕೊಪ್ಪಳ ಜನತೆ, ನಿಧಾನವಾಗಿ ಕೆಲ ಹಳ್ಳಿಗಳಲ್ಲಿ ಧೂಳು ಹಾಗೂ ವಿಷ ಮಿಶ್ರಿತ ಗಾಳಿ, ನೀರಿನ ಪ್ರಭಾವದ ಪರಿಣಾಮವಾಗಿ, ಪ್ರತಿಭಟನೆಯ ಕಾವು ಕಾಣಿಸಿಕೊಂಡಿತು. 2024ರಲ್ಲೆ ಪ್ರತಿಭಟನೆಗೆ ಮುಂದಾಗಿ ಎಲ್ಲಾ ಹಂತದ ಪ್ರತಿಭಟನೆ ಇತಿಹಾಸವಿದೆ.

ಬಲ್ಡೋಟ ಕಂಪನಿಗೆ ಕೇಂದ್ರ ಸರ್ಕಾರದ ಕುಮ್ಮಕ್ಕಿದೆ. ಆತನ ಸೂಟ್ಕೇಸ್ ಪ್ರಭಾವ, ಆತನ ವಿಮಾನ ನಿಲ್ದಾಣ ಬಳಕೆಯಿಂದಾಗಿ, ಕಾನೂನು ಮೀರಿ, ಬಲ್ಡೋಟ ಎಂಬ ದೈತ್ಯ, ತನ್ನ ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗಿದ್ದೆ ಪರಿಸರ ರಕ್ಷಣೆಗಾಗಿ ಈ ಹೋರಾಟ ಹುಟ್ಟಿಕೊಂಡಿದೆ. ಈ ಹೋರಾಟ ರೂಪಗೊಳ್ಳಲು ಕಾರಣ ಈ ಕಾರ್ಖಾನೆಗಳು. ಎಲ್ಲಾ ಕಾನೂನು ಮೀರಿ ಸೃಷ್ಟಿಸಿದ ಅನಾಹುತ. ಇದು ಬಲ್ಡೋಟನೊಬ್ಬನಿಂದಲೇ ಆಗಿದ್ದಲ್ಲ. ಈ ಪರಿಸರದಲ್ಲಿ 200ಕ್ಕೂ ಕಂಪನಿಗಳಿವೆ.

ಮೊದಲು ಗವಿಶ್ರೀಗಳ ಪ್ರವೇಶದಿಂದಾಗಿ, ಇದು ಗಂಭೀರ ಸ್ವರೂಪ ಪಡೆದು, ಬೆಟ್ಟದೂರು ಎಂಬ ಜಿಗಟನ ಕೈಗೆ ಸಿಕ್ಕು ಮುಂದುವರೆದಿದೆ. ಗವಿಶ್ರೀಗಳು ಈಗ ಮೌನವಹಿಸಿದ್ದಾರೆ. ರಾಜಕಾರಣಿಗಳು ಪಕ್ಷಭೇದ ಮರೆತು ಮುಖ ತೋರಿಸುತ್ತಿದ್ದಾರೆ. ಪತ್ರಿಕೆಗಳು ಜಾಹಿರಾತು ಹಂಗನ್ನು ತೊರೆದು ಬರೆಯ ತೊಡಗಿವೆ. ಹೋರಾಟದ ಕಾವು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ತಲುಪಿದೆ. ಈ ಹೋರಾಟದ ಮುಂಚೂಣಿಯಲ್ಲಿ ಅಲ್ಲಮಪ್ರಭು ಬೆಟದೂರು ಜೊತೆಯಲ್ಲಿ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ. ರಾಜು, ಡಿ.ಎಂ. ಬಡಿಗೇರ, ಡಿ.ಎಚ್. ಪೂಜಾರ್, ಡಾ. ಮಂಜುನಾಥ ಸಜ್ಜನ್, ಸಂತೋಷ್ ದೇಶಪಾಂಡೆ, ಚಂದ್ರು ಕವಲೂರು, ಶಿವಕುಮಾರ ಕುಕನೂರು, ರಮೇಶ ತುಪ್ಪದ, ಮಂಜುನಾಥ ಅಂಗಡಿ ಹಾಗೂ ಕೊಪ್ಪಳದ ಅನೇಕ ನಿವೃತ್ತ ಹಿರಿಯರು, ಸಮಾಜಸೇವಕರು, ಪತ್ರಕರ್ತರು, ರೈತರು ಮತ್ತು ಮಹಿಳೆಯರು ಗಟ್ಟಿ ಬೆಂಬಲ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ತಿಪ್ಪೇಸಾರಿಸುವ ಕೆಲಸವಾದರೆ, ಕೇಂದ್ರ ಇತ್ತ ತಲೆ ಹಾಕಿ ಕೂಡ ಮಲಗುತ್ತಿಲ್ಲ. ಹಾಗಾದರೆ ಈ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು..? ಇದು ಮಿಲಿಯನ್ ಡಾಲರ್ ಪ್ರಶ್ನೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನ ಹೋರಾಟದಲ್ಲಿ ಉತ್ತರ ಸಿಗುವುದೆ..?

ರಾಜಶೇಖರ್ ಹಿಟ್ನಾಳ್ ಎಂ.ಪಿ.ಯಾಗಿ ಆರಿಸಿ ಬಂದಾಗ, ಇದಕ್ಕೆ ಪರಿಹಾರವಾಗಿ ನಾನೊಂದು ಯೋಜನೆ ರೂಪಿಸಿದ್ದೆ. ಅದನ್ನು ಅವರ ಆತ್ಮೀಯರ ಬಳಿ ಹಂಚಿಕೊಂಡಿದ್ದೆ. ಸಂಸದರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಭೂ ಪ್ರದೇಶದಲ್ಲಿ, ಒಂದು ಪಂಚಾಯತಿಗೆ ಒಂದು ಲಕ್ಷದಂತೆ ಮರ ನೆಡುವ ಕಾರ್ಯದೊಂದಿಗೆ ಜನಸಂಪರ್ಕ ಸಭೆ ನಡೆಸಲಿ ಎಂದು ಯೋಜಿಸಿದ್ದೆ. ಈ ಮೂಲಕ ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಪರಿಸರ ಆಂದೋಲನ ನಡೆಯಲಿ ಎಂದಾಗಿತ್ತು. ಅವರನ್ನು ಭೇಟಿ ಮಾಡುವ ಪ್ರಯತ್ನ ಫೇಲಾಗಿದ್ದರಿಂದ ಸುಮ್ಮನಾದೆ.

ಬಲ್ದೋಟ ಕಾರ್ಖಾನೆ ಹಾಗೂ ಖರೀದಿಸಿದ ಭೂಮಿಯಲ್ಲಿ ಕಾಂಪೌಂಡ್ ಹೊರಗೆ ಒಳಗೆ ಖಾಲಿ ಜಾಗದಲ್ಲಿ, ಕಾರ್ಖಾನೆ ಸುತ್ತ ಆಮ್ಲಜನಕ ಸೂಸುವ ಒಂದು ಕೋಟಿ ಮರ ನೆಟ್ಟಿದ್ದರೆ, ಈ ಹೊತ್ತಿಗೆ ಮರಗಳು ಆಕಾಶದೆತ್ತರಕ್ಕೆ ಬೆಳೆದು, ಧೂಳು ಹರಡಲು ತಡೆಯೊಡ್ಡಬಹುದಾಗಿತ್ತು ಆಗಲಿಲ್ಲ. ಬಲ್ಡೋಟ ಕಂಪನಿ ತೋರಿಕೆಗಾಗಿ ಕೆಲಸ ಮಾಡಿದ್ದರಿಂದ, ಅದು ಪರಿಣಾಮ ಬೀರಲಿಲ್ಲ. ಗಿಣಿಗೇರಾ ಹಾಗೂ ಈ ಕಾರ್ಖಾನೆಗಳ ಸ್ಥಳಗಳಲ್ಲಿ, ಈಗಲೂ ಒಂದು ಕೋಟಿ ಮರ ನೆಟ್ಟು ನೀರು ಹಾಕಿ ಬೆಳೆಸಬೇಕಿದೆ. ಎರಡು ಮಳೆಗಾಲದವರೆಗೆ, ನೀರು, ಗೊಬ್ಬರ ನೀಡಿದರೆ ಒಂದು ಕೋಟಿ ಮರ, ಈ ದೂಳಿಗೆ ಮುಕ್ತಿ ಕೊಡಬಲ್ಲವು.

ರೈತರಿಗೆ ತಮ್ಮ ಜಮೀನ್ನಲ್ಲಿ ಕಾವಲು ಅರಣ್ಯ ಯೋಜನೆ ರೂಪಿಸಿ, ಎಕರೆಗೆ 50 ಮರದಂತೆ, ಮರಗಳನ್ನು ನೆಡುವ ಕೆಲಸವಾಗಬೇಕಿದೆ. ಕಾರ್ಖಾನೆಗಳ ಒಕ್ಕೂಟದಿಂದ ಮತ್ತೊಂದು ಕೋಟಿ ಮರ ನೆಡೆಸಿ, ಪರಿಸರ ಕಾಪಾಡಬಹುದು. ಇಲ್ಲಿ ಸಸಿ ನೆಡುವ ಬದಲು, ಮರ ನೆಡಬೇಕಿದೆ. (ಸಸಿ ತಿಂಗಳ ಆಯುಸ್ಸು, ಆದರೆ ಮರಕ್ಕೆ ವರ್ಷ ಆಯಸ್ಸು) ಮರಗಳಿದ್ದರೆ ನೀರು-ಗೊಬ್ಬರವನ್ನು ಎರಡು ಮಳೆಗಾಲ ಒದಗಿಸಿದರೆ, ಕೊಪ್ಪಳದ ಅರ್ಧ ಭಾಗ ಹರಿದ್ವರ್ಣದಿಂದ ಕಂಗೊಳಿಸಬಹುದಾಗಿತ್ತು. ಇಲ್ಲಿ ಹಾದು ಹೋದ ರಸ್ತೆಯ ಎಡ-ಬಲ ಮತ್ತು ಹೈವೆಯಲ್ಲಿ ವೃಕ್ಷ ಸಂಪತ್ತಿನ ಕೋಟ್ಯಾಂತರ ಮರಗಳನ್ನು ಹಚ್ಚಬಹುದಾಗಿದೆ.

ಕಾರ್ಖಾನೆಗಳ ಪರವಾದ ಹೋರಾಟ ಮಾಡುವ ಒಂದು ಮಾರ್ಗ, ರಾಜಕಾರಣಿಗಳ ಕಾಲು ಹಿಡಿದು 5 ಕೋಟಿ ಮರ ಈ ಪರಿಸರದಲ್ಲಿ ನೆಡಲಿ ಎಂದು ಆಶಿಸೋಣ. ಬಲ್ಡೋಟ ಕಂಪನಿಯ ವಿಸ್ತರಣೆ ನಿಲ್ಲಿಸಲಿ. ಇಲ್ಲದಿದ್ದರೆ ಹೋರಾಟದ ಜಟ್ಟಿ ಅಲ್ಲಮಪ್ರಭು, ಇನ್ನೊಂದು ಕಲ್ಯಾಣ ಕ್ರಾಂತಿಯ ಜನಕರಾಗಬಹುದು ಎಚ್ಚರವಿರಲಿ..?

ಲೇಖಕರು:

ರಮೇಶ ಸುರ್ವೆ, ಹಿರಿಯ ಪತ್ರಕರ್ತರುೊ

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande